ಯಾವುದಾದರೊಂದು ಭಾಷೆಯಲ್ಲಿ ನಾವು ದಾಸ್ತಾವೇಜುಗಳನ್ನು ಮಾಡುವಾಗ ನಮಗೆ ಬೇಕು word processing ತಂತ್ರಾಂಶ ಕನ್ನಡ ಟೈಪ್ ಮಾಡಲು ಬೇಕಾಗುವ ತಂತ್ರಾಂಶ ಫಾಂಟ್ ಗಳು ಉಬುಂಟುವಿನಲ್ಲಿ ಕನ್ನಡ ಓದುವುದು, ಬರೆಯುವುದು ಬಹಳ ಸುಲಭ. ಇತ್ತೀಚಿನ ಉಬುಂಟು ಆವೃತ್ತಿಗಳಲ್ಲಿ ಕನ್ನಡವನ್ನು ಯಾವುದೇ ಕಷ್ಟವಿಲ್ಲದೇ ಓದಬಹುದು. ಅದಕ್ಕೆ ಬೇಕಿರುವ ಕೆಲವು ಫಾಂಟ್ ಗಳು ಉಬುಂಟುವಿನ ಜೊತೆಯಲ್ಲಿಯೇ ಸ್ಥಾಪಿತವಾಗಿರುತ್ತವೆ. ಕನ್ನಡದಲ್ಲಿ ಟೈಪಿಸಲು ಐ-ಬಸ್ (ibus) ಎಂಬ ತಂತ್ರಾಂಶ ಲಭ್ಯವಿದ್ದು ಬಹಳ ಸಕ್ಷಮವಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಮ್ಮ ಉಬುಂಟುವಿನಲ್ಲಿ ಸ್ಥಾಪಿಸಿಕೊಳ್ಳುವುದು ಸುಲಭ ಸಾಧ್ಯ. ಕೆಳಗೆ ಕೊಟ್ಟಿರುವ ಸಲಹೆಗಳನ್ನು ಅಂತೆಯೇ ಬಳಸಿ. IBUS ಅನ್ನು ಆಯ್ದು ಕೊಳ್ಳುವುದು ಭಾಷೆಯ ಆಯ್ಕೆ ಇತ್ಯಾದಿಗಳಿಗೆ ಸಹಕರಿಸುವ ತಂತ್ರಾಂಶವನ್ನು ಈ ಮೆನುವಿನಿಂದ ಪಡೆಯಬಹುದು Application → System Tools → System Settings → Language Support ಅದು ಈ ಕೆಳಕಂಡಂತೆ ಕಾಣುತ್ತದೆ. ಇಲ್ಲಿ Install / Remove Languages ಕ್ಲಿಕ್ ಮಾಡಿ, ಮುಂದಿನ ವಿಂಡೋದಲ್ಲಿ ಕನ್ನಡ ಆಯ್ಕೆ ಮಾಡಿ, ಅಪ್ಲೈ ಕ್ಲಿಕ್ ಮಾಡಿ. ನಂತರ, ಮೊದಲನೆ ವಿಂಡೋದಲ್ಲಿ “Keyboard Input Method System” ನಲ್ಲಿ “ibus” ಆಯ್ಕೆ ಮಾಡಿಕೊಂಡು, ವಿಂಡೋವನ್ನು ಮುಚ್ಚಿ. IBUS ಅನ್ನು ಕ್ರಿಯಾಶೀಲಗೊಳಿಸುವುದು: ನೀವು ಲಾಗಿನ್ ಆದಾಗ IBUS ಸ್ವಯಂ ಆಗಿ ಪ್ರಾರಂಭವಾಗುವುದಿಲ್ಲ ,ಹಾಗಾಗಬೇಕಾದರೆ ಅದನ್ನು startup applications list ನಲ್ಲಿ ಸೇರಿಸಬೇಕು. ಡೆಸ್ಕ್ ಟಾಪ್ ಮೇಲಿರುವ Applications → System Tools → Preferences → Startup Applications ಮೇಲೆ ಕ್ಲಿಕ್ ಮಾಡಿ. "Add" ಬಟನ್ ಮೇಲೆ ಕ್ಲಿಕ್ ಮಾಡಿ. "ibus-daemon" ಎಂದು ಕಮಾಂಡ್ ಟೈಪ್ ಮಾಡಿ. "Add" ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಭಾಷೆಯನ್ನು ಸೆಟ್ ಮಾಡುವುದು: ಡೆಸ್ಕ್ ಟಾಪ್ ಮೇಲಿರುವ Application → System Tools → Preferences → Ibus Preferences ಮೇಲೆ ಕ್ಲಿಕ್ ಮಾಡಿ. 'Input Method' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಭಾಷೆಯನ್ನು drop down ಮೆನುವಿನಿಂದ ಆರಿಸಿ. "Add" ಬಟನ್ ಮೇಲೆ ಕ್ಲಿಕ್ ಮಾಡಿ. ಅದನ್ನು ಎಲ್ಲಕ್ಕಿಂತ ಮೇಲೆ ತನ್ನಿ. Close ಬಟನ್ ಮೇಲೆ ಕ್ಲಿಕ್ ಮಾಡಿ. Word Processor ನಲ್ಲಿ ಮಾಡಬೇಕಾದಂತಹ ಸೆಟ್ಟಿಂಗ್ಸ್ Application → Office → OpenOffice.org Word processor ಮೇಲೆ ಕ್ಲಿಕ್ ಮಾಡಿ Menu bar ಮೇಲಿರುವ Tools → Options ಮೇಲೆ ಕ್ಲಿಕ್ ಮಾಡಿ. Tools → Options ಪಟ್ಟಿ ಯಲ್ಲಿರುವ Language settings ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. Languages ಆಯ್ಕೆ ಮಾಡಿ. Enabled for Complex Text Layout(CTL) ಬಾಕ್ಸ್ ಅನ್ನು ಕ್ರಿಯಾಶೀಲ (Enable)ಗೊಳಿಸಿ ಮತ್ತು Default languages for Documents ನ CTL ನಲ್ಲಿ Kannada ಆಯ್ಕೆ ಮಾಡಿ. OK ಮೇಲೆ ಕ್ಲಿಕ್ ಮಾಡಿ. ಪುನಃ Menu bar ಮೇಲಿರುವ Tools → Options ಮೇಲೆ ಕ್ಲಿಕ್ ಮಾಡಿ. Tools → Options ಪಟ್ಟಿ ಯಲ್ಲಿರುವ OpenOffice.org Writer ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, Basic Fonts( CTL) ಅನ್ನು ಆಯ್ಕೆ ಮಾಡಿ . Basic Fonts( CTL) ಡೈಲಾಗ್ ಬಾಕ್ಸ್ ನಲ್ಲಿ Default, Heading, List, Caption, Index ಗಳ ಮುಂದಿನ ಬಾಕ್ಸ್ ಗಳಲ್ಲಿ Lohit Kannada ವನ್ನು ಆಯ್ಕೆ ಮಾಡಿ . OK ಮೇಲೆ ಕ್ಲಿಕ್ ಮಾಡಿ. ಗಣಕ ಯಂತ್ರವನ್ನು ಒಮ್ಮೆ Log off ಮಾಡಿ ಮತ್ತು login ಆಗಿ. ಮೂಲ: ಕರ್ನಾಟಕ ಶಿಕ್ಷಣ