ಬೆಳೆ-ಕಳೆಗಳ ಪೈಪೋಟಿಯಲ್ಲಿ ನಿರ್ಣಾಯಕ ಅವಧಿ ಕೊನೆ ಪಕ್ಷ ಬೆಳೆಗಳ ಬೆಳವಣಿಗೆಯ ಪ್ರಾರಂಭಿಕ ಹಂತದೊಲ್ಲಿ ಕಳೆಗಳ ಪೈಪೋಟಿಯನ್ನು ಕಮ್ಮಿ ಮಾಡಿದರೆ ನಂತರ ಬರುವ ಕಳೆಗಳನ್ನು ಆ ಬೆಳೆಯು ತಾನೆ ಹಿಮ್ಮೆಟ್ಟಿಸುತ್ತದೆ. ಈ ತತ್ವದ ಆಧಾರದ ಮೇಲೆ ವಿವಿಧ ಬೆಳೆಗಳಲ್ಲಿ ಯಾವ ಸಮಯದೊಳಗೆ ಕಳೆಗಳನ್ನು ನಿಯಂತ್ರಿಸಬೇಕು ಎಂಬುದನ್ನು ಕಂಡು ಹಿಡಿದಿದ್ದಾರೆ. ಈ ನಿರ್ಣಾಯಕ ಅವಧಿಯಲ್ಲಿ ಕಳೆ ನಿಯಂತ್ರಣ ಮಾಡದಿದ್ದರೆ ಇಳುವರಿಯಲ್ಲಿ ಗಣನೀಯವಾಗಿ ನಷ್ಟವಾಗುತ್ತದೆ. ಈ ಮಾಹಿತಿಯನ್ನು ಈ ಕೆಳಕಂಡ ಪಟ್ಟಿಯಲ್ಲಿ ಕೊಡಲಾಗಿದೆ. ಈ ಪಟ್ಟಿಯಲ್ಲಿ ತಿಳಿಸಿರುವಂತೆ ಕಳೆನಿಯಂತ್ರಣವನ್ನು ಬೆಳೆಗಳನ್ನು ಬಿತ್ತಿದ 15-40 ದಿವಸದೊಳಗೆ ನಿಯಂತ್ರಿಸುವುದು ಒಂದು ಒಳ್ಳೆಯ ಪದ್ಧತಿ. ಇಲ್ಲಾವಾದಲ್ಲಿ ಇಳುವರಿಯು ಕಮ್ಮಿಯಾಗುತ್ತದೆ. ಕ್ರ.ಸಂ ಬೆಳೆಗಳು ನಿರ್ಣಾಯಕ ಅವಧಿ (ಬಿತ್ತಿದ ನಂತರ ದಿನಗಳಲ್ಲಿ) 1 ಪುಣಜಿ ಭತ್ತ 15-45 2 ನಾಟಿ ಭತ್ತ 30-45 3 ಮುಸುಕಿನ ಜೋಳ 15-45 4 ತೊಗರಿ 15-60 5 ನೆಲಗಡಲೆ 40-60 6 ಸೂರ್ಯಕಾಂತಿ 30-45 7 ಆಲೂಗಡ್ಡೆ 20-40 8 ಹತ್ತಿ 15-60 9 ಹೂ ಕೋಸು 30-45 10 ಎಲೆ ಕೋಸು 30-45 11 ಟೊಮ್ಯಾಟೊ 30-45 12 ಈರುಳ್ಳಿ 30-45 ಪಾರ್ಥೇನಿಯಂ ಕಳೆ ನಿಯಂತ್ರಣ ಪಾರ್ಥೇನಿಯಂ ಕಳೆಯು ಅಚ್ಚುಕಟ್ಟು ಪ್ರದೇಶದಲ್ಲಿ ಬಹುಬೇಗ ಹರಡುವುದರಿಂದ ಅವುಗಳು ಕಂಡ ತಕ್ಷಣವೇ ನಾಶಮಾಡಲು ಕ್ರಮ ತೆಗೆದುಕೊಳ್ಳಬೇಕು. ಈ ಕಾರ್ಯವನ್ನು ಆಗಾಗ ಮಾಡುತ್ತಲೇ ಇರಬೇಕಾಗುತ್ತದೆ. ಹೂ ಬಿಡುವುದಕ್ಕೆ ಮೊದಲು ಗಿಡಗಳನ್ನು ಕಿತ್ತುಹಾಕುವುದು ಕ್ಯಾಸಿಯ ಸೆರೆಸಿಯಾ ಚೊಗಚೆಗಿಡದ ಬೀಜಗಳನ್ನುಪಾರ್ಥೇನಿಯಂ ಬರುವ ಪ್ರದೇಶದಲ್ಲಿ ಬಿತ್ತನೆ ಮಾಡುವುದು. ಜೈಗೋಗ್ರಾಮ್ ಬೈಕೊಲಾರಾಟ ಕೀಟವನ್ನು ಪಾರ್ಥೇನಿಯಂ ಕಳೆ ತಿನ್ನಲು ಬಿಡುವುದು ಇತ್ಯಾದಿ ಕಳೆ ನಾಶಕಗಳನ್ನು ಬಳಸಿ ನಾಶ ಮಾಡುವುದು. ಈ ಎಲ್ಲಾ ಸಮಗ್ರ ಕ್ರಮಗಳನ್ನೂ ಅನುಸರಿಸಿ ಪಾರ್ಥೇನಿಯಂ ಕಳೆಯನ್ನು ನಿರ್ಮೂಲನೆ ಮಾಡಲು ಕೆಲವು ಪ್ರದೇಶಗಳಲ್ಲಿ ಪ್ರಯತ್ನಿಸಲಾಯಿತು. ಮೂಲ :ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು