ಪುಡಿ ರೂಪದ ಜೈವಿಕ ಗೊಬ್ಬರಗಳು ಇದ್ದಿಲು ಪುಡಿ, ಕಲ್ಲಿದ್ದಲು, ಪ್ರೆಸ್ಮಡ್, ಕೊಟ್ಟಿಗೆ ಗೊಬ್ಬರ ಮುಂತಾದ ಮಾಧ್ಯಮಗಳಲ್ಲಿ ಉಪಯುಕ್ತ ಸೂಕ್ಷ್ಮಣು ಜೀವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗಿರುತ್ತದೆ. ಈ ರೂಪದ ಜೈವಿಕ ಗೊಬ್ಬರವು ಬೀಜೋಪಚಾರ, ಮಣ್ಣಿಗೆ ಸೇರಿಸುವಿಕೆ ಮತ್ತು ಸಸ್ಯದ ಬೇರಿನ ಉಪಚರಣೆಗೆ ಸೂಕ್ತವಾಗಿರುತ್ತದೆ. ಈ ಮಾಧ್ಯಮಗಳು ಇಂಗಾಲಯುಕ್ತವಾಗಿದ್ದು ಹೆಚ್ಚಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವಿದ್ದು ಇದರ ಜೊತೆಗೆ ಸೇರಿಸಿದ ಸೂಕ್ಷ್ಮಾಣುಜೀವಿಗಳನ್ನು ಸುಮಾರು 6 ತಿಂಗಳು ಕಾಲ ಕಾಪಾಡಿಕೊಂಡು ಬರಲು ಈ ಮಾಧ್ಯಮಗಳು ಸಹಾಯಕವಾಗಿದೆ. ಹರಳು ರೂಪದ ಜೈವಿಕ ಗೊಬ್ಬರಗಳು ಹರಳು ರೂಪದ ಜೀವಾಣು ಗೊಬ್ಬರವು ಕುರಿಗೆ ಬಿತ್ತನೆಯ ಜೊತೆಯಲ್ಲಿ ಬೀಜದೊಂದಿಗೆ ಹಾಕಲು ಸಹಾಯಕವಾಗಿದೆ. ಈ ರೂಪದ ಜೈವಿಕ ಗೊಬ್ಬರವು ಮಣ್ಣಿಗೆ ಎರಚಲುಸೂಕ್ತ. ಇದರ ಶೇಖರಣಾ ಅವಧಿ ಬಹಳಷ್ಟು ಕಾಲ ಇರುತ್ತದೆ. ಈ ಗೊಬ್ಬರವನ್ನು ಬಳಸಿದಾಗ ಒಂದು ಎಕರೆಗೆ ಶಿಫಾರಸ್ಸು ಮಾಡಿದ ಶೇ. 50 ರಷ್ಟು ಸಾರಜನಕ ಹಾಗೂ ರಂಜಕ ಒದಗಿಸುವ ರಸಗೊಬ್ಬರವನ್ನು ಉಳಿಸಬಹುದು. ದ್ರವ ರೂಪದ ಜೈವಿಕ ಗೊಬ್ಬರಗಳು ಜೈವಿಕ ಕ್ರಿಯೆಯಿಂದ ಸ್ಥಿರೀಕರಣಗೊಂಡ ಸಾರಜನಕವು ಸಸ್ಯದ ಬೆಳವಣಿಗೆಗೆ ಸಹಾಯಕವಾಗುವುದಲ್ಲದೆ ಮಣ್ಣಿನಲ್ಲಿ ಬಹಳಷ್ಟು ಕಾಲ ನೆಲೆಸಿ ಮುಂದಿನ ಬೆಳೆಗೂ ದೊರೆಯುತ್ತದೆ. ಗೊಬ್ಬರದ ಬಳಕೆಯಿಂದ ಭೂಮಿಯ ಫಲವತ್ತತೆಯು ಹೆಚ್ಚುತ್ತದೆ. ಹಾಗೂ ಮಣ್ಣಿನ ಗುಣಗಳನ್ನು ವೃದ್ಧಿಗೊಳಿಸುತ್ತದೆ. ಜೈವಿಕ ಗೊಬ್ಬರದ ಬಳಕೆಯಿಂದ ಬೀಜ ಮೊಳೆಯುವಿಕೆ ಹಾಗೂ ಸಸ್ಯ ಬೆಳೆಯುವ ಚೇತನವನ್ನು ಹೆಚ್ಚಿಸುತ್ತದೆ. ಬೆಳೆಯ ಬೆಳವಣಿಗೆಗೆ ಸಹಾಯಕವಾಗಿ ಹಸಿರೆಲೆಗಳ ಎಲೆಗಳಲ್ಲಿ ದ್ಯುತಿಸಂಶ್ಲೇಷಣಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ., ಗಿಡದಲ್ಲಿ ಹೆಚ್ಚಿನ ಹೂ ಬಿಡುವಿಕೆ ಹಾಗೂ ಪರಿಪಕ್ವವಾದ ಪಸಲನ್ನು ಕಾಣಬಹುದು. ಅನಾವೃಷ್ಠಿ, ರೋಗಗಳನ್ನು ಎದುರಿಸುವ ಶಕ್ತಿ ಬೆಳೆಗೆ ಬರುತ್ತದೆ. ಜೈವಿಕ ಗೊಬ್ಬರ ಕಡಿಮೆ ವೆಚ್ಚದ ತಾಂತ್ರಿಕತೆಯಾಗಿದ್ದು ಅತ್ಯಲ್ಪ ಖರ್ಚಿನಲ್ಲಿ ಹೆಚ್ಚಿನ ಬೆಳೆಯ ಇಳುವರಿ ಮತ್ತು ಆದಾಯವನ್ನು ಪಡೆಯಬಹುದು. ರಸಗೊಬ್ಬರ ಬಳಕೆಯನ್ನು ಮಿತಗೊಳಿಸಿ ಪರಿಸರ ಮಾಲಿನ್ಯವಾಗದಂತೆ ಕಾಪಾಡುತ್ತದೆ. ಜೈವಿಕ ಗೊಬ್ಬರಗಳನ್ನು ಬಳಸಿ ರೈತು ತಮ್ಮೆಲ್ಲಾ ಪರಿಪಕ್ವವಾದ ಗೊಬ್ಬರವನ್ನು ಅತಿ ಕಡಿಮೆ ದಿನಗಳಲ್ಲಿ ತಯಾರು ಮಾಡಿಕೊಳ್ಳಬಹುದು. ಜೈವಿಕ ಗೊಬ್ಬರವನ್ನು ಸಾಗಿಸಲು ಸುಲಭ ಮನ್ನೆಚ್ಚರಿಕೆ ಕ್ರಮಗಳು ಲಕೋಟೆಯ ಮೇಲೆ ನಮೂದಿಸಿದ ಬೆಳೆಗೆ ಮಾತ್ರ ಉಪಯೋಗಿಸಬೇಕು. ಅವಧಿ ಮುಗಿಯುವುದರೊಳಗೆ ಜೈವಿಕ ಗೊಬ್ಬರವನ್ನು ಬಳಸಿರಿ ಜೈವಿಕ ಗೊಬ್ಬರವನ್ನು ಯಾವುದೇ ಕಾರಣಕ್ಕೂ ಗೊಬ್ಬರ ಮತ್ತು ಕ್ರಿಮಿಕೀಟನಾಶಕಗಳೊಂದಿಗೆ ಮಿಶ್ರ ಮಾಡಿ ಬಳಸಬಾರದು. ಮೂಲ : ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.