অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲಂಬಾಣಿಗಳ ಐತಿಹಾಸಿಕ ಹಿನ್ನಲೆ

ಲಂಬಾಣಿಗಳ ಐತಿಹಾಸಿಕ ಹಿನ್ನಲೆ

ಲಂಬಾಣಿಗರ ಐತಿಹಾಸಿಕ ಹಿನ್ನಲೆಯನ್ನುನೋಡಿದಾಗ ಕೆಲವು ಇತಿಹಾಸಕಾರರು ಮತ್ತು ವಿಮರ್ಶಕರು ಕಾಲ ಕಾಲಕ್ಕೆ ಅವರ ಬಗ್ಗೆ ಪ್ರಾಸ್ತಾಪಿಸಿರುವ ದಾಖಲೆಗಳು ನಮಗೆ ದೊರೆಯುತ್ತವೆ. ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಐತಿಹಾಸಿಕ ವಿಭಾಗದಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ. ಫೇಸರ್ ಬೀಕು ಎಂಬವರು ತಮ್ಮ ಗ್ರಂಥದಲ್ಲಿ ಅವರೇ ಹೇಳಿರುವಂತೆ ಇಂಡಿಯಾ ದೇಶದ ಬಂಜಾರ ಜನಾಂಗ ರಾಥೋಢ್ (ರಜಪೂತ ಒಂದು ಒಳ ಪಗಂಡ) ಅಂದರೆ ಭೂಕ್ಯವರ್ಟನ ಬಿಕಾವತ್ ಗೋತ್ರದವರಿರಬಹುದೆಂದು ಅಭೀಪ್ರಾಯ ಪಡುತ್ತಾರೆ. ಹಾಗೂ 19ನೇ ಶತಮಾನದ ಪೂರ್ವದಲ್ಲಿ ಬ್ರಿಟೀಷರು ನಡೆಸಿದ ಜನಸಂಖ್ಯೆಯ ಸಮೀಕ್ಷೆಯ ಪ್ರಕಾರ ರಜಪೂತ ಜನಾಂಗದಲ್ಲಿ ಸರಿ ಸುಮಾರು (800) ಎಂಟನೂರು ಪಂಗಡಗಳನ್ನು ಗುರುತಿಸಿದ ಎನ್ನಲಾಗಿದೆ. ಅವರಲ್ಲಿ ಲಂಬಾಣಿಗರು ಸಹ ಒಬ್ಬರೆಂದು ಹೇಳಲಾಗಿದೆ. ಕ್ರಿ.ಪೂ.326ರಲ್ಲಿ ಭಾರತದ ಮೇಲೆ ದಂಡೆಯಾತ್ರೆ ಮಾಡಿದ್ದ ಅಲೆಕ್ಸಾಂಡರ್ ಲಂಬಾಣಿಗರ ಒಂಟೆಗಳನ್ನು ಯುದ್ಧಕ್ಕೆ ಉಪಯೋಗಿಸಿದ್ದನೆಂಬ ಇತಿಹಾಸವಿದೆ.

ಪ್ರಸಿದ್ಧ ಇತಿಹಾಸಕಾರ ಡೀ.ಡಿ.ಕೋಸಂಬಿ ಅವರ ಲೇಖನದಂತೆ ಪ್ರಾಚೀನ ಕಾಲದಲ್ಲಿ ದೊಡ್ಡ ದೊಡ್ಡ ಕಾರ್ ವಾನ್ ಗಳು ವ್ಯಾಪರದಲ್ಲಿ ನಿರತವಾಗಿದ್ದವೆಂದೂ ಬೌದ್ಧ ಧರ್ಮ  ಅವನತಿ ಹೊಂದಿದ್ದಾಗ ಅಂದಿನ ಬಣಗಳು ಚಿದ್ರವಾಗಿ ಸಣ್ಣ ಸಣ್ಣ ಗುಂಪುಗಳಾಗಿದ್ದವರಲ್ಲಿ ಲಂಬಾಣಿಗರೂ ಸಹ ಒಬ್ಬರಾಗಿದ್ದಾರೆಂದಿದ್ದಾರೆ. ಕ್ರಿ.ಪೂ 324ರಲ್ಲಿ ಸ್ಥಾಪನೆಯಾದ ಮೌರ್ಯ ಸಾಮ್ರಾಜ್ಯದಲ್ಲಿ ಬಂಜಾರರೂ ಸಹ ವ್ಯಾಪಾರಿಗಳಾಗಿದ್ದರು ಎಂದು ತಿಳಿದುಬರುತ್ತದೆ. ಅಂದು ಲಂಬಾಣಿಗರಿಗೆ ಗುರು ಸಕ್ರಸಂದರ ಗುರು ಬಾವಾಜಿಯವರು ಸಾಲವಾಗಿ ನೀಡಿದ ಏಳುವರೆ ಕಚ್ಚರ್ ಮಾಯ ಎಂಬ ನಾಣ್ಯದ ಚಲಾವಣೆ ಮೌರ್‍ಯರ ಕಾಲದವೆಂದು ತಿಳಿದು ಬರುತ್ತದೆ. ನಂತರದ ದಿನಗಳಲ್ಲಿ ದೇಶಿಯ ರಾಜರುಗಳ ಸೈನಿಕರುಗಳಿಗೆ ಮದ್ದುಗುಂಡು ಹಾಗೂ ದವಸ ಧಾನ್ಯಾದಿಗಳನ್ನು ಸರಬರಾಜು ಮಾಡುತ್ತಿದ್ದರು. 17ನೇ ಶಾತಮಾನದಲ್ಲಿ ಪೋಮಾಜಿನಾಯ್ಕ್ ಮತ್ತು ಗೋವಿಂದನಾಯ್ಕ್ ಭೂಕ್ಯಾ ಎಂಬುವರು ತಮ್ಮ 15000 ಎತ್ತುಗಳ ಮೇಲೆ ದವಸ ಧಾನ್ಯಗಳನ್ನು ಪೇಶ್ವೆ ಸೈನಿಕರಿಗೆ ತಲುಪಿಸಲು ಕರಾರು ಮಾಡಿಕೊಂಡಿದ್ದರೆಂದು ಇತಿಹಾಸ ತಿಳಿಸುತ್ತದೆ. ಕ್ರಿ,ಶ.1630ರಲ್ಲಿ ಅಸಫ್ ಖಾನ್ ಮತ್ತು ಅವನ ವಜೀರ ಷಹಜಾನ್ ಅವರೊಂದಿಗೆ ತಮ್ಮ ದನಕರುಗಳಿಗೆ ಮೇವು ಸಿಗದಿದ್ದಾಗ ಜಂಜಿ, ಭಂಗಿ, ಭೂಕ್ಯಾರು ಮಾಡಿಕೊಂಡು ಒಪ್ಪಂದದ ತಾಮ್ರ ಪತ್ರವು ಈ ಕೆಳಗಿನಂತಿರುತ್ತದೆ.

ರಂಜನ್ ಕಿಪಾನೀ,

ಚಪ್ಪರ್ ಕಾ ಫಾಂಸ್,

ದಿನ್ ಕೆ ತೀನ್-ಕೂನ್ ಮಾಪ್

ಅವೋರ್ ಜಹಾಂಅಸಾಫ್ ಝೆ ಕೇ ಪೋರ

ವಹಾಂ ಭಂಗೀ- ಝಂಗೀಕೆ ಬೈಲ್ ಕಡೆ

ಈಬೈಲ್ ನ ಕನ್ನಡದ ಅರ್ಥ ನಿಮಗೆ ನೀರು ಎಲ್ಲಿಯೂ ಸಿಗದಿದ್ದರೆ ನೀವು ನನ್ನ ಹೂವಿನ ಕುಂಡಗಳಿಂದ ಬೇಕಾದರು ನೀರನ್ನು ತೆಗೆದುಕೊಳ್ಳಬಹುದು.ನಿಮ್ಮ ಎತ್ತುಗಳಿಗೆ ಹುಲ್ಲು ಸಿಗದಿದ್ದರೆ ಜೋಪಡಿ ಮೇಲಿನ ಹುಲ್ಲನ್ನೆ ತೆಗೆದುಕೊಳ್ಳಿ. ನೀವು ದಿನಕ್ಕೆ ಮೂರು ಬಾರಿ ಖೂನಿ ಮಾಡಿದರೂ ಮಾಪಿ ದೊರೆಯುತ್ತದೆ. ಆದರೆ ಒಂದು ಷರತ್ತು ನಿಧಿಸಲಾಗಿದೆ. ಎಲ್ಲೆಲ್ಲಿ ನನ್ನ ಸೈನ್ಯವಿರುತ್ತದೆಯೋ ಅಲ್ಲಿ ನಿಮ್ಮ ಹೇರು ಎತ್ತುಗಳು ಹಾಜರಿರಬೇಕು ಎಂಬುದಾಗಿರುತ್ತದೆ.

ನಂತರದ ದಿನಗಳಲ್ಲಿ ವ್ಯಾಪಾರದಲ್ಲಿ ಹಲ್;ಅವಾರು ಏರುಪೇರುಗಳನ್ನು ಬಂಜಾರರು ಅನುಭವಿಸಿದರು. ಕ್ರಿ.ಶ.1754ರಲ್ಲಿ ಲಾಲಾನಾಯಕ್ ಎಂಬುವರು ತಮ್ಮ ಎತ್ತುಗಳ ಮೇಲೆ ದವಸ ಧಾನ್ಯಗಳನ್ನು ಹೇರಿಕೊಂಡು ಬರುತ್ತಿದ್ದಾಗ ದರೋಡೆಕೋರರು 4000 ಹೇರುಗಳನ್ನು ಕಸಿದುಕೊಂಡು 1500 ಹೇರುಗಳನ್ನು ಮತ್ತೆ ಕೊಡಬೇಕೆಂದು ಒಪ್ಪಂದ ಮಾಡಿಕೊಂಡರಂತೆ.

ಕ್ರಿ.ಶ. 1628ರಲ್ಲಿ ಭಾರತವನ್ನು ಸಂದರ್ಶನ ಮಾಡಿದ ಫೀಟರ್ ಮಂಡಿ ಎಂಬ ವಿದೇಶಿ ಹೇಳುವ ಪ್ರಕಾರ, ಅವರು ಹೋಗುತ್ತಿದ್ದ ಮಾರ್ಗದ ತಾಂಡವೊಂದರಲ್ಲಿ 14000 ಎತ್ತುಗಳ ಮೇಲೆ ದವಸ ಧಾನ್ಯಗವನ್ನು ಹೇರಿಕೊಂಡು ಹೊರಟ್ಟಿದ್ದರು. ಇವರು ಅಗ್ಗವಾದ ಕಡೆಕೊಂಡು ತುಟ್ಟಿಯಾದ ಕಡೆ ಮಾರುತ್ತಾರೆ. ಇವರು ಬಂಜಾರರು ಆಗಿದ್ದು ಪುರುಷರಷ್ಟೆ ಮಹಿಳೆಯರು ಗಟ್ಟಿಮುಟ್ಟದಾವರು. ಸಂದರ್ಭ ಒದಗಿ ಬಂದರೆ ಮಹಿಳೆಯರು ಸಹ ಹೋರಾಡಬಲ್ಲವರೆಂದಿದ್ದಾರೆ. ಅಷ್ಟೆಯಲ್ಲದೆ ಬಿಷಪ್ ಹೇಬರ್ ಎನ್ನುವ ಇನ್ನೊಬ್ಬ ವಿದೇಶಿಯನು ಕೂಡ ವ್ಯಾಪಾರಿಗಳಾದ ಬಂಜಾರರು ಬಿಲ್ಲು,ಬಾಣ್, ಖಡ್ಗ, ಗುರಾಣಿಗಳೊಂದಿಗೆ ಸನ್ನದ್ಧರಾಗಿರುತ್ತಾರೆ ಎಂದಿದ್ದಾರೆ.

ಬಂಜಾರ ಜನಾಂಗದ ಮೊದಲು ಐ.ಎ.ಎಸ್. ಅಧಿಕಾರಿಯವರಾದ ದಿವಂಗತ ವೈ. ರೂಪ್ಲನಾಯ್ಕ ರ್ವರ್ “ರಂಗುರಂಗಿನ ಬಂಜಾರ” ಎಂಬ ಪುಸ್ತಕದಲ್ಲಿ ಅವರು ಪ್ರಸ್ತಾಪಿಸಿರುವಂತೆ ಡೆಲ್ಲಿಯಲ್ಲಿ ಪಾರ್ಲಿಮೆಂಟ್ ಭವನಕ್ಕೆ ಮತ್ತು ಸೆಂಟ್ರಲ್ ಸೆಕ್ರೆಟೇರಿ ಸಮೀಪದಲ್ಲಿರುವ “ರಿಖಾಬ ಗಂಜ್”ಗುರುದ್ವಾರದಲ್ಲಿರುವ ಒಂದು ಅಪೂರ್ವವಾದ ಬರವಣಿಗೆಯ ಪ್ರಕಾರ ಲಕ್ಕೀಷಾ ವಂಜಾರ ಎಂಬ ಒಬ್ಬ ವಡತ್ಯಾ ಗೀತ್ರದ ಬಂಜಾರನು ಸಿಖ್ಖರ ಒಂಬತ್ತನೇಯ ಗುರು ತೇಗೆ ಬಹುದ್ದೂರ್‍ನ ರುಂಡವಿಲ್ಲದ ದೇಹವನ್ನು ಎತ್ತಿಕೊಂಡು ಮೊಗಲರ ಕೈಯಿಂದ ತಪ್ಪಿಸಿಕೊಂಡು ಹೋಗಿ ಈಗ ಗುರುದ್ವಾರವಿರುವ ಜಾಗದಲ್ಲಿದ್ದ ತನ್ನ ಮನೆಯಲ್ಲಿ ಇಟ್ಟು ಬೆಂಕಿಯಿಟ್ಟು ವಿಧಿವತ್ತಾಗಿ ಶವಸಂಸ್ಕಾರ ಮಾಡಿದನೆಂಬ ಲಿಖಿತವಿದೆ.ಆ ಗುರುವಿನ ಇನ್ನೊಬ್ಬ ಬಂಜಾರ ಶಿಷ್ಯನಾದ ಭಾಯೀಜೇತ(ಜೇತವತ್) ಎಂಬುವನು ಗುರುವಿನ ರುಂಡವನ್ನು ಎತ್ತಿಕೊಂಡು ಚಾಂದನಿ ಚೌಕದಿಂದ ಮೊಗಲರ ಮಧ್ಯೆ ನುಗ್ಗಿ ಯಾರಿಗೂ ಸಿಕ್ಕದೇ ಆ ಗುರುಗಳ ಒಂಬತ್ತು ವರ್ಷದ ಮಗ ಹತ್ತನೇ ಸಿಖ್ಖರ ಗುರು ಗೋವಿಂದರು ಇದ್ದ ಆನಂದಪುರಿ ಸಾಹೇಬ್ ಎಂಬ ಊರಿಗೆ ಕುದುರೆಯ ಮೇಲೆ ಹೋಗಿ ಅವರ ಮುಂದೆ ತಂದೆಯ ತಲೆಯನ್ನು ಇಟ್ಟು ಮೊಗಲರನ್ನು ಭಾರತದಿಂದ ಓಡಿಸುವಂತೆ ಪ್ರಮಾಣ ಮಾಡಿಸಿದನಂತೆ. ಇಂತಹ ಐತಿಹಾಸಿಕ ವಿಷಯಗಳು ದಾಖಲೇ ಸಹಿತ ಬೆಳಕು ಚೆಲ್ಲುತ್ತವೆ. ಇದು ಸಿಖ್ ಮತ್ತು ಬಂಜಾರ ಯೋಧರು ಮೊಘಲರ ವಿರುದ್ಧ ಹೋರಾಡಿದ ಚಾಮ್ ಕೌರ್ ಯುದ್ಧ ಇತಿಹಾಸದಲ್ಲಿ ಬಹಳ ಮಹತ್ವ ಪಡೆದಿದೆ. ರೂಪ್ಲನಾಯ್ಕರು ಅಮೃತಸರದ ಸಿಖ್ಖರ ಗುರುದ್ವಾರಕ್ಕೆ ಹೋಗಿದ್ದಾಗ ಒಬ್ಬ ಮುಖ್ಖನ್ ಷಾ ಲುಬಾನ್ ಎಂಬ ಬಿಂಜ್ರಾವತ್ (ವಿಂಜ್ರಾವತ್) ಪಂವಾರನು ಸಿಖ್ಖರ ಸಾಧುಗಳು ಇದ್ದ ಗುರುದ್ವಾರದಲ್ಲಿ ನಿಜವಾದ ಸಿಖ್ಖರ ಗುರುವನ್ನು ಕಂಡುಹಿಡಿದ, ಒಂದು ದೊಡ್ಡ ಫೋಟೋವನ್ನು ಅಲ್ಲಿ ಒಳಗಡೆ ನೋಡಿಫರಂತೆ ಈ ಮುಖ್ಖನ್ ಷಾ ಬಂಜಾರರು ಹಡಗಿನ ಮೂಲಕ ವ್ಯಾಪಾರ ಮಾಡುತ್ತಿದ್ದನೆಂಬ ಕತೆಯನ್ನು ಹೇಳಿದರಂತೆ. ಬಂಜಾರರು ಕೇವಲ ದೇಶಗಳಲ್ಲಷ್ಟೆಯಲ್ಲಿದೆ. ವಿದೇಶಗಳಲ್ಲೂ ಸಹ ವ್ಯಾಪಾರ ಮಾಡುತ್ತಿದ್ದರೆಂಬುದು ಕಂಡು ಬರುತ್ತದೆ.

ಇವರ ಪ್ರಾಮಾಣಿಕತೆಯ ಬಗ್ಗೆಯು ಸಹ ಇತಿಹಾಸದಲ್ಲಿ ಈ ರೀತಿಯಾಗಿ ತಿಳಿಸಿದೆ. ಕ್ರಿ,ಶ. 1792ರಲ್ಲಿ ಟಿಪ್ಪುಸುಲ್ತಾನ್ ಬೀಮಾನಾಯ್ಕ ಎಂಬುಚರೊಂದಿಗೆ ದವಸ ಧಾನ್ಯಗಳನ್ನು ಕೊಡಲು 150000 ರೂ ಗಳ ಮುಂಗಡ ಹಣವನ್ನು ಒಪ್ಪಂದವಾಗಿ ಪಡೆದಿದ್ದರು, ಆದರೆ ಬ್ರಿಟೀಷ ರ ಕಿರುಕುಳದಿಂದಾಗಿ ಸುಲ್ತಾನರಿಂದ ಸರಿಯಾದ ಸಹಾಕಾರ ದೊರೆಯದಿದ್ದರೂ ಸಹ 10000 ಎತ್ತುಗಳ ಮೇಲೆ ದವಸ ಧಾನ್ಯವನ್ನು ಹೇರಿಕೊಂಡು ಮೈಸೂರಿಗೆ ಬರುವೊತ್ತಿಗೆ ಯುದ್ಧ ಮುಗಿರುತ್ತದೆ. ಅಲ್ಲಿ ದವಸ ಧಾನ್ಯಗಳ ಬೆಲೆ ಕುಸುದಿದ್ದರೂ ಸಹ ಅವುಗಳನ್ನು ಮಾರಿ ತಮ್ಮ  ಹಿಂದದಿರುಗಿಸಿದರು ಹಾಗೂ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಭೀಮಾನಾಯಕರಿಗೆ ಸುಲ್ತಾನರು ಉಡುಪು, ಚಿನ್ನದ ಕತ್ತಿ, ಹಾಗೂ ಆನೆಯೊದನ್ನಿತ್ತು ಸನ್ಮಾನಿಸುತ್ತಾರೀಂದು ಅಂಶ ಇತ್ತೀಚಿಗೆ ಲಭ್ಯವಾಗಿರುತ್ತದೆ.

ಹೆಸರಾಂತ ಸಂಶೋಧಕ ಶ್ರೀ ಎಂ ಚಿದಾನಂದಮೂರ್ತಿಯವರು ತಮ್ಮ ಪ್ರಬಂಧದಲ್ಲಿ ಬರೆದಿರುವಂತೆ “ಬಂಜಾರ ಜಾತಿಯಲ್ಲಿ ಭಿಕ್ಷುಕರಿಲ್ಲ” ಭಿಕ್ಷೆ ಬೇಡುವುದು ಅತಿ ಹೀನ ಕೃತ್ಯವೆಂದು ಬಂಜಾರರು ತಿಳೀಯುತ್ತಾರೆ. ಇವರಿಗೆ ತಮ್ಮ ಜನಾಂಗದ ಮೇಲೆ ಅಭೀಮಾನವಿರುವುದಿಂದಲೇ ಇವರಲ್ಲಿ “ಮತಾಂತರ ಪ್ರಕರಣ ಬಹಳಷ್ಟು ಕಡಿಮೆ ಎಂದಿದ್ದಾರೆ.”

ಆದರೆ ಇವರಿಗೆ ಬಂದ ದುರ್ಗತಿಯೆಂದರೆ ಬ್ರಿಟಿಷರು ತಂದ ಆಧುನಿಕ ಸಾರಿಗೆ ಸಂಪರ್ಕ ಮಾಧ್ಯಮಗಳು ಇವರ ವ್ಯಾಪಾರದ ಮೇಲೆ ಅಘಾತವನ್ನುಂಟುಮಾಡುತ್ತದೆ. ಲಕ್ಷಾಂತರ ಹೇರುಗಳನ್ನು ಸಾಕುವುದಕ್ಕಾಗಿ ತಮ್ಮ ಹೊಟ್ಟೆ ಬಟ್ಟೆಗಾಗಿ ತೊಳಲಾಟ ಸುರುವಾಗುತಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಭವಿಸಿದ ಕ್ಷಾಮ, ಬಡತನ ಮೊದಲಾದ ಸಂದರ್ಭದಲ್ಲಿ ಲಕ್ಕೀಶ ಬಂಜಾರ ಹಾಗೂ ಸೇವಾಬಾಯ ಸಾದು ಇವರುಗಳು ಬ್ರಿಟಿಷರ ದವಸ ಶಾನ್ಯಗಳನ್ನು ತಂದು ಹಂಚಿ ಭಾರತಿಯರಿಗೆ ನೆರವಾಗುತ್ತಿದ್ದಂತೆಯೇ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಲಂಬಾಣಿಗರನ್ನು ನಿಶೇಧಿತ ಗುಂಪುಗಳಿಗೆ ಸೇರಿಸಿ ಇವರ ತಾಂಡಗಳಿಗೆ ಯಾವುದೇ ಸೌಲತ್ತುಗಳನ್ನು ಒದಗಿಸದೆ. ಷರತ್ತು ವಿಧಿಸಿ ಇವರನ್ನು ಶೋಷಿಸಲಾರಂಭಿಸಿದ್ದರು ಎಂಬುದು ತಿಳಿದ ವಸ್ತುಸ್ಥಿತಿಯಾಗಿದೆ.

ಭಾರತ ಸ್ವಾತಂತ್ರ್ಯ ಕಂಡ ಮೇಲೆ ಆಯಾ ರಾಜ್ಯದಲ್ಲಿ ಅಲ್ಲಿನ ವಸ್ತುಸ್ಥಿತಿಗೆ ಅನುಗುಣವಾಗಿ ಆರ್ಥಿಕ ಸಂಕಷ್ಟವನ್ನು ಅರಿತು ಸವಲತ್ತುಗಳನ್ನು ಒದಗಿಸುವಲ್ಲಿಯೂ ಸಹ ಸರ್ಕಾರ ಒಂದೇ ತೆರನಾದ ಅನುಕೂಲ ಮಾಡಿಕೊಡುವಲ್ಲಿ ದೋಷವೆಸಗಿರುವುದರಿಂದಲೇನೋ, ದುರಾದೃಷ್ಟಕ್ಕೆ ಆಂಧ್ರ ಮತ್ತು ಕರ್ನಾಟಕದ ಕೆಲವು ತಾಂಡಾದ ಮಹಿಳೆಯರು ತಮ್ಮ ಹೆತ್ತ ಕರುಳಿನ ಕುಡಿಯನ್ನು ಮಾರಿ ಹಣ ಪಡೆದು ತಮ್ಮ ಬಡತನದ ಬೇಗೆಯನ್ನು ತೀರಿಸಿಕೊಂಡರೆಂಬ ವಿಚಾರ ಬಹಳ ದುಃಖಕರವಾಗಿದೆ.

ಭಾರತ ರಾಜ್ಯಗಳಲ್ಲಿ ನೋಡುವುದಾದರೆ ಸರ್ಕಾರದ ಸವಲತ್ತುಗಳಲ್ಲಿ ವ್ಯತ್ಯಾಸವಿರುವುದನ್ನು ಕಾಣಬಹುದು. ಒರಿಸ್ಸಾ,ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಗುಜರಾತಗಳಲ್ಲಿ, ಪರಿಶಿಷ್ಟ ಬುಡಕಟ್ಟಿಗೆ, ಕರ್ನಾಟಕ,ರಾಜಸ್ಥಾನ , ಹಿಮಾಚಲ ಪ್ರದೇಶ, ಕೇರಳಗಳಲ್ಲಿ ಪರಿಶಿಷ್ಟ ಜಾತಿಗೆ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಅವರ್ಗೀಕೃತ ಜಾತಿಗೆ ಇನ್ನುಳಿದ ತಮಿಳುನಾಡು ಸೇರಿದಂತೆ ಉಳಿದ ಕ್ಡೆಗಳಲ್ಲಿ ಓಬಿಸಿಗೆ ಅದರ್ ಬ್ಯಾಕ್ ವರ್ಡ್ ಕ್ಯಾಸ್ಟ್ ಯವರಾಗಿ ಪರಿಗಣಿತರಾಗಿದ್ದಾರೆ.

ಹೀಗೆ ಭಾರತದಲ್ಲಿರುವ ಲಂಬಾಣಿ ಬಂಜಾರರನ್ನು ಆಯಾ ಪ್ರಾಂತ್ಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲ್ಪಡುವುದರಿಂದ ಒಂದೇ ತೆರೆನಾದ ಸೌಲತ್ತುಗಳಿಂದ ವಂಚಿತರಾಗಿದ್ದಾರೆ. ಉದಾಹರಣೆಗೆ ಗುಜರಾತ್ ನಲ್ಲಿ ಇವರನ್ನು ಬಂಜಾರ, ಚಾರಣರೆಂದು ಕರೆದರೆ ರಾಜಸ್ಥಾನದಲ್ಲಿ ಬಂಜಾರ, ಲದನೀಯ, ಗಮಾಳಿಯಾ, ಗವಾರಿಯಾ ಎಂದು , ತಮಿಳುನಾಡಿನಲ್ಲಿ ಸುಗಾಲ, ಲಂಬಾಡಿ, ಬಂಜಾರ ಎಂದು, ಕರ್ನಾಟಕದಲ್ಲಿ ಲಂಬಾಣಿ, ಲಮಾಣಿ, ಬಂಜಾರ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಹಲವು ಕಡೆಗಳಲ್ಲಿ ಇವರ ಆರ್ಥಿಕ ಪರಿಸ್ಥಿತಿ ತುಂಬಾ ಶೋಚನೀಯವಾಗಿದ್ದು ಅದರ ಕಡೆ ಸರ್ಕಾರ ಮತ್ತು ಸಾರ್ವಜನಿಕ ದಯಾಳುಗಳು ಗಮನ ಹರಿಸುವ ಅನಿವಾರ್ಯತೆ ಕಂಡುಬರುತ್ತದೆ.

ಕೋಡುಗೆದಾರರು : ಪಳನಿಸ್ವಾಮಿ ಜಾಗೇರಿ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate