অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಕ್ಕಳ ಸಾಗಾಣಿಕೆ

ಮಕ್ಕಳ ಸಾಗಾಣಿಕೆ

ಸಾಗಾಣಿಕೆ / ವೇಶ್ಯಾವಾಟಿಕೆ

ಸಾಗಾಣಿಕೆ ಎಂದರೆ ವೇಶ್ಯಾವಾಟಿಕೆ ಎಂದರ್ಥವಲ್ಲ. ಇವು ಪರ್ಯಾಯ ಪದಗಳು ಅಲ್ಲ. ಸಾಗಾಣಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇದನ್ನು ವೇಶ್ಯಾವಾಟಿಕೆ ಯಿಂದ ಬೇರ್ಪಡಿಸಬೇಕು. ಪ್ರಸ್ತುತ ಇರುವ ಕಾನೂನಿನ ಪ್ರಕಾರ “ಅನೈತಿಕ ಮಾನವ ಸಾಗಣಿಕೆ ಕಾಯ್ದೆ” (೧೯೫೬) ಒಂದು ಅಪರಾಧವಾಗುತ್ತದೆ. ಯಾವಾಗ ಎಂದರೆ; ಒಬ್ಬ ವ್ಯಕ್ತಿಯನ್ನು ವ್ಯವಹಾರ ಕಾರಣಗಳಿಗಾಗಿ ಶೋಷಣೆ ಮಾಡಿದಾಗ ಮಾತ್ರ. ಒಬ್ಬ ಮಹಿಳೆ ಅಥವಾ ಮಗುವನ್ನು ಲೈಂಗಿಕ ಶೋಷಣೆಗೊಳಗಾಗಿಸಿ ಇದರ ಮೂಲಕ ಮತ್ತೊಬ್ಬ ವ್ಯಕ್ತಿಯು, ಲಾಭ ಪಡೆದಾಗ ಮಾತ್ರ ಇದನ್ನು ಲೈಂಗಿಕ ಶೋಷಣೆಯ ವ್ಯಾಪಾರ ಎಂದು ಕರೆಯಲಾಗುತ್ತದೆ. (ಸಿ.ಎಸ್.ಇ) ಹಾಗೂ ಇದು ಕಾನೂನಿನ ಪ್ರಕಾರ ಶಿಕ್ಷಿಸಬಹುದಾದ ಅಪರಾಧ ಮತ್ತು ಎಲ್ಲ ಶೋಷಣೆ ಮಾಡುವ ಎಲ್ಲರೂ ದಂಡನಾರ್ಹರಾಗುವರು. ಅನೈತಿಕ ಮಾನವ ಸಾಗಣೆ ಪ್ರಕ್ರಿಯೆಯು ಯಾವುದೇ ಒಬ್ಬ ವ್ಯಕ್ತಿಯನ್ನು ಲೈಂಗಿಕ ಶೋಷಣೆಗಾಗಿ ನೇಮಕಾತಿ ಮಾಡುವುದು, ಗುತ್ತಿಗೆಗೆ ಒಪ್ಪಿಸುವುದು, ಬಾಡಿಗೆಗೆ ಪಡೆಯುವುದನ್ನು ವ್ಯವಹಾರ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಈ ವ್ಯವಹಾರ ಪ್ರಕ್ರಿಯೆಯು ಲೈಂಗಿಕ ಶೋಷಣೆಯ ಅಂತಿಮ ಫಲಿತಾಂಶವಾಗಿರುತ್ತದ . ಆದ್ದರಿಂದಲೇ ಈ ವ್ಯವಹಾರ ಪ್ರಕ್ರಿಯೆಯು ಲೈಂಗಿಕ ಶೋಷಣೆಯ ಅಂತಿಮ ಫಲಿತಾಂಶವಾಗಿರುತ್ತದೆ. ವಾಣಿಜ್ಯ ಲೈಂಗಿಕ ಶೋಷಣೆಯು ಉಂಟು ಮಾಡುವ ಬೇಡಿಕೆಯು ನಿರಂತರ ಸಾಗಣಿಕೆಯನ್ನು ಪ್ರಾಯೋಜಿಸುವವುದು. ಇದು ಒಂದು ವಿಷ ಚಕ್ರ. ಈ ಮಾನವ ಸಾಗಣೆಯು ಅಶ್ಲೀಲ ಚಿತ್ರಗಳ ತಯಾರಿ , ಲೈಂಗಿಕ ಉದ್ದೇಶದ ಪ್ರವಾಸಗಳ ಏರ್ಪಾಟು, ಬಾರ್‌ಗಳ ಕೆಲಸದ ನೆಪದಲ್ಲಿ ಲೈಂಗಿಕ ಶೋಷಣೆ ,ಅಂಗಮರ್ಧನ ಅಂಗಡಿಗಳು, ಪ್ರವಾಸಿ ಸ್ಥಳಗಳು, ಅಂಗರಕ್ಷಣೆಯ ಸೇವೆ, ಸ್ನೇಹಕೂಟ, ಇತ್ಯಾದಿ ಅಥವಾ ಶೋಷಿತ ಕಾರ್ಮಿಕ ವರ್ಗ ಮುಂತಾದೆಡೆ ಲೈಂಗಿಕ ದೌರ್ಜನ್ಯ ಜೊತೆಗೇ ಇರಲಿ ಅಥವಾ ಇಲ್ಲದಿರಲಿ ಮಾಡುವುದು ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ.

ಅನೈತಿಕ ಮಾನವ ಸಾಗಣೆ

ಐ ಟಿ ಪಿ ಎ (IಖಿPಂ) ಕಾಯ್ದೆಯ ವ್ಯಾಪಾರಿ ಲೈಂಗಿಕ ಶೋಷಣೆಯನ್ನು ಮಾತ್ರ ದೃಷ್ಠಿಯಲ್ಲಿ ಇಟ್ಟು ಕೊಂಡಿರುತ್ತದೆ. ವ್ಯಾಪಾರಿ ಚಟುವಟಿಕೆಗಳು, ವೇಶ್ಯಾಗೃಹಗಳಲ್ಲಿ ಮಾತ್ರ ನಡೆಯಬೇಕೆಂದೇನೂ ಇಲ್ಲ. ಇವು ವಸತಿ ಪ್ರದೇಶಗಳಲ್ಲಿ, ವಾಹನಗಳಲ್ಲಿ, ಇತ್ಯಾದಿಗಳಲ್ಲಿ ಕೂಡ ಸಂಭವಿಸಬಹುದು. ಆದುದರಿಂದ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯಡಿಯಲ್ಲಿ ಕೆಲಸ ನಿರ್ವಹಿಸತಕ್ಕಂತಹ ಯಾವುದೇ ಪೊಲೀಸ್ ಅಧಿಕಾರಿಗಳಿಗೆ, ಲೈಂಗಿಕ ಶೋಷಣೆಗಳ ನೆಲೆ ಎನ್ನಬಹುದಾದ ಅಂಗಮರ್ಧನ ಕೇಂದ್ರಗಳು, ಬಾರ್, ಪ್ರವಾಸಿ ಸ್ಥಳಗಳು, ಅಂಗರಕ್ಷಣೆಸೇವೆ, ಸ್ನೇಹಕೂಟ, ಕೆಲಸದ ಜಾಗದ ಲ್ಲಿನ ಶೋಷಣೆಯಾದಾಗ ಲೈಂಗಿಕ ವ್ಯಾಪಾರಿ ಚಟುವಟಿಕೆಗಳು ನಡೆದಿರಲಿ ಅಥವಾ ನಡೆಯದಿರಲಿ ಕಾನೂನು ಕ್ರಮ ಕೈಗೆತ್ತಿಕೊಳ್ಳುವ ಅಧಿಕಾರವಿರುತ್ತದೆ.೧.೨ ಮಾನವ ಸಾಗಣೆಯ ಬಗ್ಗೆ ವಿವರಣೆ

 • ಅನೈತಿಕ ಮಾನವ ಸಾಗಣೆಯ ವಿವರಣೆಯನ್ನು “ಅನೈತಿಕ ಮಾನವ ಸಾಗಣೆ ತಡೆಕಾಯ್ದೆ” ಹಲವು ವಿಭಾಗಗಳಲ್ಲಿ ನೋಡಬಹುದಾಗಿದೆ. ಪರಿಚ್ಛೇದ-೫ ಕಲೆಹಾಕುವುದು, ವೇಶ್ಯಾವೃತ್ತಿಗಾಗಿ ಒಬ್ಬ ವ್ಯಕ್ತಿಯನ್ನು ತೆಗೆದುಕೊಳ್ಳುವುದು ಅಥವಾ ತೊಡಗಿಸುವುದು ಇದರ ಬಗ್ಗೆ ಹೇಳುತ್ತದೆ. ಇದರ ಪ್ರಕಾರ ಪಡೆಯಲು ,ಕರೆದುಕೊಂಡುಹೊಗಲು. ಪ್ರಚೋದಿಸುವ ಪ್ರಯತ್ನವೂ ಕೂಡಾ ಮಾನವಸಾಗಣಿಕೆ ಎನಿಸುವುದು

ಆದ್ದರಿಂದ “ಮಾನವ ಸಾಗಣೆ”ಯು ವಿಶೇಷ ಅರ್ಥ ವ್ಯಾಪ್ತಿಯನ್ನು ಹೊಂದಿದೆ. ಅನೈತಿಕ ಮಾನವ ಸಾಗಣೆಯ ವಿಸ್ತಾರವಾದ ಅರ್ಥವನ್ನು ಗೋವಾ ಮಕ್ಕಳ ಕಾಯ್ದೆ ೨೦೦೩ ರಲ್ಲಿ ಕೊಡಲಾಗಿದೆ. ಇದರಲ್ಲಿ ಮಕ್ಕಳ ಸಾಗಣೆಯ ಬಗ್ಗೆ ಕೇಂದ್ರೀಕರಿಸಿದ್ದರೂ ವಿವರಣೆಯು ಬಹು ವ್ಯಾಪಕವಾಗಿದೆ. ಪರಿಚ್ಛೇದ ೨(೨)ದಲ್ಲಿ ಮಕ್ಕಳ ಸಾಗಣೆ ಎಂದರೆ “ ಅವರನ್ನು ಹೊಂದಿರುವುದು, ನೇಮಿಸುವುದು, ಸಾಗಣೆ, ವರ್ಗಾವಣೆ, ಕರೆತಂದ ಮಕ್ಕಳಿಗೆ ಆಶ್ರಯ ನೀಡುವುದು, ಕಾನೂನು ಪ್ರಕಾರವಾಗಿ ಇಲ್ಲವೆ ಕಾನೂನು ಬಾಹಿರವಾಗಿ, ದೇಶದ ಗಡಿಯೊಳಗೆ ಅಥವಾ ಗಡಿಯಾಚೆ, ಬೆದರಿಸಿ, ಬಲವಂತದಿಂದ ಅಥವಾ ಬಲಪ್ರಯೋಗದಿಂದ, ಅಪಹರಿಸಿ, ಕಪಟದಿಂದ, ಅಧಿಕಾರದ ಬಲವನ್ನು ಉಪಯೋಗಿಸಿ, ನಿಯಂತ್ರಣ ವಿರುವ ವ್ಯಕ್ತಿಗೆ ಹಣವನ್ನು ಕೊಟ್ಟು , ಇಲ್ಲವೆ ಆಸೆ ಆಮಿಷ ತೋರಿಸಿ ವ್ಯಕ್ತಿಗಳ ಒಪ್ಪಿಗೆ ಪಡೆದು, ಹಣದ ಆಸೆಗೆ ಅಥವಾ ಇತರೆ ಲಾಭಕ್ಕಾಗಿ ಉಪಯೋಗ ಪಡೆದು ಕಾರ್ಯ ನಿರ್ವಹಿಸುವುದಕ್ಕೆ ಮಾನವ ಸಾಗಣೆ “ಎನ್ನುತ್ತಾರೆ.

ಮಾನವ ಸಾಗಣೆಯು ಕೆಳಕಂಡ ವಿಷಯಗಳನ್ನು ಅವಶ್ಯಕವಾಗಿ ಹೊಂದಿದೆ.

 • ವ್ಯಕ್ತಿಯನ್ನು ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ಸ್ಥಳಾಂತರಿಸುವುದು, ಒಂದು ಮನೆಯಿಂದ ಇನ್ನೊಂದು ಮನೆಗೆ, ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಮತ್ತೊಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದನ್ನು ಸ್ಥಳಾಂತರ ಎನ್ನುತ್ತಾರೆ. ಒಂದೇ ಕಟ್ಟಡದಲ್ಲಿ ಬೇರೊಂದು ಜಾಗಕ್ಕೆ ಬದಲಾಯಿಸುವುದಕ್ಕೂ ಸ್ಥಳಾಂತರ ಎನ್ನಬಹುದು. ಒಂದು ಉದಾಹರಣೆಯಿಂದ ವಿಚಾರವನ್ನು ಸರಿಯಾಗಿ ತಿಳಿಸಬಹುದು.
 • ಒಬ್ಬರು ವೇಶ್ಯಾಗೃಹವನ್ನು ನಡೆಸುತ್ತಿರುವವರ ಹಲವು ಯುವತಿಯರನ್ನು ಸಾಕುತ್ತಾ ನಿಯಂತ್ರಣದಲ್ಲಿ ಇಟ್ಟು ಕೊಂಡಿರುವರು, ಇದರಲ್ಲಿ ಒಬ್ಬ ಮಹಿಳೆಯ ಮಗಳು ಅವರ ಜತೆ ವಾಸಿಸುತ್ತಿರುತ್ತಾಳೆ. ಇಂತಹ ಸಂದರ್ಭದಲ್ಲಿ ವೇಶ್ಯಾವಾಟಿಕೆ ನಡೆಸುವವಳು ಲಂಚ ಅಥವಾ ಇನ್ನಾವುದೇ ಆಮಿಷಗಳಿಗಾಗಿ ಆ ಹುಡುಗಿಯ ತಾಯಿಯನ್ನು, ಮಗಳನ್ನು ವ್ಯಾಪಾರಿ ವೇಶ್ಯಾವಾಟಿಕೆಗೆ ಒಪ್ಪಿಸಿ ಆ ಮಗಳನ್ನು ತಾಯಿಯ ಸಮುದಾಯದಿಂದ ವೇಶ್ಯಾಗೃಹದ ಸಮುದಾಯಕ್ಕೆ ಸ್ಥಳಾಂತರಿಸುತ್ತಾಳೆ. ಈ ಸ್ಥಳಾಂತರಿಸುವುದೇ ಮಾನವಸಾಗಣಿಕೆ ಎಂಬ ಪದಕ್ಕೆ ಉಚಿತವಾದ ನಿದರ್ಶನವಾಗಿದೆ.

ಮಾನವ ಸಾಗಣೆಗೆ ಒಳಗಾದ ವ್ಯಕ್ತಿಯ ಶೋಷಣೆ

ಅನೈತಿಕ ಮಾನವ ಸಾಗಣೆಕಾಯ್ದೆ ಮತ್ತು ಸಂಬಂಧಪಟ್ಟ ಕಾನೂನುಗಳು ಲೈಂಗಿಕ ಶೋಷಣೆಯ ವಿವರ ನೀಡುತ್ತವೆ. ಶೋಷಣೆಯ ಪ್ರಕ್ರಿಯೆಯು ಪ್ರದರ್ಶನವಾಗಿರಬಹುದು, ವೇಶ್ಯಾ ಗೃಹವಾಗಿರಬಹುದು, ಅಥವಾ ಅಂಗಮರ್ಧನ ಕೇಂದ್ರ, ನೃತ್ಯಕೂಟ, ಮುಂತಾದ ಕಾನುನು ಸಮ್ಮತವಾದ ಚಟುವಟಿಕೆಗಳ ಹೆಸರಿನಲ್ಲಿ ಗುಪ್ತವಾಗಿ ನಡೆಯುತ್ತಿರಬಹುದು.

ವ್ಯಾವಹಾರಿಕ ಶೋಷಣೆ ಮತ್ತು ವ್ಯಾಪಾರಿ ವಸ್ತುವನ್ನಾಗಿ ಬಳಸಿ ಶೋಷಿಸುವುದು.

 • ಮಾನವ ಸಾಗಣೆಗೆ ಗುರಿಯಾದ ವ್ಯಕ್ತಿಯನ್ನು ಅವಳು ಒಂದು ವಸ್ತು ಎಂಬಂತೆ ಶೋಷಣೆಗೆ ಒಳಪಡಿಸುವುದು (ಉಲ್ಲಂಘನೆಯ ಧೀರ್ಘ ಪಟ್ಟಿಯನ್ನು ಮುಂದಿನ ಪುಟಗಳಲ್ಲಿ ನೋಡಿ) ಶೋಷಣೆಮಾಡುವವರು ಅದರಿಂದ ಆದಾಯ ಪಡೆಯುತ್ತಾರೆ. ಕೆಲವೊಮ್ಮೆ ಈ ಆದಾಯವನ್ನು ಅವರು ಶೋಷಣೆಗೊಳಗಾದವರ ಜತೆ ಕೂಡ ಹಂಚಿಕೊಳ್ಳಬಹುದು. ಶೋಷಣೆಗೆ ಒಳಗಾದ ಬಲಿಪಶುಗಳು ಸಂಪಾದನೆಯ ಆದಾಯದ ಸ್ವಲ್ಪಭಾಗವನ್ನು ಪಡೆಯುವುದರಿಂದ ಅವರನ್ನು ಸಹ ಅಪರಾಧಿ ಎಂಬ ಕಳಂಕಿತ ಮುದ್ರೆಯನ್ನೊತ್ತಿ ಬಂಧಿಸಬಹುದು ಅಲ್ಲದೆ ದೋಷಿ ಎಂದು ಪರಿಗಣಿಸಬಹುದು.
 • ಮಾನವ ಸಾಗಣೆಗೊಳಗಾದ ವ್ಯಕ್ತಿಗಳು ಹೊರಗೆ ತಿರುಗಾಡುವುದಿರಲಿ ಆಲೋಚಿಸುವುದೂ ಕೂಡ ಶೋಷಣೆ ಮಾಡುವವರ ನಿರ್ದೇಶನ/ಆಜ್ಞೆಗೆ ಒಳಪಟ್ಟಿರುವುದರಿಂದ ಅವರನ್ನು ಸಹ ಪರಾಧಿ ಎಂದು ನಡೆಸಿಕೊಳ್ಳಬಾರದು. ಅವಳು ಸಂಪಾದನೆಯ ಹಣವನ್ನು ಹಂಚಿಕೊಂಡಿದ್ದರೂ ಕೂಡ ಅವಳು ಮಾನವ ಸಾಗಣೆಗೆ ಒಳಗಾಗಿ ವ್ಯಾಪಾರಿ ಲೈಂಗಿಕ ಶೋಷಣೆಗೆ ಗುರಿಯಾದುದರಿಂದ ಅವಳು “ಬಲಿಪಶು” ಎಂಬ ಸ್ಥಾನಮಾನವನ್ನು ಬದಲಾಗುವುದಿಲ್ಲ.

ಮಾನವ ಸಾಗಣೆ ಎಂಬ ಪಾಪಕೃತ್ಯದ ಸಂಘಟನೆ.

ಮಾನವ ಸಾಗಣೆಯ ಅಪರಾಧಗಳಲ್ಲಿ ಪಾಪಕೃತ್ಯ. ಇದು ಪಾಪಕೃತ್ಯಗಳಿಂದ ತುಂಬಿದ ಬುಟ್ಟಿಯಾಗಿದೆ. ಈ ಬುಟ್ಟಿಯಲ್ಲಿ ಮಾನವರ ಅಪಹರಣ, ಮಾನವರನ್ನು ಕದ್ದುಕೊಂಡು ಹೋಗುವುದು, ಅನ್ಯಾಯದಿಂದ ಪ್ರತಿಬಂಧಗೊಳಿಸುವುದು, ವೇದನೆ ಕೊಡುವುದು, ಅತ್ಯಾಚಾರ ಎಸಗುವುದು, ಅನೈಸರ್ಗಿಕ ಅಪರಾಧಗಳು, ಮಾನವರನ್ನು ಖರೀದಿಸುವುದು ಮತ್ತು ಮಾರುವುದು, ಲೈಂಗಿಕ ಆಕ್ರಮಣ, ಸಭ್ಯರ ಮಾನಭಂಗ, ದುರ್ಬೋಧನೆ, ಗುಲಾಮಗಿರಿ/ಪರಾಧೀನತೆ, ಮುಂತಾದುವುಗಳನ್ನು ನೋಡಬಹುದು.. ಆದ್ದರಿಂದ ಈ ಅಮಾನವೀಯ ಕೃತ್ಯ ಎಸಗುವವರು ಮತ್ತು ಅಮಾನವೀಯ ಕೃತ್ಯಕ್ಕೆ ಬೆಂಬಲ ನೀಡುವವರು ವಿವಿಧ ಸ್ಥಳಗಳಲ್ಲಿ ಮತ್ತು ಸಮಯಗಳಲ್ಲಿ ಒಟ್ಟಾರೆಯಾಗಿ ಸಂಘಟಿತರಾಗಿ ಮಾನವ ಸಾಗಣೆಯ ಅಪರಾಧವನ್ನೆಸಗುತ್ತಾರೆ. ಏಕಾಂತದ ನಿರಾಕರಣೆ, ನ್ಯಾಯದ ನಿರಾಕರಣೆ, ನ್ಯಾಯಮಾರ್ಗದ ನಿರಾಕರಣೆ, ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದು, ಗೌರವಕ್ಕೆ ಭಂಗ ತರುವುದು, ಇತ್ಯಾದಿಗಳು ಶೋಷಣೆಯ ಇನ್ನೊಂದು ಭಾಗವಾಗಿವೆ. ಆದ್ದರಿಂದ ಮಾನವ ಸಾಗಣೆಯು ಸಂಘಟಿತ ಶಿಕ್ಷಾರ್ಹ ಅಪರಾಧವಾಗುತ್ತದೆ.

ಸಾಗಣೆಗೆ ಒಳಗಾದ ವ್ಯಕ್ತಿತಿ

 • ಭಾರತೀಯ ಮಾನವ ಸಾಗಣೆ ತಡೆ ಕಾಯ್ದೆ (ವಿಶೇಷವಾಗಿ ಪರಿಚ್ಛೇದ-೫) ಮತ್ತು ಸಂಬಂಧಪಟ್ಟ ಕಾನೂನಿನ ಪ್ರಕಾರ ಮಾನವ ಸಾಗಣೆಗೊಳಗಾದ ವ್ಯಕ್ತಿಯು ಯಾವುದೇ ವಯಸ್ಸಿನ ಪುರುಷ ಅಥವಾ ಮಹಿಳೆಯಾಗಿರಬಹುದು, ಹಾಗೂ ಇವರನ್ನು ವ್ಯಾಪಾರೀ ಲೈಂಗಿಕ ಶೋಷಣೆಗಾಗಿ ವೇಶ್ಯಾಗೃಹದಲ್ಲಿ ಅಥವಾ ವ್ಯವಹಾರಿಕ ಲೈಂಗಿಕ ಶೋಷಣೆ ನಡೆಯುವ ಯಾವುದೇ ಸ್ಥಳಕ್ಕೆ ಸಾಗಿಸಿರಬಹುದು. ಭಾರತೀಯ ಮಾನವ ಸಾಗಣೆ ತಡೆ ಕಾಯ್ದೆಯಡಿ ಮಾನವ ಸಾಗಣೆಗೆ ಪ್ರಯತ್ನ ಪಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದ್ದರಿಂದ ವ್ಯಕ್ತಿಯು ಭೌತಿಕವಾಗಿ ಸಾಗಣೆಗೊಳಗಾಗುವ ಮುನ್ನವೇ ಈ ಕಾಯ್ದೆಯನ್ನು ಜಾರಿಗೊಳಿಸಬಹುದಾಗಿದೆ.

೧.೫ ಮಗು

೧೮ ವರ್ಷ ವಯಸ್ಸು ಆಗದವರನ್ನು ಮಗು/ಮಕ್ಕಳು ಎಂದು ಕರೆಯಬಹುದು. ಮಗು/ಮಕ್ಕಳು ಮಾನವ ಸಾಗಣೆಗೆ ಒಳಗಾಗಬಹುದಾದ ಸಂದರ್ಭದಲ್ಲಿ ಬಾಲಾಪರಾಧಿ (ಮಕ್ಕಳ ಲಕ್ಷ್ಯ ಮತ್ತು ರಕ್ಷಣೆ) ಕಾಯ್ದೆ ೨೦೦೦ (ಜೆ.ಜೆ. ಕಾಯ್ದೆ)ಯಡಿಯಲ್ಲಿ ಇವರನ್ನು “ಆರೈಕೆ ಮತ್ತು ರಕ್ಷಣೆ” ಅಗತ್ಯವಿರುವ ವ್ಯಕ್ತಿ ಎಂದು ಗುರುತಿಸಬಹುದಾಗಿದೆ. ಆದ್ದರಿಂದ ಬಾಲಪರಾಧಿ ಕಾಯ್ದೆ ಮತ್ತು ಕಾನೂನು ಜಾರಿ ಮಾಡುವ ಸಂಸ್ಥೆಗಳು, ಇಂತಹ ಮಕ್ಕಳನ್ನು ಪಾರುಮಾಡಿ, ಇವರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿ ಇವರಿಗೆ ಆರೈಕೆ ಮಾಡಿ, ರಕ್ಷಣೆ ಕೊಡುವುದು ಆದ್ಯ ಕರ್ತವ್ಯವಾಗಿರುತ್ತದೆ.

೧.೬ ಸಾಗಣೆಗೊಳಗಾದ ವಯಸ್ಕರು

 • ವಯಸ್ಕರ ವಿಷಯದಲ್ಲಿ ಅವರ ಅನುಮತಿ ಪಡೆದಿದ್ದರು ಎಂಬ ಕಾರಣಕ್ಕೆ ಇದು “ಮಾನವಸಾಗಣೆ” ಅಲ್ಲ ಎಂಬುದನ್ನು ನಿರಾಕರಿಸಲಾಗುವುದಿಲ್ಲ. ಬಲಾತ್ಕಾರ, ಬೆದರಿಕೆ, ಒತ್ತಡ, ಅಥವಾ ಕಡ್ಡಾಯದಿಂದ ಒಪ್ಪಿಸಿದ್ದರೆ “ಅನುಮತಿ” ಎಂಬುದು ಅರ್ಥಹೀನವಾಗುತ್ತದೆ. ಆದ್ದರಿಂದ ಇಂತ ಪ್ರಕರಣಗಳು ಮಾನವ ಸಾಗಣೆಯಡಿಯಲ್ಲಿ ಬರುತ್ತವೆ. ಆದ್ದರಿಂದಲೇ ಒಬ್ಬ ಪ್ರೌಢ ಮಹಿಳೆಯನ್ನು ವೇಶ್ಯಾಗೃಹದಿಂದ ಕೋರುತ್ತಿದ್ದಳು ಎಂದು ಕರೆದುಕೊಂಡು ಬಂದರೂ ಕೂಡ ಅವಳ ಉದ್ಧೇಶವನ್ನು ತನಿಖೆಮಾಡದ ಹೊರತು ಅವಳನ್ನು ಅಪರಾಧಿ ಎಂದು ಪರಿಗಣಿಸುವ ಹಾಗಿಲ್ಲ. ಒಬ್ಬ ಮಹಿಳೆಯು ವ್ಯಾಪಾರಿ ಲೈಂಗಿಕ ಶೋಷಣೆಗಾಗಿ ಮಾನವ ಸಾಗಣೆಗೆ ಒಳಗಾಗಿದ್ದರೆ ಅವಳನ್ನು ಬಲಿಪಶು ಎಂದು ಹೇಳಬಹುದೆ ಹೊರತು ಆರೋಪಿ ಎಂದು ಪರಿಗಣಿಸಲಾಗುವುದಿಲ್ಲ.

೧.೭ ಮಾನವ ಸಾಗಣೆದಾರರು ಮತ್ತು ಇತರೆ ಶೋಷಣೆ ಮಾಡುವವರು.

 • ಮಾನವ ಸಾಗಣೆಯು ಒಂದು ಸಂಘಟಿತ ಪಾಪಕೃತ್ಯವಾಗಿದೆ. ಈ ಕೃತ್ಯದಲ್ಲಿ ಹಲವು ಜನರು, ಹಲವು ಸ್ಥಳಗಳಲ್ಲಿ (ಎ) ಕೆಲಸಕ್ಕೆಂದು ತೆಗೆದು ಕೊಳ್ಳುವ ಸ್ಥಳ (ಬಿ) ಸಾಗಣಿಕೆಮಾಡುವ ಸ್ಥಳ (ಸಿ) ಶೋಷಣೆ ಮಾಡುವ ಸ್ಥಳ, ಆದ್ದರಿಂದ ಶೋಷಣೆದಾರರ ಪಟ್ಟಿಯಲ್ಲಿ ಕೆಳಕಂಡವರು ಸೇರಿರುವರು.
 • ವೇಶ್ಯಾಗೃಹದ ಉಸ್ತುವಾರಿ ಮಾಡುವವರು, ಅಲ್ಲಿ ಶೋಷಣೆ ಮಾಡುವವರು ಮತ್ತು ಅಂತಿಮ ವಾಗಿ ಶೋಷಣೆಯಾಗುವಲ್ಲಿರುವವರೂ ಕೆಳಗಿನಂತೆ ಸೇರಿರುವರು:
 • ವೇಶ್ಯಾಗೃಹದ “ಯಜಮಾನಿ” ಅಥವಾ “ನೃತ್ಯಕೂಟದ” , ಅಂಗಮರ್ಧನ ಕೇಂದ್ರದ ಅಥವಾ ಶೋಷಣೆ ನಡೆಯುವ ಇತರೆ ಸ್ಥಳಗಳ ಮೇಲ್ವಿಚಾರಕರು
 • ವ್ಯವಸ್ಥಾಪಕರು ಮತ್ತು ಇದರಲ್ಲಿ ಬರುವ ಇತರೆ ಪಾತ್ರಧಾರಿ ವ್ಯಕ್ತಿಗಳು.
 • ಭೋಜನಗೃಹ¸ ಇತ್ಯಾದಿ ಶೋಷಣೆ ನಡೆಯತಕ್ಕಂತಹ ಸ್ಥಳಗಳ ವ್ಯವಸ್ಥಾಪಕರು, ಮೇಲ್ವಿಚಾರಕರು
 • ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವ ಕಾವಲುಗಾರರು, ವೇಶ್ಯಾಗೃಹವಾಗಿ ಬಳಸುವ ವಾಹನಗಳು (ಪರಿಚ್ಛೇದ ೩.೨ ಐ.ಟಿ.ಪಿ.ಎ) ಬಲಿಪಶುವನ್ನು ಬಂಧನದಲ್ಲಿಡುವ ವೇಶ್ಯಾಗೃಹಗಳು, ಮತ್ತು ಶೋಷಣೆ ನಡೆಯುವ ಇತರೆ ಸ್ಥಳಗಳು (ಪರಿಚ್ಛೇದ ೬ ಐಟಿಪಿಎ) ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೂಳೆಗಾರಿಕೆ ನಡೆಸಲು ಬಿಡುವ ಎಲ್ಲ ವ್ಯಕ್ತಿಗಳು (ಪರಿಚ್ಛೇದ ೭.೨ ಐಟಿಪಿಎ)
 • ಮಾನವ ಸಾಗಣೆಗೊಳಗಾದ ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳುವ ಗ್ರಾಹಕರು ಅಥವಾ ಗಿರಾಕಿಗಳನ್ನು ನಿಸ್ಸಂದೇಹವಾಗಿ ಶೋಷಣೆದಾರರು ಎಂದು ಕರೆಯಬಹುದು. ಈ ಗಿರಾಕಿಗಳೇ ವ್ಯಾಪಾರಿ ಲೈಂಗಿಕ ಶೋಷಣೆಯನ್ನು ಸತತವಾಗಿ ಬೇಡಿಕೆಯಲ್ಲಿರಿಸುವವರು, ಆದ್ದರಿಂದಲೇ ಇವರು ಐಟಿಪಿಎ ಮತ್ತು ಇತರೆ ಕಾನೂನಿನಡಿಯಲ್ಲಿ ಶಿಕ್ಚೆಗೆ ಗುರಿಯಾಗುತ್ತಾರೆ. (ಪ್ಯಾರ ೩.೨ ೩ನ್ನು ವಿವರಣೆಗಾಗಿ ನೋಡಿ) ಹಣ ನೀಡುವವರು ಎಂದರೆ; ಮಾನವ ಸಾಗಣೆಯ ಎಲ್ಲಾ ಪ್ರಕ್ರಿಯೆಯಲ್ಲಿ ಧನ ಸಹಾಯ ನೀಡುವ ವ್ಯಕ್ತಿಗಳು ಇದಕ್ಕೆ ಸಂಬಂಧಪಡುತ್ತಾರೆ. ಇದರಲ್ಲಿ ಅವರ ನೇಮಕಾತಿಗಾಗಿ ಹಣನೀಡುವವರು, ಸಾಗಾಣಿಕೆ, ವಸತಿ ಉಳಿಯುವಿಕೆ, ವೇಶ್ಯಾಗೃಹವನ್ನು ಬಾಡಿಗೆಗೆ ಪಡೆಯಲು ಬಡ್ಡಿಗೆ ಹಣ ನೀಡುವವರು ಈ ಪ್ರಕ್ರಿಯೆಯಲ್ಲಿ ಸೇರಿಕೊಂಡಿರುತ್ತಾರೆ. ಇಂತಹ ಕೆಟ್ಟ ಕೆಲಸ ಮಾಡುವವರು ಅಥವಾ ಮಾಡಲು ದುರ್ಭೋಧಿಸುವವರು ಅಥವಾ ಶೋಷಣೆಗೆ ಸಹಾಯ ಮಾಡುವವರು, ಮಾನವ ಸಾಗಣೆಯ ಪ್ರಕ್ರಿಯೆಯಲ್ಲಿ ಒಳಗೊಂಡವರು ಇವರೆಲ್ಲರನ್ನೂ ಐಟಿಪಿಎ ಕಾಯ್ದೆಯಡಿಯಲ್ಲಿ (ಪರಿಚ್ಛೇದ ೩,೪,೫,೬,೭,೯ ಐಟಿಪಿಎ, ಪಠ್ಯ-೫, ಇಂಡಿಯನ್ ಪೀನಲ್‌ಕೋಡ್ ಇದನ್ನು ಓದಿರಿ) ನ್ಯಾಯ ವಿಚಾರಣೆ ಮಾಡಬಹುದಾಗಿದೆ.

ವ್ಯಾಪಾರಿ ಲೈಂಗಿಕ ಶೋಷಣೆಯ ಆದಾಯ ಗಳಿಕೆಯ ಮೇಲೆ ಜೀವಿಸುವವರು

 • ಅರಿವಿದ್ದು ಕೂಡ ಯಾರು ಭಾಗಶಃ ಅಥವಾ ಸಂಪೂರ್ಣವಾಗಿ ವೇಶ್ಯಾವೃತ್ತಿಯ ಆದಾಯ ಗಳಿಕೆಯ ಮೇಲೆ ಜೀವನ ನಡೆಸುತ್ತಾರೋ ಇಂತಹವರು (ಪರಿಚ್ಛೇದ ಐಟಿಪಿಎ)ಯ ಕಾಯ್ದೆಯನ್ವಯ ಕಾನೂನಿನ ವ್ಯಾಪ್ತಿಗೆ ಗುರಿಯಾಗುತ್ತಾರೆ. ಶೋಷಣೆಯಿಂದಾಗಿ ಕಾನೂನುಬಾಹಿರ ಪ್ರಯೋಜನಗಳನ್ನು ಪಡೆದವರು ಹಾಗೂ ಪಾಲು ಪಡೆದವರಿಗೂ ಕೂಡ ಅನ್ವಯಿಸುತ್ತದೆ.
 • ಈ ಕಾಯ್ದೆಯನ್ವಯ ಕೊಡುವ ವ್ಯವಹಾರಸ್ಥರು ವೇಶ್ಯಾಗೃಹಗಳಿಗೆ ಹಣಕಾಸು ಕೊಡುವ ವ್ಯವಹಾರಸ್ಥರು, ಅವರಿಂದ ಹಣ ವಸೂಲು ಮಾಡುವವರು ಯಾವದೆ ಹಣಕಾಸು ವ್ಯವಹಾರ ನಡೆಸುತ್ತಾರೋ ಅವರಿಗೂ ಕೂಡ ಅನ್ವಯಿಸುತ್ತದೆ. ವಸತಿಗೃಹದ/ಭೋಜನ ಶಾಲೆಯ ವ್ಯವಸ್ಥಾಪಕರೂ ಕೂಡ ಹುಡುಗಿಯರ ಶೋಷಣೆ ಮಾಡುವುದರಿಂದ ಲಾಭವನ್ನು ಗಳಿಸಿದರೆ ಅಂತಹವರೂ ಕೂಡ ನಿಸ್ಸಂದೇಹವಾಗಿ ಪರಿಚ್ಛೇದ ೪ ಐಟಿಪಿಎ ಕಾಯ್ದೆಯಡಿ ಆಪಾದನೆಗೆ ಒಳಗಾಗುತ್ತಾರೆ.
 • ಹೆಣ್ಣು ಮಕ್ಕಳನ್ನು ಗುರುತಿಸುವವರು, ನೇಮಕಾತಿ ಮಾಡುವವರು, ಮಾರುವವರು, ಕೊಳ್ಳುವವರು, ಗುತ್ತಿಗೆದಾರರು, ಮಧ್ಯಸ್ಥರು, ಅಥವಾ ಇವರ ಬದಲಿಗೆ ಬೇರೆಯಾರಾದರೂ ಪ್ರಕ್ರಿಯೆಯಲ್ಲಿ ತೊಡಗಿದವವರು ಆಪಾದನೆಗೆ ಒಳಗಾಗುತ್ತಾರೆ.
 • ಸಾಗಣಿಕೆದಾರರು, ಆಶ್ರಯ ನೀಡುವವರು ಈ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುತ್ತಾರೆ.
 • ಎಲ್ಲಾ ಪಿತೂರಿದಾರರು; ಮಾನವ ಸಾಗಣೆಯ ಎಲ್ಲಾ ಸಂದರ್ಭಗಳಲ್ಲೂ ಹಲವಾರು ಜನರು ಹಲವು ಸ್ಥಳಗಳಲ್ಲಿ ಪಿತೂರಿ ನಡೆಸಿರುತ್ತಾರೆ. ಹಲವು ಜನರ ಮನಸ್ಸು/ಬುದ್ಧಿಯು ಇದರಲ್ಲಿ ತೊಡಗಿಕೊಂಡಿದ್ದು, ಶೋಷಣೆಯ ಎಲ್ಲಾ ಹಂತಗಳನ್ನೂ ಕಾರ್ಯಗತಗೊಳಿಸುವುದರಲ್ಲಿ ಪಾಲ್ಗೊಂಡಿದ್ದರೆ, ಇವರನ್ನು ಸಂಚು ಮಾಡಿದವರ ಕಾನೂನಿನಾರೀತ್ಯ (ಪರಿಚ್ಛೇದ ೧೨೦ ಬಿಐಪಿಸಿ) ಆಪಾದನೆಗೆ ಒಳಗಾಗುತ್ತಾರೆ. ಐಟಿಪಿಎ ಕಾನೂನಿನನ್ವಯ ಯಾವುದೇ ಸ್ಥಳವನ್ನು ವೇಶ್ಯಾಗೃಹವನ್ನಾಗಿ ಬಳಸಲು ಪಿತೂರಿ ನಡೆಸುತ್ತಾರೋ (ಪರಿಚ್ಛೇಧ-೩) ಅಥವಾ ಈ ರೀತಿಯ ಶೋಷಣೆಯಿಂದ ಗಳಿಸಿದ ಆಧಾಯದ ಮೇಲೆ ಜೀವನ ನಡೆಸುತ್ತಾರೋ, ಅದು ಪೂರ್ಣವಾಗಿರಲಿ ಅಥವಾ ಭಾಗಶ:ವಾಗಿರಲಿ, ಯಾರು ಮಾನವ ಸಾಗಣೆಗೆ ವ್ಯಕ್ತಿಗಳನ್ನು ಒಂದುಗೂಡಿಸುವುದಾಗಲಿ ಅಥವಾ ವೇಶ್ಯಾವೃತ್ತಿಗೆ ತೊಡಗಿಸುವುದಾಗಲೀ ಮಾಡುತ್ತಾರೋ, ಇವರೆಲ್ಲರನ್ನೂ (ಪರಿಚ್ಛೇಧ-೫)ರ ಅಡಿಯಲ್ಲಿ ಪಿತೂರಿದಾರರೆಂದು ಪರಿಗಣಿಸಲಾಗುತ್ತದೆ.

ಮೂಲ: ಪೋರ್ಟಲ್ ತಂಡ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate