ಯಾವುದೇ ವ್ಯಕ್ತಿ ಕೇಂದ್ರ ಸರ್ಕಾರ ಸಾರ್ವಜನಿಕ ಆಯೋಗಗಳ ಮಾಹಿತಿಗೆ ಸಂಬಂಧಿಸಿದ ದೂರಿಗೆ, ಕೇಂದ್ರ ಮಾಹಿತಿ ಆಯೋಗ ಅಗಸ್ಟ್ ಕ್ರಾಂತಿ ಭವನ್, ಭಿಕಾಜಿ ಕಾಮ ಪ್ಲೇಸ್, ನವ ಹೆಹಲಿ ಸಂಪರ್ಕಿಸಬಹುದು.[www.cic.gov.in] ರಾಜ್ಯ ಸರ್ಕಾರಗಳ ಸಾರ್ವಜನಿಕ ಆಯೋಗಗಳಿಗೆ ಸಂಬಂಧಿಸಿದ ದೂರುಗಳಿಗೆ ಜನರು ರಾಜ್ಯ ಮಾಹಿತಿ ಆಯೋಗಗಳನ್ನು (SIC) ಸಂಪರ್ಕಿಸಬೇಕು. ರಾಜ್ಯ ಸರ್ಕಾರಗಳ ಸಾರ್ವಜನಿಕ ಆಯೋಗಗಳ ಮಾಹಿತಿಗೆ ಸಂಬಂಧಿಸಿದಂತೆ, ದೂರುಗಳನ್ನು ಅನುಕ್ರಮವಾಗಿ ರಾಜ್ಯ ಮಾಹಿತಿ ಆಯೋಗಗಳಿಗೆ ದೂರು ಸಲ್ಲಿಸ ಬೇಕು ಏಕಕಾಲದಲ್ಲಿ ಸಂಸ್ಥೆಯ ಮುಖ್ಯಸ್ಥ ಅಥವಾ ಅಧಿಕಾರಿ ಮಟ್ಟದಲ್ಲಿ ಸರ್ಕಾರಿ ಇಲಾಖೆಯನ್ನು [ಕಾರ್ಯದರ್ಶಿ/ಮುಖ್ಯ ಕಾರ್ಯದರ್ಶಿ] ಮಧ್ಯ ಪ್ರವೇಶಿಸಲು ಸಂಪರ್ಕಿಸುವುದು ಸಹ ಸೂಕ್ತ. ಇದು ಮಾಹಿತಿ ಪಡೆಯಲು ಸಹಾಯವಾಗ ಬಹುದು. ದೂರನ್ನು ದಾಖಲಿಸಿದ ನಂತರ, ದಯವಿಟ್ಟು ಅದಕ್ಕೆ ಸಂಬಂಧ ಪಟ್ಟ ವೆಬ್ ಸೈಟ್ನಲ್ಲಿ ಸರಿಯಾಗಿ ನೋಂದಾಣಿಯಾಗಿದೆಯೇ ಮತ್ತು ನೋಂದಾಯಿತ ಸಂಖ್ಯೆ ಮತ್ತು ಸ್ಥಿತಿಗತಿಗಳನ್ನು ಪರಿಕ್ಷೀಸಿ ದೂರಿನ ಒಂದು ಪ್ರತಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ/ ಮೇಲ್ಮನವಿ ಪ್ರಾಧಿಕಾರಗೆ ಕಳುಹಿಸಿ, ಜೊತೆಗೆ ಕೇಂದ್ರ ಮಾಹಿತಿ ಆಯೋಗ/ ರಾಜ್ಯ ಮಾಹಿತಿ ಆಯೋಗ್ಯಕ್ಕೆ ಕಳುಹಿಸಿ ಅರ್ಜಿದಾರರಿಗೆ ಎರಡನೆ/ಕೊನೆಯ ಮನವಿಗೆ ದೂರು ಹೆಚ್ಚುವರಿಯಾಗಿ ಲಭ್ಯ. ಮೂಲ : ಪೋರ್ಟಲ್ ತಂಡ