ಎಮ್. ಎನ್. ಆರ್. ಜಿ. ಅಡಿಯಲ್ಲಿ ಬರುವ ಚಟುವಟಿಕೆಗಳು ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ.ಯ ಪರಿಶಿಷ್ಟ- Iರ, ಪಾರಾ –1ರಲ್ಲಿ ಸ್ಪಷ್ಟ ಪಡಿಸಿರುವಂತೆ ಅನುಮೋದಿಸಲ್ಪಟ್ಟ ಚಟುವಟಿಕೆಗಳು ಈ ಕೆಳಗಿನಂತಿವೆ: ಜಲ ಸಂರಕ್ಷಣೆ ಮತ್ತು ಕೊಯಿಲು ಅನಾವೃಷ್ಠಿ –ತಡೆ (ಅರಣ್ಯೀಕರಣ ಹಾಗೂ ನೆಡುತೋಪುಗಳ ರಚನೆಯನ್ನೂ ಒಳಗೊಂಡಂತೆ) ನೀರಾವರಿಯ ಕಾಲುವೆಗಳ ರಚನೆ- ಕಿರು ಹಾಗೂ ಸಣ್ಣ ನೀರಾವರಿ ಕೆಲಸಗಳೂ ಸೇರಿದಂತೆ. ಪರಿಶಿಷ್ಠ ಜಾತಿ- ಪರಿಶಿಷ್ಠ ಪಂಗಡಗಳ, ಅಥವಾ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ,ಇಲ್ಲವೇ ಭೂ ಸುಧಾರಣೆಯ ಫಲಾನುಭವಿಗಳ, ಹಾಗೂ ಭಾರತ ಸರಕಾರದ ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳ,ಇಲ್ಲವೇ ಕೃಷಿ ಸಾಲ ಮನ್ನಾ ಹಾಗೂ ಸಾಲ ಪರಿಹಾರ ಯೋಜನೆ 2008 ರ 22.7.2009 ಯ ಅಧಿಸೂಚನೆಯಲ್ಲಿ ಹೇಳಿರುವಂತಹ ಸಣ್ಣ ಹಾಗೂ ಮಧ್ಯಮ ರೈತರ ಕುಟುಂಬಗಳ ಭೂಮಿಯನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ನೀರಾವರಿಯ ಸೌಲಭ್ಯವನ್ನು ಒದಗಿಸುವುದು, ತೋಟಗಾರಿಕಾ ಬೆಳೆಗಳ ಹಾಗೂ ಭೂ ಅಭಿವೃದ್ಧಿಯ ಸೌಲಭ್ಯಗಳನ್ನು ಒದಗಿಸುವುದು. ಕೆರೆಗಳ ಹೂಳೆತ್ತುವುದರ ಜೊತೆಗೆ ಸಾಂಪ್ರದಾಯಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು. ಭೂ ಅಭಿವೃದ್ಧಿ ಪ್ರವಾಹಗಳ ತಡೆಗಟ್ಟುವಿಕೆ,ಹಾಗೂ ರಕ್ಷಣಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು; ನಿಂತ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆ ಮಾಡುವುದು. ಎಲ್ಲ ಕಾಲದಲ್ಲೂ ಗ್ರಾಮೀಣ ಸಂಪರ್ಕ. ಭಾರತ ನಿರ್ಮಾಣ,ಹಾಗೂ ಗ್ರಾಮ ಜ್ಞಾನ ಸಂಪನ್ಮೂಲ ಕೇಂದ್ರವಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ನಿರ್ಮಾಣ ಮತ್ತು ಗ್ರಾಮ ಪಂಚಾಯತಿನ ಮಟ್ಟದಲ್ಲಿ ಗ್ರಾಮ ಪಂಚಾಯತ್ ಭವನದ ನಿರ್ಮಾಣ (ದಿನಾಂಕ 11.11.2009 ದ ಅಧಿಸೂಚನೆಯಲ್ಲಿ ಹೇಳಿರುವ ಪ್ರಕಾರ) ಹಾಗೂ ಕೇಂದ್ರ ಸರಕಾರವು ರಾಜ್ಯ ಸರಕಾರದ ಜೊತೆಗೆ ಸಮಾಲೋಚನೆ ನಡೆಸಿ ಅಧಿಸೂಚನೆ ಹೊರಡಿಸುವ ಯಾವುದೇ ಕೆಲಸಗಳು ಆಕರ : PIB(www.pib.nic.in)