ವಿಲ್ಸನ್, ಕೆನ್ನೆತ್ ಗೆಡ್ಡೆಸ್ (1936--) ೧೯೮೨ ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಪ್ರಾವಸ್ಥೆಗಳ ಸ್ಥಿತ್ಯಂತರ (PHASE TRANSITION) ತಿಳಿಸಿದಾತ.ಭೌತ ವ್ಯವಸ್ಥೆಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಸಾಗುವುದನ್ನು ಸೈದ್ಧಾಂತಿಕವಾಗಿ ಸಾಕಷ್ಟು ಸರಳವಾಗಿ ವಿಶ್ಲೇಷಿಸಬಹುದು. ಆದರೆ ಎರಡು ಅವಸ್ಥೆಗಳ ಮಧ್ಯದ ಸ್ಥಿತ್ಯಂತರದ ವಿಶ್ಲೇಷಣೆ ಅಸಾಧ್ಯ ಎನ್ನುವಷ್ಟು ಜಟಿಲವಾದುದು. ಭೌತಿಕ ಕ್ರಿಯೆಗಳು ಜರುಗುವ ಅವಧಿಗಳು ಶೀಘ್ರವಾಗಿ ಬದಲಾಗುವುದೇ ಈ ಕ್ಲಿಷ್ಟತೆಗೆ ಮೂಲ ಕಾರಣ . 1974ರಲ್ಲಿ ವಿಲ್ಸನ್ ಇವುಗಳನ್ನು ವಿಶ್ಲೇಷಿಸುವ, ವಿವರಿಸುವ ತಂತ್ರ ನೀಡಿದನು. ಉದಾಹರಣೆಗೆ ಅನುಕಾಂತೀಯ (PARAMAGNETISM) ವಸ್ತುವೊಂದನ್ನು ಕಾಂತಗೊಳಿಸುವಾಗ, ಪರಮಾಣುಗಳು ಪಂಜ್ತೀಕರಣಗೊಳ್ಳುತ್ತವೆ (ALIGN).ಆಗ ಈ ಪ್ರಭಾವ ಒಂದು ಪರಮಾಣುವಿನಿಂದ ಪರಮಾಣುವಿಗೆ ಒಂದು ಅಣುವಿನಿಂದ ಇನ್ನೊಂದು ಅಣುವಿಗೆ ಅತ್ಯಲ್ಪ ಕಾಲಾವಧಿಯಲ್ಲಿ ವರ್ಗಾಂತರವಾಗುತ್ತದೆ. ಎಲ್. ಕಡನಾಫ್ಇಂತಹ ಪರಮಾಣುಗಳ ಗಿರಕಿಯನ್ನು ವರ್ಧಿಸಿ ಸ್ಥಿತ್ಯಂತರವನ್ನು ಅಳೆಯಬಹುದೆಂದು ಹೇಳಿದ್ದನು. ವಿಲ್ಸನ್ ಈ ತತ್ವದ ಹಿನ್ನೆಲೆಯಲ್ಲಿ ಕಾಂತ ವಸ್ತುಗಳು, ಮಿಶ್ರಲೋಹದ ಬದಲಾವಣೆ, ದ್ರವದಿಂದ ಅನಿಲ ರೂಪಾಂತರಿಕೆಯ ಸ್ಥಿತ್ಯಂತರಗಳನ್ನು ಅಳೆದನು. ಇದಕ್ಕಾಗಿ ವಿಲ್ಸನ್ 1982ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಮೂಲ: ವಿಜ್ಞಾನಿಗಳು