Application → Office → OpenOffice.org Word processor ಮೇಲೆ ಕ್ಲಿಕ್ ಮಾಡಿದ ನಂತರ ಖಾಲಿ ಕಡತ ತೆರೆಯುತ್ತದೆ. ಅದರಲ್ಲಿ ಕನ್ನಡವನ್ನು ಟೈಪ್ ಮಾಡಲು ಕೀ ಬೋರ್ಡ್ ನಲ್ಲಿರುವ CTRL ಕೀಯನ್ನು ಒತ್ತಿ ಹಿಡಿದು SPACE BAR ಕೀಯ ನ್ನು ಒತ್ತಿರಿ ನಿಮ್ಮ ibus prefernces ನಲ್ಲಿರುವ ಮೊದಲನೇಯ ಆಯ್ಕೆ Kn-kgp (Kannada Ganaka parishat key-map ) ನುಡಿ ರೀತಿಯಲ್ಲಿ ಟೈಪ್ ಮಾಡಬಹುದು. ಕನ್ನಡದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಇಂಗ್ಲೀಷ್ ಪದ ಅಥವಾ ಸಂಖ್ಯೆ ಗಳನ್ನು ಬಳಸಬೇಕಾದರೆ ಮತ್ತೊಮ್ಮೆ ನಿಮ್ಮ ಕೀ ಬೋರ್ಡ್ ನಲ್ಲಿರುವ CTRL ಕೀಯನ್ನು ಒತ್ತಿ ಹಿಡಿದು SPACE BAR ಕೀಯನ್ನು ಒತ್ತಿರಿ . ಈ ರೀತಿಯಾಗಿ ನಿಮ್ಮ ಕಡತದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿಯೂ ಟೈಪ್ ಮಾಡಬಹುದು. kn-kgp (ನುಡಿ) ಕೀಲಿಮಣೆ ವಿನ್ಯಾಸ : ಗಮನಿಸಿ : ಇಲ್ಲಿ ಅರ್ಕಾ ಒತ್ತು ಹಾಕಲು ಸ್ವಲ್ಪ ಬದಲಾವಣೆ ಮಾಡಬೇಕು ಉದಾ: ಸೂರ್ಯ ಎಂದು ಟೈಪ್ ಮಾಡಬೇಕಾದರೆ sUyFನ ಬದಲಾಗಿ sUrfy ಎಂದು ಟೈಪ್ ಮಾಡಬೇಕು. ಒಂದು ಪದದ ಮಧ್ಯದಲ್ಲಿ ವ್ಯಂಜನಾಕ್ಷರ ಬಂದಲ್ಲಿ, (ಉದಾ: ಇನ್ಸರ್ಟ್) inffsrfqff ಎಂದು ಟೈಪ್ ಮಾಡಿದಾಗ 'ನ್'ಅಕ್ಷರದ ನಂತರ ಬರುವ 'ಸ' ಅಕ್ಷರ ಒತ್ತಕ್ಷರವಾಗುವುದನ್ನು ತಪ್ಪಿ ಸಬಹುದು (ಎರಡು ಬಾರಿ 'f'ಅನ್ನು ಒತ್ತುವುದು) ಮೂಲ: ಕರ್ನಾಟಕ ಶಿಕ್ಷಣ