অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಧಾರ

ಆಧಾರ

ಸೇವೆ ಆಯ್ಕೆ ಆಧಾರ
ಸೇವೆ ಪೂರೈಕೆದಾರರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
ಈ ಸೇವೆ ಪಡೆಯಲು ಅರ್ಹತೆಗಳು 1.ಕನಿಷ್ಠ 40% ವಿಕಲಚೇತನತೆ ಹೊಂದಿರಬೇಕು
2.10 ವರ್ಷಗಳ ಕಾಲ ಕನಿಷ್ಠ ಕರ್ನಾಟಕ ನಿವಾಸಿಯಾಗಿರಬೇಕು ಅಥವಾ ರಾಜ್ಯದ 10 ವರ್ಷಗಳ ಕನಿಷ್ಠ ಅಧ್ಯಯನದ ಪ್ರಮಾಣಪತ್ರವನ್ನು ಒದಗಿಸಬೇಕು.
3.ಅಂಗವಿಕಲ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ನಗರ ವಾಸಿಯಾಗಿದ್ದಲ್ಲಿ ರೂ.24.000/- ಮತ್ತು ಗ್ರಾಮೀಣ ವಾಸಿಯಾಗಿದ್ದಲ್ಲಿ ರೂ.11.500/-ಗಳನ್ನು ಮೀರಿರಬಾರದು
4.ಈ ಯೋಜನೆಯ ಸೌಲಭ್ಯ ಪಡೆಯಲು ಸುಮಾರು 18 ರಿಂದ 58 ವರ್ಷದ ವಯೋಮಿತಿ ಇರುವ ನಿರುದ್ಯೋಗಿ ವಿಕಲಚೇತನ ವ್ಯಕ್ತಿಗಳು ಅರ್ಹರಿರುತ್ತಾರೆ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ
ದಾಖಲೆಗಳ ವಿವರಗಳು
1.  ಆದಾಯ ಪ್ರಮಾಣ ಪತ್ರ
2.  ಆಧಾರ್ ಕಾರ್ಡ್
3.  ವಿಕಲಚೇತನರ ಗುರುತಿನ ಚೀಟಿ
4.   ಉದ್ಯೋಗದ ಸ್ವಯಂ ಘೋಷಣ ಪತ್ರ
5.   ೧೦ ವರ್ಷಗಳ ವಾಸಸ್ಥಳದ ಧೃಢೀಕರಣ ಪ್ರಮಾಣ ಪತ್ರ
6.   ಸಕ್ಷಮ ಪ್ರಾಧಿಕಾರದಿಂದ ಸಣ್ಣ ವ್ಯಾಪಾರ ಮಾಡಲು ಪೆಟ್ಟಿಗೆ ಅಂಗಡಿಗಳನ್ನು ಇಡಲು ನಿರುಪೇಕ್ಷಣಾ ಪ್ರಮಾಣ ಪತ್ರವನ್ನು ಒದಗಿಸುವುದು
7.   ವಯಸ್ಸಿಗೆ ಸಂಬಂಧಿಸಿದಂತೆ ಧೃಡೀಕರಣ ಪ್ರಮಾಣ ಪತ್ರ
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ಇಲ್ಲ
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು ಅರ್ಜಿ ಸ್ವೀಕರಿಸಿದ 3 ತಿಂಗಳ ಒಳಗಾಗಿ ಸಾಧನ ಸಲಕರಣೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು
ಸೇವೆ ಪ್ರಕ್ರಿಯೆ
ಪ್ರಕ್ರಿಯೆ
1.   ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದು
2.  ನ೦ತರ, ಅರ್ಜಿದಾರರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಓಟಿಪಿ ಸಂಖ್ಯೆಯು ಅವರ ಮೊಬೈಲಿಗೆ ಸಂದೇಶ ಬರುವುದು, ಸದರಿ ಓಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಅರ್ಜಿದಾರರು ಬಯಸಿದ ಸೇವೆಯ ಅರ್ಜಿಯ ಪುಟ ಅನಾವರಣಗೊಳ್ಳುವುದು
3.  ಮನವಿದಾರರು ಸದರಿ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಸಂಬಂಧಿಸಿದ ಕಂಡಿಕೆಯಲ್ಲಿ ತುಂಬುವುದು ನಂತರ ಉಳಿಸು ಎಂಬುದನ್ನು ಕ್ಲಿಕ್ ಮಾಡುವುದು
4.  ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ಸಂಖ್ಯೆಯು ಸಿಗುತ್ತದೆ
5.   ಅರ್ಜಿಯು ವಿಷಯನಿರ್ವಾಹಕರಿಗೆ ಹೋಗುತ್ತದೆ. ನಂತರ ವಿಷಯ ನಿರ್ವಾಹಕರು ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸುವರು
6.  ಕೇಸ್ ವರ್ಕರ್ ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸಲು
7.  ವಿಷಯ ನಿರ್ವಾಹಕರು ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ
8.  DDWO ಎಲ್ಲಾ ವಿವರಗಳನ್ನು ನಿಯಮಾನುಸಾರ ಪರಿಶೀಲಿಸಿ, ಸರಿಯಾಗಿದ್ದರೆ, ಒಪ್ಪಿಗೆ ಸೂಚಿಸುತ್ತಾರೆ
9.  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಫಲಾನುಭವಿಗಳ ಆಯ್ಕೆಗೆ ಸಮಿತಿಯ ಮುಂದೆ ಅರ್ಜಿಗಳನ್ನು ಮಂಡಿಸಿ, ಆಯ್ಕೆ ಮಾಡಲಾಗುವುದು

ಮೂಲ : ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಾಬರಿಕಾರಣ ಇಲಾಖೆ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate