ಬೆಳೆ ಪದ್ಧತಿ ಎಂದರೇನು ? ಬೆಳೆಯನ್ನು ಭೂಸಂಪನ್ಮೂಲ, ಆರ್ಥಿಕತೆ, ಹವಾಗುಣ ಮತ್ತು ಮಣ್ಣಿನ ಆಧಾರದ ಮೇಲೆ ವಿವಿಧ ಸ್ಥಿತಿಗಳಲ್ಲಿ ಹೇಗೆ ಬೆಳೆಯಬಹುದು ಎನ್ನುವುದೇ ಬೆಳೆಪದ್ಧತಿ. ವಿಧಗಳು ಏಕಬೆಳೆ ಪದ್ಧತಿ ದ್ವಿಬೆಳೆ ಪದ್ಧತಿ ತ್ರಿಬೆಳೆ ಪದ್ಧತಿ ಬಹುಬೆಳೆ ಪದ್ಧತಿ ಅಂತರ ಬೇಸಾಯ ಪದ್ಧತಿ ಕೂಳೆ ಬೆಳೆ ಪದ್ಧತಿ ಮಿಶ್ರ ಬೆಳೆ ಪದ್ಧತಿ ಏಕಬೆಳೆ ಪದ್ಧತಿ : ಒಂದು ಭೂಮಿಯಲ್ಲಿ ಒಂದು ವರ್ಷದಲ್ಲಿ ಒಂದೇ ಒಂದು ಬೆಳೆಯುನ್ನು ಬೆಳೆಯುವುದಕ್ಕೆ ಏಕಬೆಳೆ ಪದ್ಧತಿ ಎನ್ನುತ್ತಾರೆ. ಉದಾ : ಭತ್ತ (ಮಳೆಗಾಲದಲ್ಲಿ). ದ್ವಿಬೆಳೆ ಪದ್ಧತಿ : ಒಂದು ಭೂಮಿಯಲ್ಲಿ ಒಂದು ವರ್ಷ ಅಥವಾ ಒಂದು ಋತುವಿನಲ್ಲಿ ಎರಡು ಬೆಳೆಗಳನ್ನು ಬೆಳೆಸುವುದಕ್ಕೆ ದ್ವಿ ಬೆಳೆ ಪದ್ದತಿ ಎನ್ನುತ್ತಾರೆ. ಉದಾ : ಜೋಳ (ಮಳೆಗಾಲ)- ಕಡಲೆ (ಕಳಿಗಾಲ-ನೀರಾವರಿ) ಬೆಳೆ ಪದ್ಧತಿ : ಒಂದು ಭೂಮಿಯಲ್ಲಿ ಒಂದು ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯುವುದೇ ತ್ರಿಬೆಳೆ ಪದ್ಧತಿ. ಉದಾ ಆಲೂಗಡ್ಡೆ-ಹೆಸರು ಕಾಳು -ಕಲ್ಲಂಗಡಿ ಬಹುಬೆಳೆ ಪದ್ಧತಿ : ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಒಂದೇ ಭೂಮಿಯಲ್ಲಿ ಒಂದು ವರ್ಷದಲ್ಲಿ ಆದರೆ ಬೇರೆ ಬೇರೆ ಸಾಲುಗಳಲ್ಲಿ ಬೆಳೆಯುವುದೇ ಬಹುಬೆಳೆ ಪದ್ಧತಿ ಎನ್ನುತ್ತಾ.ರೆ. ಉದಾ : ಜೋಳ - ಅಲಸಂದೆ- ತೊಗರಿ -ಬೆಂಡೆ. ಅಂತರ ಬೇಸಾಯ ಪದ್ಧತಿ : ಒಂದು ಬೆಳೆಯನ್ನು ಇನ್ನೊಂದು ಬೆಳೆಯ ಸಾಲುಗಳ ನಡುವಿನ ಅಂತÀರದಲ್ಲಿ ಬೆಳೆಯುವುದಕ್ಕೆ ಅಂತರ ಬೆಳೆ ಬೇಸಾಯ ಪದ್ಧತಿ ಎನ್ನುತ್ತೇವೆ. ಉದಾ : ಕಬ್ಬಿನ ಸಾಲುಗಳ ನಡುವೆ ಉದ್ದು ಅಥವಾ ಹೆಸರು ಕಾಳು / ಸೋಯಾ ಅವರೆ. ಕೂಳೇ ಬೆಳೆ ಪದ್ಧತಿ : ಮೊದಲ ಬೆಳೆಯ ಕೊಯ್ಲಿನ ನಂತರ, ಅದರ ಕೂಳೆಗಳಿಂದ ಬೆಳೆಯನ್ನು ಬೆಳೆಸುವುದಕ್ಕೆ ಕೂಳೆ ಬೆಳೆ ಪದ್ದತಿ ಎನ್ನುತ್ತಾರೆ. ಉದಾ : ಕಬ್ಬು, ಭತ್ತ ಮಿಶ್ರ ಬೆಳೆ : ಒಂದೇ ಭೂಮಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಒಂದೇ ಋತುವಿನಲ್ಲಿ ಬೆಳೆಯುವುದಕ್ಕೆ ಮಿಶ್ರಬೆಳೆ ಎನ್ನುತ್ತಾರೆ. ಉದಾ : ರಾಗಿ + ಜೋಳ + ತೊಗರಿ + ಹುರಳಿ + ಹುಚ್ಚೆಳ್ಳು ಮತ್ತು ಇತ್ಯಾದಿ (ನವಧಾನ್ಯಗಳು) ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.