ಟೇಬಲ್ ರಚಿಸುವುದು: ಬೇರೆ ರೀತಿಯಲ್ಲಿ ತಿಳಿಸಲು ಕಷ್ಟಕರವಾದ ಡೇಟಾವನ್ನು ತೋರಿಸಲು ವರ್ಡ್ ನಲ್ಲಿ ಟೇಬಲ್ ರಚಿಸುವ ಮೊದಲ ಹಂತಗಳನ್ನು ನಿಮಗೆ ಈ ಸೆಶನ್ ಕಲಿಸುತ್ತದೆ. ಟೇಬಲ್ ಎಂದರೇನು? ರೋ ಮತ್ತು ಕಾಲಮ್ ಗಳಲ್ಲಿ ವ್ಯವಸ್ಥೆಗಳಿಸಿದ ಪರಸ್ಪರ ಸಂಬಂಧಪಟ್ಟ ಡೇಟಾದ ಸಂಗ್ರಹವೇ ಟೇಬಲ್. ಟೇಬಲ್ನಲ್ಲಿ ಡೇಟಾದ ಅಡ್ಡ ಸಾಲಿನ ನಿರೂಪಣೆಯೇ ರೋ; ಡೇಟಾದ ಲಂಬ(ಕಂಬ) ಸಾಲಿನ ನಿರೂಪಣೆಯೇ ಕಾಲಮ್. ರೋ ಮತ್ತು ಕಾಲಮ್ಗಳ ಪರಸ್ಪರ ಛೇದನೆಯನ್ನು ಸೆಲ್ ಎಂದು ಪ್ರಸ್ತಾಪಿಸಲಾಗುತ್ತದೆ. ಇದು ಒಂದು ತುಣುಕು ಡೇಟಾವನ್ನು ಒಳಗೊಡಿಂದೆ. ಹೊಸ ಟೇಬಲ್ ರಚಿಸುವುದು: ಹೊಸ ಅಥವಾ ಈಗಾಗಲೇ ಇರುವ ಡಾಕ್ಯುಮೆಂಟ್ ಗೆ ಟೇಬಲ್ ಇನ್ ಸರ್ಟ್ ಮಾಡುವುದು. ನೀವು ಟೇಬಲ್ ಸೇರಿಸಬೇಕಿರುವ ಜಾಗದಲ್ಲಿ ಕ್ಲಿಕ್ ಮಾಡಿ. ಟೇಬಲ್ ಮೆನುನಲ್ಲಿ ಇನ್ ಸರ್ಟ್ ಗುರುತಿಸಿ, ನಂತರ ಟೇಬಲ್ ಕ್ಲಿಕ್ ಮಾಡಿ. ಪ್ರವಾಸದ ವಿವರಗಳನ್ನು ತೋರಿಸಲು ನಿಮಗೆ 22 ರೋಗಳು ಮತ್ತು 3 ಕಾಲಮ್ಗಳು ಬೇಕಿವೆ. ಟೇಬಲ್ ಸೈಜ್ ನ ಅಡಿ, ಸಂಬಂಧಪಟ್ಟ ಬಾಕ್ಸ್ ಗಳಲ್ಲಿ ಈ ಅಂಕಿಗಳನ್ನು ತುಂಬಿರಿ. ಟೇಬಲ್ಗೆ ಪಠ್ಯ ತುಂಬುವುದು: ನೀವು ಟೇಬಲ್ ರಚಿಸಿದ್ದೀರಿ. ಈಗ ನೀವು ಪಠ್ಯ ತುಂಬಲು ಪ್ರಾರಂಭಿಸಬಹುದು. ಮೊದಲ ಹಂತವೆಂದರೆ ಕಾಲಮ್ ತಲೆಬರಹಗಳನ್ನು ತುಂಬುವುದು. ಮೊದಲ ರೋನ ಮೊದಲ ಸೆಲ್ ಕ್ಲಿಕ್ ಮಾಡಿ. ಟೈಪ್ ಮಾಡಲು ಪ್ರಾರಂಭಿಸಿ. >ಟ್ಯಾಬ್ ಕೀ ಒತ್ತಿರಿ. ಮುಂದಿನ ಸೆಲ್ಗೆ ಚಲಿಸುತ್ತದೆ. ಹೀಗೆ ನಿಮಗೆ ಅಗತ್ಯವಿರುವಷ್ಟು ರೋ ಮತ್ತು ಕಾಲಮ್ಗಳಲ್ಲಿ ಮಾಹಿತಿಯನ್ನು ತುಂಬಿ. ರೋ ಮತ್ತು ಕಾಲಮ್ಗಳನ್ನು ಇನ್ಸರ್ಟ್ ಮಾಡುವುದು: ನೀವು ಮಾಹಿತಿ ತುಂಬುವ ಸಂದರ್ಭದಲ್ಲಿ ಯಾವುದಾದರೊಂದು ರೋ ಅಥವಾ ಕಾಲಮ್ ಇಲ್ಲದಿರುವುದನ್ನು ಕಂಡಿದ್ದ ಲ್ಲಿ ಸುಲಭವಾಗಿ ಅದನ್ನು ತುಂಬಬಹುದು. ಯಾವ ರೋ ಅಥವಾ ಕಾಲಮ್ನ ಮೇಲೆ ನೀವು ಹೊಸದಾಗಿ ಇನ್ ಸರ್ಟ್ ಮಾಡಬೇಕಿದೆಯೋ ಆ ರೋ ಮತ್ತು ಕಾಲಮ್ನ ಯಾವುದಾದರೊಂದು ಸೆಲ್ ಕ್ಲಿಕ್ ಮಾಡಿ. ಟೇಬಲ್ ಮೆನುವಿನಲ್ಲಿ ಇನ್ಸರ್ಟ್ ಗುರುತಿಸಿ, ನಂತರ Rows above or columnಕ್ಲಿಕ್ ಮಾಡಿ. ರೋ ಮತ್ತು ಕಾಲಮ್ಗಳನ್ನು ತೆಗೆದು ಹಾಕುವುದು: ನಿಮಗೆ ಟೇಬಲ್ನಲ್ಲಿ ನಿರ್ದಿಷ್ಟ ಗುಂಪಿನ ವಿವರಗಳು ಕಾಣವುದು ಬೇಡವಾಗಿದ್ದರೆ, ನೀವು ರೋ ಡಿಲೀಟ್ ಮಾಡಬಹುದು. ರೋ ಡಿಲೀಟ್ ಮಾಡಲು: ಡಿಲೀಟ್ ಮಾಡಬೇಕಾಗಿರುವ ರೋನ ಯಾವುದಾದರೂ ಸೆಲ್ ಕ್ಲಿಕ್ ಮಾಡಿ. ಟೇಬಲ್ ಮೆನುನಲ್ಲಿ ಡಿಲೀಟ್ ಗುರುತಿಸಿ ನಂತರ rows ಕ್ಲಿಕ್ ಮಾಡಿ. ಕಾಲಮ್ ಡಿಲೀಟ್ ಮಾಡಲು: ಡಿಲೀಟ್ ಮಾಡಬೇಕಿರುವ ಕಾಲಮ್ ನ ಯಾವುದಾದರೂ ಸೆಲ್ ಕ್ಲಿಕ್ ಮಾಡಿ. ಟೇಬಲ್ ಮೆನುನಲ್ಲಿ, ಡಿಲೀಟ್ ಗುರುತಿಸಿ, ನಂತರ columns ಕ್ಲಿಕ್ ಮಾಡಿ. ರೋ ಮತ್ತು ಕಾಲಮ್ಗಳನ್ನು ರೀಸೈಜ್ ಮಾಡುವುದು: ಈಗ ಟೇಬಲ್ ಪೂರ್ಣಗೊಂಡಿದೆ. ಆದರೆ ನೀವು ತಲೆಬರಹಗಳನ್ನು ಹೊಂದಿರುವ ರೋಗಳ ಎತ್ತರ ಹೆಚ್ಚಿಸಿದರೆ ಅದು ಉತ್ತಮವಾಗಿ ಕಾಣುತ್ತದೆ. ನೀವು ರೀಸೈಜ್ ಮಾಡಬೇಕಿರುವ ರೋ ಅಥವಾ ಕಾಲಮ್ನ ಅಂಚಿನುದ್ದಕ್ಕೆ ಪಾಯಿಂಟರ್ ಇರಿಸಿ. ನಿಮಗೆ ಬೇಕಾಗಿರುವಷ್ಟು ಎತ್ತರಕ್ಕೆ ಅಂಚನ್ನು ಡ್ರ್ಯಾಗ್ ಮಾಡಿ. ಬಾರ್ಡರ್ ಗಳನ್ನು ಮತ್ತು ಶೇಡಿಂಗ್ ಗಳನ್ನು ಹಚ್ಚುವುದು: ವರ್ಡ್ ನ ಬಾರ್ಡರ್ಸ್ ಅಂಡ್ ಶೇಡಿಂಗ್ ವೈಶಿಷ್ಟ್ಯಗಳನ್ನು ಬಳಸಿ ನೀವು ಟೇಬಲ್ಗೆ ವಿವಿಧ ಸ್ಟೈಲ್ ಗಳನ್ನು, ಬಾರ್ಡರ್ಗಳನ್ನು ಮತ್ತು ಬಣ್ಣಗಳನ್ನು ಹಚ್ಚಬಹುದು. ಟೇಬಲ್ ಅನ್ನು ಆರಿಸಿ ಅಥವಾ ಸೆಲೆಕ್ಟ್ ಮಾಡಿ. ಫಾರ್ಮ್ಯಾಟ್ ಮೆನುನಲ್ಲಿ ಬಾರ್ಡ್ ರ್ ಅಂಡ್ ಶೇಡಿಂಗ್ ಕ್ಲಿಕ್ ಮಾಡಿ. ಬಾರ್ಡರ್ ಟ್ಯಾಬ್ನಲ್ಲಿ ಸ್ಟೈಲ್ ಪಟ್ಟಿಯಲ್ಲಿ ಸ್ಟೈಲ್ ಕ್ಲಿಕ್ ಮಾಡಿ ಮತ್ತು ಕಲರ್ ಪಟ್ಟಿಯಲ್ಲಿ ಬಾರ್ಡರ್ ಬಣ್ಣ ಕ್ಲಿಕ್ ಮಾಡಿ. ಶೇಡಿಂಗ್ ಟ್ಯಾಬ್ ಕ್ಲಿಕ್ ಮಾಡಿ. ಫಿಲ್ನ ಅಡಿ, ಟೇಬಲ್ಗೆ ಫಿಲ್ ಕಲರ್ ಕ್ಲಿಕ್ ಮಾಡಿ, ನಂತರ ಓಕೆ ಕ್ಲಿಕ್ ಮಾಡಿ. ಮೂಲ: ಕರ್ನಾಟಕ ಶಿಕ್ಷಣ