ಅಝೋಲ್ಲಾದಲ್ಲಿರುವ ಪೋಷಕಾಂಶಗಳು ಮತ್ತು ಪ್ರಮಾಣ

ಅಝೋಲ್ಲಾದಲ್ಲಿ ಶೇ. 4-6 ರಷ್ಟು ಸಾರಜನಕದ ಜೊತೆಗೆ ಸಸ್ಯ ಬೆಳವಣಿಗೆ ಬೇಕಾದ ಹಲವಾರು ಲಘು ಪೋಷಕಾಂಶಗಳೂ ಇವೆ. ಇದರಲ್ಲಿರುವ ಆಹಾರಾಂಶಗಳ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಸೂಚಿಸಿದೆ.

ಸಸ್ಯ ಪೋಷಕಾಂಶ

ಶೇ. ಪ್ರಮಾಣ

ಸಾರಜನಕ

4.0-6.0

ರಂಜಕ

0.4-0.9

ಪೋಟ್ಯಾಷ್

3.0-6.7

ಸುಣ್ಣ

0.4-1.0

ಮೆಗ್ನೇಷಿಯಂ

0.5

ಮ್ಯಾಂಗನೀಸ್

0.11-0.16

ಕಬ್ಬಿಣ

0.06-0.16

ಲವಣದ ಬೂದಿ

9.0-10.0

ಪಿಷ್ಟ

5.0-6.0

ಕೊಬ್ಬು

5.0

ಕಚ್ಚಾ ಸಾರಜನಕ

24.0-26.0

ಕಚ್ಚಾ ನಾರು

9.0

ಅಝೋಲ್ಲಾ ಜೈವಿಕಗೊಬ್ಬರ

ಅಝೋಲ್ಲಾ ಎಂಬುದು ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಒಂದು ಸಸ್ಯ. ಇದು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ. ಈ ಕಾರ್ಯದಲ್ಲಿ ಇದರಲ್ಲಿರುವ ಅನಾಬಿನಾ ಎಂಬ ನೀಲಿ ಹಸಿರು ಪಾಚಿ ಸಹಾಯ ಮಾಡುತ್ತದೆ. ಇದರ ಕಾಂಡ ಮತ್ತು ಎಲೆಗಳು ಬಹಳ ಚಿಕ್ಕದಾಗಿದ್ದು, ಒಂದರ ಮೇಲೊಂದು ಜೋಡಿಸಿದಂತಿವೆ. ಮಣ್ಣಿನ ರಸಸಾರ 5.5 ಇರುವ ಮತ್ತು ವಾತಾವರಣದಲ್ಲಿ 26-270 ಸೆಲ್ಸಿಯಸ್ ಉಷ್ಣಾಂಶವಿರುವ ಪ್ರದೇಶವನ್ನು ಇದು ಹೆಚ್ಚಾಗಿ ಬಯಸುತ್ತದೆ. ಜೊತೆಗೆ ಇದರ ಬೆಳವಣಿಗೆಗೆ ಒಳ್ಳೆಯ ಸೂರ್ಯರಶ್ಮಿ ಸಹ ಅಗತ್ಯ.

Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು