ಕೊಯ್ಲು ಪ್ರತೀ 10-15 ದಿನಗಳಿಗೊಮ್ಮೆ ವೇಗವಾಗಿ ಬೆಳೆದು ಗುಂಡಿಯನ್ನು ತುಂಬಿಸುತ್ತದೆ. ಆನಂತರ ಪ್ರತೀ ದಿನ 500 ರಿಂದ 600 ಗ್ರಾ0 ಅಜೊಲ್ಲಾವನ್ನು ಉಪಯೋಗಕ್ಕೆ ತೆಗೆಯಬಹುದಾಗಿದೆ. 10-15 ದಿನಗಳ ನಂತರ ಪ್ರತಿ ದಿನ ಕೊಯ್ಲಿಗಾಗಿ ತಳದಲ್ಲಿ ರಂಧ್ರಗಳಿರುವ ಪ್ಲಾಸ್ಟಿಕ್ ಟ್ರೇ ಅಥವಾ ಜಾಳಿಗೆ ಉಪಯೋಗಿಸಿ ತೆಗೆಯಬಹುದು. ಕೊಯ್ಲು ಮಾಡಿದ ಅಜೊಲ್ಲಾವನ್ನು ತಾಜಾ ನೀರಿನಿಂದ ತೊಳೆಯುವುದರಿಂದ ಸಗಣಿ ವಾಸನೆಯಿಂದ ಮುಕ್ತಿಪಡೆಯಬಹುದು. ಬದಲೀ ಉತ್ಪಾದನಾ ಸಾಮಗ್ರಿಗಳು ಜೈವಿಕ ಇಂಧನದ (ಬಯೋಗ್ಯಾಸ್) ತಾಜಾ ರಾಡಿ ತ್ಯಾಜ್ಯವನ್ನು ಸಹ ಬಳಸಬಹುದು. ನೀರು ಅಭಾವವಿರುವ ಪ್ರದೇಶಗಳಲ್ಲಿ ಸ್ನಾನಕ್ಕೆ ಬಳಕೆಯಾದ ನೀರು, ದನಗಳ ಕೊಟ್ಟಿಗೆ ತೊಳೆದ ನೀರು, ಬಟ್ಟೆ ತೊಳೆದ (2 ನೆಯ ಸಲ ಅದ್ದಿದ) ನೀರು ಸಹ ಬಳಸಬಹುದು ಬೆಳವಣಿಕೆಗೆ ಪೂರಕವಾಗುವ ವಾತಾವರಣದ ಸಂಗತಿಗಳು 20°C - 28° ಸೆ. ಉಷ್ಣಾಂಶ ಶೇ 50 ರಷ್ಟು ಪೂರ್ಣ ಸೂರ್ಯನ ಬೆಳಕು ಸಾಪೇಕ್ಷ ತೇವಾಂಶ 65 - 80% ಗುಂಡಿಯಲ್ಲಿ ನಿಂತ ನೀರು 5-12 ಸೆಂ.ಮೀ pH 4-7.೫ ಮೂಲ: ಪೋರ್ಟಲ್ ತಂಡ