ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳಲ್ಲಿ ಸ್ಥಳೀಯ ರಾಸುಗಳ ಸಂರಕ್ಷಣೆ ಮತ್ತು ಸಾಕಾಣಿಕೆ ಹಾಗೂ ವಿದೇಶಿ ರಾಸುಗಳ ವೈಜ್ಞಾನಿಕ ನಿರ್ವಹಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರಿಗೆ ತರಬೇತಿಯನ್ನೂ ಸಹ ಏರ್ಪಡಿಸಲಾಗುತ್ತಿದೆ. ಪ್ರಸ್ತುತ, ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳು ಈ ಕೆಳಕಂಡಂತಿವೆ: ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು ಜಿಲ್ಲೆ ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ, ಬೆಂಗಳೂರು ಜಿಲ್ಲೆ ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು ಜಿಲ್ಲೆ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾ., ತುಮಕೂರು ಜಿಲ್ಲೆ ಖಿಲ್ಲಾರ್ ತಳಿ ಸಂವರ್ಧನಾ ಕ್ಷೇತ್ರ, ಶಿಗ್ಗಾಂ ತಾ., ಹಾವೇರಿ ಜಿಲ್ಲೆ ಜರ್ಸಿ ತಳಿ ಸಂವರ್ಧನಾ ಕ್ಷೇತ್ರ, ಕೂಡಿಗೆ ತಾ., ಕೊಡಗು ಜಿಲ್ಲೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ ತಾ., ದಕ್ಷಿಣ ಕನ್ನಡ ಜಿಲ್ಲೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಮುನಿರಾಬಾದ್, ಕೊಪ್ಪಳ ಜಿಲ್ಲೆ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ ಜಿಲ್ಲೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ ಜಿಲ್ಲೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕುರಿಕುಪ್ಪೆ, ಸಂಡೂರು ತಾ., ಬಳ್ಳಾರಿ ಜಿಲ್ಲೆ ಕಡಸು ಉತ್ಪಾದನಾ ಕೇಂದ್ರ, ಬರ್ಗಿ, ಗುಂಡ್ಲುಪೇಟೆ ತಾ., ಚಾಮರಾಜನಗರ ಜಿಲ್ಲೆ ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ