ಭದ್ರತೆಗಳು ಮತ್ತು ಅವುಗಳನ್ನು ಬೆಲೆಕಟ್ಟುವ ರೀತಿಗಳು ಎಲ್.ಐ.ಸಿ. ಪಾಲಸಿಯ ಪ್ರತಿಕೂಲವಾಗಿ ಮುಂದೂಡುವಾಗ ಮಾಡುವ ಬೆಲೆಯ ರೀತಿಯು ನಿದೇ೯ಶ ಅಥವಾ ಹಂಚಿಕೆ ಇರುತ್ತದೆ. ಒಂದು ವೇಳೆ ಅಪ್ರಾಪ್ತ ವಯಸ್ಸಿನವನಿಗೆ ಅವಶ್ಯಕತೆಯಿದ್ದಾಗ ಅಪ್ರಾಪ್ತ ವಯಸ್ಸಿನವನ ಅವಧಿ ಠೇವಣಿಯನ್ನು ಅಡವಿಟ್ಟು ಅಪ್ರಾಪ್ತ ವಯಸ್ಕನ ಪೋಷಕರಿಗೆ ಸಾಲವನ್ನು ಮಂಜೂರು ಮಾಡಬಹುದು. ವಿಮಾ ಕಂಪನಿಗೆ ಹಂಚಿಕೆಯಿಂದ ಸೂಚನೆಯನ್ನು ಕೊಡದ ಹೊರತು ಮುಂಗಡದ ಭದ್ರತೆಗೆ ಎಲ್.ಐ.ಸಿ.ಯ ಹಂಚಿಕೆಯನ್ನಿಟ್ಟಾಗ, ಹಂಚಿಕೆಯು ಪೂಣ೯ವಾಗುವುದಿಲ್ಲ. ಈ ಮೇಲಿನ ಹಂಚಿಕೆಗೆ ಸೂಚನೆಯನ್ನು ನಿಯೋಜಿತ ಪ್ರತಿನಿಧಿ(ಅಸೈನಿ) ಅಥವಾ ಸಮಪಿ೯ಸುವವ (ಅಸೈನರ್)ರಲ್ಲಿ ಒಬ್ಬರು ಕೊಡಬಹುದಾಗಿದೆ. ಅಡುವಿಡುವಾಗ ಒಂದು ಅತ್ಯವಶ್ಯಕ ಅಗತ್ಯವೇನೆಂದರೆ ಅಡುವಿಯು ಕೊಳ್ಳುವವನಿಗೆ ಅಡುವಿಡುವವನು ಅಡುವಿಟ್ಟ ಸರಕನ್ನು ಪ್ರತ್ಯಕ್ಷ ಅಥವಾ ರಚನಾತ್ಮಕವಾಗಿ ಕೊಡುವುದು. ಸೂಕ್ಷ್ಮ ಆಥಿ೯ಕತೆ ಮತ್ತು ಸ್ವ-ಸಹಾಯ ಗುಂಪುಗಳು ಭವಿಷ್ಯದಲ್ಲಿ ಬದಲಾಗಬಹುದಾದಂತಹ ದೃಷ್ಟಿಕೋನದ(ದಾಖಲೆ) ಪುಸ್ತಕವನ್ನು ಇಡುವುದು ಕಡ್ಡಾಯವಾಗಿರುವುದಿಲ್ಲ. ಆದರೆ ಸಭೆಯ ನಿಣ೯ಯಗಳ ಸಾರಾಂಶದ ಪುಸ್ತಕ, ಉಳಿತಾಯ ಮತ್ತು ಸಾಲದ ಖಾತೆ ಪುಸ್ತಕ ಮತ್ತು ಸದಸ್ಯರ ಪಾಸ ಬುಕ್ ಗಳನ್ನು ಇಡುವುದು ಕಡ್ಡಾಯವಾಗಿದೆ. ಪಿ.ಎಮ್.ಆರ್.ವಾಯ್.ಯ ಅಡಿಯಲ್ಲಿ ಎಸ್.ಹೆಚ್.ಜಿ.ಗಳು ೫ ರಿಂದ ೨೦ ಶಿಕ್ಷಿತ ನಿರುದ್ಯೋಗಿ ಯುವಕರನ್ನು ಹೊಂದಿರಬಹುದಾಗಿದೆ. ಪ್ರತಿಯೊಬ್ಬ ಹಣ ಪಡೆಯುವನಿಗೆ ರೂ.೫೦,೦೦೦/- ಮೀರದಂತೆ ನೇರವಾಗಿ ಅಥವಾ ಎಸ್.ಹೆಚ್.ಜಿ/ ಜೆ.ಎಲ್.ಜಿ.ಗಳ ಮುಖಾಂತರ ಸಾಲ ಪಡೆಯುವ ಅವಕಾಶವು ಸೂಕ್ಷ್ಮ ಸಾಲವಾಗುತ್ತದೆ. ಎಲ್ಲಿ ಯಂತ್ರೋಪಕರಣ ಮತ್ತು ಯಂತ್ರಗಳ ಮೇಲಿನ ಹೂಡಿಕೆಯು ೧೦ ಲಕ್ಷದ ಮಿತಿ ಮೀರುವುದಿಲ್ಲವೋ ಅದು ಒಂದು ಕೈಗಾರಿಕೆ ವಿಭಾಗದ ಸೂಕ್ಷ್ಮ ಸಾಹಸೋದ್ಯಮವಾಗುತ್ತದೆ. ಸಾಲ ಮತ್ತು ಉಳಿತಾಯದ ಉಪಲಬ್ಧಗಳು ಬೆಳೆಯ ಸಾಲ, ಯಂತ್ರಗಳ ಸಾಲ ಮತ್ತು ಕಿಸಾನ ಕ್ರೆಡಿಟ್ ಕಾಡ೯ಗಳು ಗ್ರಾಮೀಣ ಬಡಜನರ ಒಳಿತಿಗಾಗಿ ಬ್ಯಾಂಕುಗಳು ಪರಿಚಯಿಸಿದ ಸಾಲದ ಉಪಲಬ್ಧಗಳಾಗಿರುತ್ತವೆ. ಯಾವುದೇ ಆಗ್ರಹಗಳಿಲ್ಲದ ಉಳಿತಾಯ ಖಾತೆಯನ್ನು ಗ್ರಾಮೀಣ ಬಡಜನರಿಗೆ ಇದ್ದ ಉಳಿತಾಯ ಉಪಲಬ್ಧವಾಗಿದೆ. ಸಾಲ, ಉಳಿತಾಯಗಳು, ವಿಮೆ ಮತ್ತು ಹಣ ರವಾನೆ ಮಾಡುವುದು ಈ ಸೇವೆಗಳು ಗ್ರಾಮೀಣ ಪ್ರದೇಶದಲ್ಲಿಯ ಬ್ಯಾಂಕುಗಳು ಮತ್ತು ಆಥಿ೯ಕ ಸಂಸ್ಥೆಗಳು ವಿಸ್ತರಿಸಿದ ಆಥಿ೯ಕ ಸೇವೆಗಳಾಗಿವೆ. ಬ್ಯಾಂಕ ಮಾಡಿದ ಉಪಲಬ್ಧದ ವಿನ್ಯಾಸದ ಮೂಲಭೂತ ಅಂಶಗಳು ಹಾಲಿಯಲ್ಲಿರುವ ಸಜೀವ ಸ್ಪಧೆ೯ ಮತ್ತು ಸ್ಪಧಿ೯ಗಳ ಉಪಲಬ್ಧದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಅವಶ್ಯಕತೆಯನ್ನು ಗುರುತಿಸುವುದು, ಉಪಲಬ್ಧದ ವಿನ್ಯಾಸ, ಮಾಗ೯ದಶ೯ಕ ಪರೀಕ್ಷೆ, ಮತ್ತು ಉಪಲಬ್ಧದ ಬಿಡುಗಡೆ ಇವು ಉಪಲಬ್ಧದ ಬೆಳವಣಿಗೆಯ ನಾಲ್ಕು ಘಟ್ಟಗಳಾಗಿರುತ್ತವೆ. ಸಾಲದ ಉಪಲಬ್ಧದ ವಿನ್ಯಾಸವನ್ನು ಮಾಡುವಾಗ, ಸಾಲದ ಉದ್ದೇಶ, ಸಾಲದ ಗಾತ್ರ, ಸಾಲದ ಅವಧಿ ಮತ್ತು ಮರುಪಾವತಿಯ ಪುನರಾವತ೯ನೆಗಳನ್ನು ಸಾಲ ಪಡೆಯುವವನ ನಗದು ಹರಿವಿನ ಪ್ರವಾಹದ ಆಧಾರದ ಮೇಲೆ ನಿಣ೯ಯಿಸಲಾಗುತ್ತದೆ. ವಗಾ೯ವಣೆ ಬೆಲೆ (ವೈಕಲ್ಪಿಕ ಬೆಲೆ) ಮತ್ತು ಉಳಿತಾಯದ ಬಡ್ಡಿಯ ವೆಚ್ಚಗಳ ನಡುವಿನ ವೈಶಮ್ಯವನ್ನು ‘ ವಂತಿಗೆ ಮಾಜಿ೯ನ ಎಂದು ಕರೆಯಲಾಗುತ್ತದೆ. ಮೂಲ: ಪೋರ್ಟಲ್ ತಂಡ