ಸುಮಾರು 650 ಮಿ.ಮೀ. ವರೆಗೂ ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಕಾಲಾವಧಿ ಸಹ ಕಡಿಮೆ (20 ವಾರಗಳು) ಇದ್ದಾಗ, ಮಳೆಗಾಲದಲ್ಲಿ ಒಂದೇ ಬೆಳೆಯನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ ಪ್ರತಿ ವರ್ಷ ರಾಗಿಯನ್ನೇ ಬೆಳೆದುಕೊಳ್ಳದೆ ಬೆಳೆಗಳ ಬದಲಾವಣೆ ಮಾಡಿ ರಾಗಿ-ಅವರೆ, ರಾಗಿ-ತೊಗರಿ, ರಾಗಿ-ಕಡಲೆಕಾಯಿ ಬೆಳೆಗಳನ್ನು ಬೆಳೆಯುವುದು ಅನುಕೂಲಕರ ಮುಂಚಿತವಾದ ಬಿತ್ತನೆಗೆ ದೀರ್ಘಾವಧಿ ತಳಿಗಳನ್ನು ಮತ್ತು ತಡವಾದ ಬಿತ್ತನೆಗೆ ಅಲ್ಪಾವಧಿ ತಳಿಗಳನ್ನು ಆಯ್ದುಕೊಳ್ಳಬೇಕು. ಕ್ರ.ಸಂ ಬಿತ್ತನೆಯ ತಿಂಗಳು ಬೆಳೆಗಳು 1 ಮೇ ಎಳ್ಳು, ಅಲಸಂದೆ, ತೊಗರಿ, ಹರಳು, 2 ಜೂನ್ ತೊಗರಿ, ಕಡಲೆಕಾಯಿ, ಹರಳು 3 ಜುಲೈ ಮುಸುಕಿನ ಜೋಳ, ಕಡಲೆಕಾಯಿ, ರಾಗಿ 4 ಆಗಸ್ಟ್ ರಾಗಿ, ಸೋಯಾಅವರೆ, ಸೂರ್ಯಕಾಂತಿ, ಅಲಸಂದೆ 5 ಸೆಪ್ಟೆಂಬರ್ ಅಲಸಂದೆ, ಹುರುಳಿ, ನಾಟಿರಾಗಿ 6 ಅಕ್ಟೋಬರ್ ನಾಟಿರಾಗಿ, ಕಡಲೆ, ದನಿಯಾ, ಹುಚ್ಚೆಳ್ಳು ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು