ಸೇವೆ ಆಯ್ಕೆ |
ವಿವಾಹ ಪ್ರೋತ್ಸಾಹ ಧನ ಯೋಜನೆ |
ಸೇವೆ ಪೂರೈಕೆದಾರರು |
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ |
ಈ ಸೇವೆ ಪಡೆಯಲು ಅರ್ಹತೆಗಳು |
1.ವಿವಾಹವಾಗುವ ಹುಡುಗಿಯ ವಯಸ್ಸು18 ರ ಮೇಲ್ಪಟ್ಟಿರಬೇಕು ಮತ್ತು ಹುಡುಗನ ವಯಸ್ಸು 21 ಮೇಲ್ಪಟ್ಟವರಾಗಿರಬೇಕು. 2.ವಿವಾಹವಾಗುವ ವ್ಯಕ್ತಿ ಎರಡನೇ ಬಾರಿಗೆ ವಿವಾಹವಾಗಲಿದ್ದರೆ, ಈ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುವುದಿಲ್ಲ. 3.ಕನಿಷ್ಠ 40% ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ವಿಕಲಚೇತನತೆ ಹೊಂದಿರಬೇಕು |
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ |
ದಾಖಲೆಗಳ ವಿವರಗಳು |
1. ವಿವಾಹ ನೊಂದಣಿ ಪ್ರಮಾಣ ಪತ್ರ |
2. ಕರ್ನಾಟದಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ವಾಸಿಸುತ್ತಿರುವುದಕ್ಕೆ ಸ್ಥಳದ ದೃಢೀಕರಣ ಪತ್ರ |
3. ಅಂಗವಿಕಲ ವ್ಯಕ್ತಿಗಳ ಘೋಷಣೆ ಮತ್ತು ಅದರ ಪ್ರತಿ |
4. ಆಧಾರ್ ಕಾರ್ಡ್ |
5. ವಿಕಲಚೇತನರ ಗುರುತಿನ ಚೀಟಿ |
|
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) |
ಇಲ್ಲ |
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು |
30 to 90 days |
ಸೇವೆ ಪ್ರಕ್ರಿಯೆ |
ಪ್ರಕ್ರಿಯೆ |
1. ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದು |
2. ನ೦ತರ, ಅರ್ಜಿದಾರರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಓಟಿಪಿ ಸಂಖ್ಯೆಯು ಅವರ ಮೊಬೈಲಿಗೆ ಸಂದೇಶ ಬರುವುದು, ಸದರಿ ಓಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಅರ್ಜಿದಾರರು ಬಯಸಿದ ಸೇವೆಯ ಅರ್ಜಿಯ ಪುಟ ಅನಾವರಣಗೊಳ್ಳುವುದು |
3. ಮನವಿದಾರರು ಸದರಿ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಸಂಬಂಧಿಸಿದ ಕಂಡಿಕೆಯಲ್ಲಿ ತುಂಬುವುದು ನಂತರ ಉಳಿಸು ಎಂಬುದನ್ನು ಕ್ಲಿಕ್ ಮಾಡುವುದು |
4. ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ಸಂಖ್ಯೆಯು ಸಿಗುತ್ತದೆ |
5. ಅರ್ಜಿಯು ವಿಷಯನಿರ್ವಾಹಕರಿಗೆ ಹೋಗುತ್ತದೆ. ನಂತರ ವಿಷಯ ನಿರ್ವಾಹಕರು ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸುವರು |
6. ಕೇಸ್ ವರ್ಕರ್ ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸಲು |
7. ವಿಷಯ ನಿರ್ವಾಹಕರು ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ |
8. DDWO ಎಲ್ಲಾ ವಿವರಗಳನ್ನು ನಿಯಮಾನುಸಾರ ಪರಿಶೀಲಿಸಿ, ಸರಿಯಾಗಿದ್ದರೆ, ಒಪ್ಪಿಗೆ ಸೂಚಿಸುತ್ತಾರೆ |
9. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಮಂಜೂರಾತಿ ನೀಡಲಾಗುವುದು |
10. ಖಜಾನೆಯಿಂದ ಬ್ಯಾಂಕಿನ ವ್ಯವಸ್ಥಾಪಕರ ಹೆಸರಲ್ಲಿ ಚೆಕ್ ನ್ನು ಪಡೆಯಲಾಗುವುದು |
11. ದಂಪತಿಗಳ ಹೆಸರಿಲ್ಲಿರುವ ನಿಶ್ಚಿತ ಠೇವಣಿ ಪತ್ರವನ್ನು ಬ್ಯಾಂಕ್ ನ ವ್ಯವಸ್ಥಾಪಕರು ನೀಡುವರು |
|
ಮೂಲ : ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಾಬರಿಕಾರಣ ಇಲಾಖೆ
ಕೊನೆಯ ಮಾರ್ಪಾಟು : 10/17/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.