ಈಗ ಲಿಪಿಯ ಶೈಲಿ ಮತ್ತು ಗಾತ್ರಗಳು ಸುಧಾರಣೆಗೊಂಡಿದೆ ಮತ್ತು ಪತ್ರಗಳನ್ನು ಓರಣವಾಗಿ ಮತ್ತು ಮಂಡಿಸಲು ಯೋಗ್ಯವಾಗಿ ಕಾಣುತ್ತದೆ. ಆದರೂ ಪತ್ರಗಳು ನಂಬರ್ಡ್ ಆಗಿದ್ದರೆ ಮತ್ತು ಸೂಚನೆಗಳು ಬುಲೆಟೆಡ್ ಆಗಿದ್ದರೆ, ಆಗ ಅದು ಹೆಚ್ಚು ವ್ಯವಸ್ಥಿತವಾಗಿ ಕಾಣುತ್ತದೆ. ಬುಲೆಟ್ಗಳು ವಸ್ತುಗಳನ್ನು ಎದ್ದು ಕಾಣುವಂತೆ ಮಾಡಲು ಅವುಗಳ ಹಿಂದೆ ಚಿಹ್ನೆಗಳನ್ನು ಕೊಡಬಹುದು. ವ್ಯತಿರಿಕ್ತವಾಗಿ, ಸೂಚನಾಪಟ್ಟಿಗಳನ್ನು ಸುಲಭವಾಗಿ ಅನುಸರಿಸುವುದಕ್ಕೋಸ್ಕರ ಹಲವು ಬಾರಿ ನಂಬರ್ಡ್ ಮಾಡಿರುತ್ತಾರೆ. ಪಟ್ಟಿಯೊಂದಕ್ಕೆ ಬುಲೆಟ್ಗಳನ್ನು ಸೇರಿಸಲು: ಬುಲೆಟ್ ನೀಡಬೇಕಾದ ಪಟ್ಟಿಯನ್ನು ಆಯ್ಕೆ ಮಾಡಿ ಫಾರ್ಮೆಟ್ ಮೆನುವಿನ ಮೇಲೆ, ಬುಲೆಟ್ಸ್ ಅಂಡ್ ನಂಬರಿಂಗ್ ಅನ್ನು ಕ್ಲಿಕ್ ಮಾಡಿ ಬುಲೆಟೆಡ್ ಟ್ಯಾಬ್ನ ಮೇಲೆ, ನಿಮಗೆ ಬೇಕಾದ ಬುಲೆಟ್ ಶೈಲಿಯನ್ನು ಕ್ಲಿಕ್ ಮಾಡಿ ಓಕೆ ಅನ್ನು ಕ್ಲಿಕ್ ಮಾಡಿ. ಪಟ್ಟಿಯನ್ನು ನಂಬರ್ ಮಾಡಲು: ನಂಬರ್ ಮಾಡಬೇಕಾದ ಪಟ್ಟಿಯನ್ನು ಆಯ್ಕೆ ಮಾಡಿ ಬುಲೆಟ್ಸ್ ಅಂಡ್ ನಂಬರಿಂಗ್ ಡೈಲಾಗ್ ಬಕ್ಸ್ ನಲ್ಲಿ, ನಂಬರ್ಡ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ ನಿಮಗೆ ಬೇಕಾದ ನಂಬರಿಂಗ್ ಶೈಲಿಯನ್ನು ಕ್ಲಿಕ್ ಮಾಡಿ OKಅನ್ನು ಕ್ಲಿಕ್ ಮಾಡಿ. ನಿಮಗೆ ಯಾವುದೇ ಒಂದು ಹಂತದಲ್ಲಿ ನಂಬರಿಂಗ್ ಶೈಲಿಯನ್ನು ಮತ್ತೆ ಆರಂಭ ಮಾಡಬೇಕಿದ್ದಲ್ಲಿ, ಬುಲೆಟ್ಸ್ ಅಂಡ್ ನಂಬರಿಂಗ್ ಡೈಲಾಗ್ ಬಾಕ್ಸ್ ನಲ್ಲಿರುವ ರೀಸ್ಟಾರ್ಟ್ ನಂಬರಿಂಗ್ ಅನ್ನು ಕ್ಲಿಕ್ ಮಾಡಿ. ಮೂಲ: ಕರ್ನಾಟಕ ಶಿಕ್ಷಣ