ವಿ= ಸ್ಥಿರ ಸಂದಾಯಗಳು/ಆದಾಯಗಳ ಒಂದು ಸರಣಿ. ಒಂದು ನಿದಿ೯ಷ್ಟ ಪುನರಾವತ೯ನೆಯಲ್ಲಿ, ಒಂದು ನಿದಿ೯ಷ್ಟ ಅವಧಿಯಲ್ಲಿ . ಉದಾ:- ಪ್ರತಿ ವಷ೯ ರೂ.೧೦೦೦ ದ ಸಂದಾಯ ಎಲ್.ಆಯ್.ಸಿಯಿಂದ ಮುಂದಿನ ೨೦ ವಷ೯ಗಳ ವರೆಗೆ. ೧೦೦ ರೂಪಾಯಿ ಪುನರಾವತಿ೯ತ ಠೇವಣಿ ಬ್ಯಾಂಕಿನಲ್ಲಿ ಐದು ವಷ೯ಗಳವರೆಗೆ. ಎರಡು ತರಹದ ವಷಾ೯ಶನಗಳು :- ಸಾಧಾರಣ ವಷಾ೯ಶನ, ಸಂದಾಯವು ಪ್ರತಿ ಅವಧಿಯ ಕೊನೆಯಲ್ಲಿ ಮಾತ್ರ ಇರುತ್ತದೆ. ತೆರಬೇಕಾದ ವಷಾ೯ಶನ: ಸಂದಾಯವು ಪ್ರತಿ ಅವಧಿಯ ಪ್ರಾರಂಭದಲ್ಲಿ ಇರುತ್ತದೆ. ವಷಾ೯ಶನದ ಹಾಲಿ ಮತ್ತು ಮುಂಬರುವ ಮೌಲ್ಯ ಪಿ.ವಿಯ ವಷಾ೯ಶನವನ್ನು ಲೆಕ್ಕ ಹಾಕಲು, ಪ್ರತಿ ಪಿವಿ ಯ ಸಂದಾಯವನ್ನು ಲೆಕ್ಕ ಮಾಡಬೇಕು ಮತ್ತು ಎಲ್ಲವನ್ನು ಕೂಡಿಸಬೇಕು. ಉದಾ:- ಒಂದು ವೇಳೆ ೧೦೦ ರೂಪಾಯಿಯನ್ನು ಪ್ರತಿ ವಷ೯ದ ಕೊನೆಯಲ್ಲಿ ೧೦ ವಷ೯ಗಳವರೆಗೆ ಸಂದಾಯ ಮಾಡಿದರೆ, ನಾವು ಈ ಎಲ್ಲ ೧೦೦ ಸಂದಾಯಗಳ ಪಿ.ವಿ.ಯನ್ನು ರೂ.೧೦೦ ಕ್ಕೆ ಬೇರೆ ಬೇರೆಯಾಗಿ ಲೆಕ್ಕ ಮಾಡಿ ಎಲ್ಲ ಹತ್ತು ಮೊತ್ತಗಳನ್ನು ಕೂಡಿಸಬೇಕು. ಅದೇ ರೀತಿ ಎಫ್.ವಿ.ಯ ವಷಾ೯ಶನವನ್ನು ಲೆಕ್ಕ ಹಾಕಲು ಪ್ರತೀ ವಷ೯ದ ಪಿ.ವಿಯ ಸಂದಾಯವನ್ನು ಲೆಕ್ಕ ಮಾಡಿ ಕೂಡಿಸಬೇಕಾಗುತ್ತದೆ. ಉದಾ:- ಒಂದು ವೇಳೆ ೧೦೦ ರೂಪಾಯಿಗಳನ್ನು ಪ್ರತಿ ವಷ೯ದ ಕೊನೆಯಲ್ಲಿ ೧೦ ವಷ೯ದ ಕೊನೆಯಲ್ಲಿ ೧೦ ವಷ೯ಗಳವರೆಗೆ ಸಂದಾಯ ಮಾಡಿದರೆ, ನಾವು ಈ ಎಲ್ಲ ೧೦ ಸಂದಾಯಗಳ ಎಫ್.ವಿ.ಯನ್ನು ರೂ.೧೦೦ಕ್ಕೆ ಬೇರೆ ಬೇರೆಯಾಗಿ ಲೆಕ್ಕ ಮಾಡಿ ಎಲ್ಲ ಮೌಲ್ಯಗಳನ್ನು ಕೂಡಿಸಬೇಕು. ಪಿ.ವಿ. ಮತ್ತು ಎಫ್.ವಿ.ಗಳ ಲೆಕ್ಕಮಾಡುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು ಪುಸ್ತಕಗಳಲ್ಲಿ ಕೊಟ್ಟ ಸೂತ್ರದಿಂದ ನಾವು ಆರ್.ನ ಸರಿಯಾದ ಲೆಕ್ಕಕ್ಕೆ ತಲುಪಬೇಕು. ಅಂದರೆ ಬಡ್ಡಿ ದರ ಉದಾ:- ದತ್ತ ಬಡ್ಡಿ ದರವು ೧೨% ಪ್ರತಿ ವಷ೯ಕ್ಕೆ ಇದ್ದು, ಒಂದು ವೇಳೆ ಸಂದಾಯವನ್ನು ಪ್ರತಿ ವಷ೯ ಪಡೆದರೆ , ಆರ್=೧೨/೧೦೦=೦.೧೨ , ಆದರೆ ಒಂದು ವೇಳೆ ಸಂದಾಯವನ್ನು ಮಾಸಿಕವಾಗಿ ಪಡೆದರೆ ಅದು ೧೨/೧೦೦*೧೨=೦.೦೧ ಆಗುತ್ತದೆ. ತ್ರೈಮಾಸಿಕ ಸಂದಾಯಕ್ಕೆ ಅದು ೦.೦೩ ಆಗುತ್ತದೆ ಮತ್ತು ಅಧ೯ ವಷ೯ದ ಸಂದಾಯಕ್ಕೆ ಅದು ೦.೦೬ ಆಗುವುದು. ಕಡಿಮೆಯಾಗುವ ನಿಧಿ ಇದರ ಕಲ್ಪನೆಯು ವಷ೯ಶನದ ಹಾಗೆಯೇ ಇದೆ. ನಿಮಗೆ ಒಂದು ಸ್ಥಿರ ಮೊತ್ತ(ಎ) ೫ ವಷ೯ಗಳ ನಂತರ ಬೇಕೆಂದು ತಿಳಿದುಕೊಳ್ಳಿ, ನೀವು ಬ್ಯಾಂಕಿನಲ್ಲಿ ಪ್ರತಿ ವಷ೯ ಮೊತ್ತ (ಸಿ)ಯ ಠೇವಣಿ ಇಡಬೇಕು. ಇದು ೫ ವಷ೯ಗಳ ನಂತರ ಎ ಆಗುತ್ತದೆ ಮತ್ತು ಇದನ್ನು ಋಣ ತೀರಿಸಲು ಅಥವಾ ಯಾವುದೇ ಉದ್ದೇಶಕ್ಕೆ ಬಳಸಬಹುದಾಗಿದೆ. ನಮಗೆ ಬಡ್ಡಿ ದರ ಮತ್ತು ಎಫ್.ವಿ.ಗೊತ್ತಿದ್ದ ಕಾರಣ ನಾವು ‘ ಸಿ ’ ಯನ್ನು ಲೆಕ್ಕ ಹಾಕಬಹುದು. ಕರಾರು ಪತ್ರ ಕರಾರು ಪತ್ರವು ಕರಾರು ಪತ್ರಕೊಡುವವರು ಎತ್ತಿದ ಒಂದು ತರದ ಋಣವಾಗಿದೆ. ಕರಾರು ಪತ್ರ ಕೊಡುವವರು ಖರೀದಿ ಮಾಡುವವರಿಗೆ ಅದರ ಹಣ ಉಪಯೋಗಿಸಿದ್ದಕ್ಕಾಗಿ ಬಡ್ಡಿ ಕೊಡುತ್ತಾರೆ. ಕರಾರು ಪತ್ರಕ್ಕೆ ಸಂಬಂಧಿಸಿದ ಪದಗಳು:- ಮುಖಮೌಲ್ಯ, ಹಕ್ಕಿನ ಚೀಟಿಯ ದರ, ಪರಿಪಕ್ವತೆ,(ಮ್ಯಾಚುರಿಟಿ) ಮರಳಿ ಕೊಳ್ಳುವಿಕೆಯ ಮೌಲ್ಯ , ಮಾರುಕಟ್ಟೆ ಮೌಲ್ಯ. ಮುಖ ಮೌಲ್ಯ ಮತ್ತು ಮರಳಿ ಕೊಳ್ಳುವಿಕೆಯ ಮೌಲ್ಯ, ಬೇರೆಯಾಗಿರಬಹುದು, ಆದರೆ ಅವು ಸ್ಥಿರವಾಗಿರುತ್ತವೆ ಮತ್ತು ಗೊತ್ತಿರುತ್ತವೆ. ಕರಾರು ಪತ್ರದ ಮಾರುಕಟ್ಟೆ ಮೌಲ್ಯ ಮುಖ ಮೌಲ್ಯಗಿಂತ ಬೇರೆಯಾಗಿರಬಹುದು ಮತ್ತು ಅದು ಬದಲಾಗುತ್ತಿರುತ್ತದೆ. ಕರಾರು ಪತ್ರಗಳ ಮೌಲ್ಯ ಮಾಪನ ಕರಾರು ಪತ್ರ ಖರೀದಿಸುವವನು ಮ್ಯಾಚುರಿಟಿಯ ನಂತರ ನಿಯಮಿತವಾಗಿ ಬಡ್ಡಿಯ ಸಂದಾಯ ಮತ್ತು ಮರಳಿಕೊಳ್ಳುವಿಕೆಯ ಮೊತ್ತ ಪಡೆಯುತ್ತಾನೆ. ಕರಾರು ಪತ್ರದ ಮೇಲಿನ ಬಡ್ಡಿ (ಇದನ್ನು ಹಕ್ಕಿನ ಚೀಟಿಯ ದರ ಎಂತಲೂ ಕರೆಯುತ್ತಾರೆ)ಯು ಅದನ್ನು ಕೊಡುವಾಗ ಸ್ಥಿರವಾಗಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಬಡ್ಡಿದರವು ಬದಲಾಗುತ್ತಿರುತ್ತದೆ. ಮತ್ತು ಆದ್ದರಿಂದ , ಕರಾರು ಪತ್ರದ ಮಾರುಕಟ್ಟೆ ಬೆಲೆಯೂ ಬದಲಾಗುತ್ತದೆ. ಕರಾರು ಪತ್ರದ ಮಾರುಕಟ್ಟೆ ಬೆಲೆ ಅಥವಾ ವಾಸ್ತವಿಕ ಮೌಲ್ಯವು ಮುಖ ಮೌಲ್ಯಕ್ಕಿಂತ ಭಿನ್ನವಾಗಿರುತ್ತದೆ. ಒಂದು ವೇಳೆ ಯಾವುದೇ ಸಮಯದಲ್ಲಿ ಹಕ್ಕು ಚೀಟಿಯ ದರವು ಮಾರುಕಟ್ಟೆಯ ಬಡ್ಡಿ ದರಕ್ಕಿಂತ ವಿಭಿನ್ನವಾಗಿದೆ ಮಾರುಕಟ್ಟೆ ಮೌಲ್ಯವು ಬಳಕೆಯಾಗುವ ಮಾರುಕಟ್ಟೆ ಬೆಲೆಯ ರಿಯಾಯತಿ ಹಕ್ಕು ಚೀಟಿಯ ಪಾವತಿಗಳು ಮತ್ತು ಮರಳಿಕೊಳ್ಳುವಿಕೆಯ ಮೌಲ್ಯಕ್ಕೆ ಸಮನಾಗಿರುತ್ತದೆ. ಪತ್ರಗಳ ಮೇಲಿನ ಉತ್ಪನ್ನ ಚಾಲ್ತಿ ಉತ್ಪನ್ನ= ಹಕ್ಕಿನ ಚೀಟಿಯ ಬಡ್ಡಿ / ಹಾಲಿ ಮಾರುಕಟ್ಟೆ ಬೆಲೆ. ಉದಾ:- ಒಂದು ವೇಳೆ ಕರಾರು ಪತ್ರದ ಮುಖ ಮೌಲ್ಯವು ರೂ.೫೦/- ಇದ್ದರೆ, ಹಕ್ಕು ಚೀಟಿಯ ದರ ೮% ಪ್ರತಿ ವಷ೯ಕ್ಕೆ ಇದ್ದರೆ ಮತ್ತು ಮಾರುಕಟ್ಟೆ ಬೆಲೆಯು ರೂ.೪೦/-ಇದ್ದರೆ ಚಾಲ್ತಿ ಉತ್ಪನ್ನ = ೪/೪೦=೦.೧ ಅಥವಾ ೧೦% ಪರಿಪಕ್ವತೆಯ ಉತ್ಪನ್ನವು (ವಾಯ್.ಟಿ.ಎಮ್.)ಯಾವಾಗ ಎಲ್ಲ ಭವಿಷ್ಯದ ಹಣದ ಹರಿವು ಹಾಲಿ ಮಾರುಕಟ್ಟೆ ಮೌಲ್ಯಕ್ಕೆ ಸಮವಾಗಿರುತ್ತವೆಯೋ ಆ ರಿಯಾಯತಿಯ ದರ ಆಗಿರುತ್ತದೆ. ಕರಾರು ಪತ್ರಗಳ ಮೌಲ್ಯಮಾಪನಕ್ಕೆ ಇರುವ ಸಿಧ್ದಾಂತಗಳು ಮಾರುಕಟ್ಟೆಯ ಬಡ್ಡಿ ದರದ ಬದಲಾವಣೆಯ ಪರಿಣಾಮ. ಪರಿಪಕ್ವತೆ ಅವಧಿಯ ಪರಿಣಾಮ. ಕರಾರು ಪತ್ರದ ಬೆಲೆಯು ವಾಯ್.ಟಿ.ಎಮ್ ಗೆ ವಿಲೋಮ ಅನುಪಾತದಲ್ಲಿರುತ್ತದೆ. ಬಡ್ಡಿ ದರದ ಸ್ಥಿತಿ ಸ್ಥಾಪಕತ್ವ = ಬೆಲೆಯಲ್ಲಿನ ಪ್ರತಿಶತ ಬದಲಾವಣೆ/ ವಾಯ್.ಟಿ.ಎಮ್ ನ ಪ್ರತಿಶತ ಬದಲಾವಣೆ. ಪ್ರಧಾನ ನಿಧಿಯ ಆಯವ್ಯಯ ಪತ್ರ ತಯಾರಿಸುವುದು ಅನೇಕ ಯೋಜನೆಗಳ ಮಧ್ಯೆ ಆರಿಸಲು ಉಪಯೋಗಿಸಲಾಗುತ್ತದೆ ಒಂದು ಪ್ರಧಾನ ನಿಧಿ ಯೋಜನೆಯು ಪ್ರಧಾನ ನಿಧಿ ಹೊರ ಹರಿವು(ಹೂಡಿಕೆ) ಮತ್ತು ಪ್ರಧಾನ ನಿಧಿ ಒಳಹರಿವು(ನಿವ್ವಳ ಲಾಭ)ವನ್ನು ಯೋಜನೆಯ ಅವಧಿಯ ಉದ್ದಕ್ಕೂ ಒಳಗೊಂಡಿರುತ್ತದೆ. ಎಲ್ಲ ನಗದು ಒಳಹರಿವಿನ ಪಿ..ವಿ.ಯು ಧನಾತ್ಮಕವಾಗಿರುತ್ತದೆ. ಮತ್ತು ಎಲ್ಲ ನಗದ ಹೊರಹರಿವಿನ ಪಿ.ವಿ.ಯು ಋಣಾತ್ಮಕವಾಗಿರುತ್ತದೆ. ಪಿ.ವಿ.ಯು ರಿಯಾಯತಿ ದರದ ಮೇಲೆ ಅವಲಂಬಿತವಾಗಿರುತ್ತದೆ.(ಪ್ರಧಾನ ನಿಧಿಯ ವೆಚ್ಚ) ಎಲ್ಲ ನಗದು ಒಳಹರಿವು ಮತ್ತು ನಗದು ಹೊರಹರಿವಿನ ಪಿ.ವಿ.ಗಳ ಸಂಕಲನವನ್ನು ನಿವ್ವಳ ಹಾಲಿ ಮೌಲ್ಯ(ಎನ್.ಪಿ.ವಿ) ಎಂದು ಕರೆಯುತ್ತಾರೆ. ಆಯ್.ಆರ್.ಅರ್. ವು ಯಾವ ಯೋಜನೆಯ ಎನ್.ಪಿ.ವಿ.ಯು ಶೂನ್ಯವಾಗಿರುತ್ತದೆಯೋ ಆ ರಿಯಾಯತಿ ದರವಾಗಿರುತ್ತದೆ. ಪ್ರಧಾನ ನಿಧಿಯ ಆಯವ್ಯಯ ತಯಾರಿಸಲು ಬೇರೆ ವಿಧಾನವು ಮರಳಿ ಸಂದಾಯ ಅವಧಿ ವಿಧಾನವಾಗಿದೆ. ವಸ್ತುಗಳ ಸವಕಳಿಗಾಗಿ ಕೊಡಮಾಡಿದ ಬೆಲೆ ವಸ್ತುಗಳ ಸವಕಳಿಗಾಗಿ ಕೊಡಮಾಡಿದ ಬೆಲೆಯ ಪರಿಕಲ್ಪನೆ. ಸರಳ ರೇಖಾವಿಧಾನ(ವೆಚ್ಚ-ಉಳಿವು ಮೌಲ್ಯ) ಅಂದಾಜಿಸಿದ ಉಪಯೋಗಕ್ಕೆ ಬರುವಂತಹ ಜೀವಮಾನ. ಕಡಿಮೆ ಬರೆದ ಮೌಲ್ಯದ ವಿಧಾನ ಅಥವಾ ಕಡಿಮೆಯಾಗುವ ಶೇಷ ವಿಧಾನ: ಪ್ರತಿಶತವು ಸ್ಥಿರವಾಗಿರುತ್ತದೆ. ವಿದೇಶಿ ವಿನಿಮಯದ ಅಂಕಗಣಿತ ಮುಂಚಿನ ದಿನಗಳಲ್ಲಿ ಆರ್.ಬಿ.ಐ.ಯು ವಿದೇಶಿ ವಿನಿಮಯದ ಮಾರುವ ಮತ್ತು ಕೊಂಡುಕೊಳ್ಳುವ ದರವನ್ನು ನಿಗದಿಗೊಳಿಸುತ್ತಿತ್ತು. ಈಗ ಎಲ್.ಇ.ಆರ್.ಎಮ್.ಎಸ್.(ಉದಾತ್ತ ವಿನಿಮಯ ದರ ನಿವ೯ಹಣಾ ಪಧ್ಧತಿ)ಯನ್ನು ಬಳಸಲಾಗುತ್ತದೆ. ನೇರ ಮತ್ತು ಅಪರೋಕ್ಷ ಉಲ್ಲೇಖನಗಳು. ದಿನಾಂಕ:-೦೨/೦೮/೧೯೯೩ ರಿಂದ ನೇರ ಉಲ್ಲೇಖನಗಳನ್ನು ಮಾತ್ರ ಬಳಸಲಾಗುತ್ತದೆ. ಛೇದಕ ದರ/ ಸರಪಳಿ ನಿಯಮ: ಉದಾ:- ಒಂದು ವೇಳೆ ೧ ಯು.ಎಸ್.ಡಾಲರ್ =ರೂ.೪೮ ಮತ್ತು ೧ ಯುರೋ = ಯು.ಎಸ್.ಡಾಲರ ೧.೨೫ ಮುಂದೆ ೧ ಯುರೋ = ರೂ೧.೨೫ * ೪೮ ಆಗುತ್ತದೆ. ಮೌಲ್ಯ ದಿನಾಂಕ:- ನಗದು/ತಯಾರಿ, ಟಿ.ಓ.ಎಮ್, ಸ್ಥಳ, ಮುಂದೆ ಮಾಡುವುದು. ಹೆಚ್ಚಿನ ಮತ್ತು ರಿಯಾಯತಿ. ಹೆಚ್ಚಿನ ಮತ್ತು ರಿಯಾಯತಿಯ ಮೇಲೆ ಪ್ರಭಾವ ಬೀರುವ ಅಂಶಗಳು. ಮೂಲ: ಪೋರ್ಟಲ್ ತಂಡ