ಮೈಕ್ರೋಸಾಫ್ಟ್ ಮೈಕ್ರೋಸಾಫ್ಟ್ ಆಫೀಸ್ 2003ಕ್ಕೆ ಕನ್ನಡದ ಹೊದಿಕೆ ಲಭ್ಯವಿದೆ. ಇದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಂಡರೆ ಆಫೀಸ್ನ ಬಹುಪಾಲು ಆದೇಶ ಮತ್ತು ಸಂದೇಶಗಳು ಕನ್ನಡ ಭಾಷೆಯಲ್ಲೇ ಬರುತ್ತವೆ. ಇದನ್ನು ಲಾಂಗ್ವೇಜ್ ಇಂಟರ್ಫೇಸ್ ಪ್ಯಾಕ್ ಎಂದು ಕರೆಯುತ್ತಾರೆ. ಇದರಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ 80% ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ. ಈ ಆಫೀಸ್ 2003ರ ಕನ್ನಡದ ಲಾಂಗ್ವೇಜ್ ಇಂಟರ್ಫೇಸ್ ಪ್ಯಾಕ್ ಅನ್ನು ಮೈಕ್ರೋಸಾಫ್ಟ್ನವರ ಅಂತರಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಲಾಂಗ್ವೇಜ್ ಇಂಟರ್ಫೇಸ್ ಪ್ಯಾಕ್ ಅನ್ನು ಇನ್ಸ್ಟಾಲ್ ಮಾಡಿದಾಗ ಆಫೀಸ್ ತಂತ್ರಾಂಶಗುಚ್ಛದ ಎಲ್ಲ ತಂತ್ರಾಂಶಗಳನ್ನು ಒಮ್ಮೆ ಮುಚ್ಚಿ ಪುನ ಪ್ರಾರಂಭಿಸಬೇಕಾಗುತ್ತದೆ. ಮೂಲ : ಭಾಷಾಇಂಡಿಯ