ಕ್ರಮ ಸಂಖ್ಯೆ 1 ಮಗುವಿಗೆ ಒಂದು ಮೀಟರ್ ದೂರ ಚಾಚಿದ ಕೈಯ ಬೆರಳುಗಳನ್ನು ಎಣಿಸಲು ಕಷ್ಟವಾಗುತ್ತಿದೆಯೇ? ಹೌದು / ಇಲ್ಲ 2 ಬೆಳಕಿನ ಮೂಲದ ಕಡೆಗೆ ಮಗುವು ತನ್ನ ತಲೆಯನ್ನು ತಿರುಗಿಸುತ್ತಿದೆಯೇ? ಹೌದು / ಇಲ್ಲ 3 ಮಗುವು ತನ್ನ ಕಣ್ಣುಗಳನ್ನು ಆಗಾಗ ತಿಕ್ಕುತ್ತಿದೆಯೇ? ಹೌದು / ಇಲ್ಲ 4 ಮಗುವು ಓದುವಾಗ ಪುಸ್ತಕವನ್ನು ತನ್ನ ಕಣ್ಣುಗಳಿಗೆ ಅತಿ ಹತ್ತಿರವಾಗಿ / ದೂರವಾಗಿ ಹಿಡಿಯುತ್ತಿದೆಯೇ? ಹೌದು / ಇಲ್ಲ 5 ಮಗುವು ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಬರೆದುಕೊಳ್ಳುವಾಗ ಪದೇ ಪದೇ ಇತರೆ ಮಕ್ಕಳನ್ನು ಕೇಳುತ್ತಿದೆಯೇ? ಹೌದು / ಇಲ್ಲ 6 ಮಗುವು ತನ್ನ ಪಕ್ಕದಲ್ಲಿರುವ ವಸ್ತುಗಳನ್ನು ಮಾಲುಗಣ್ಣಿನಿಂದ ನೋಡುತ್ತಿದೆಯೇ? ಹೌದು / ಇಲ್ಲ 7 ಮೊದಲ ಸಾಲಿನಲ್ಲೇ ಕುಳಿತಿದ್ದರೂ ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಮಗುವು ಓದಲು ಕಷ್ಟ ಪಡುತ್ತಿದೆಯೇ? ಹೌದು / ಇಲ್ಲ 8 ಬಣ್ಣಗಳನ್ನು ಗುರುತಿಸುವಲ್ಲಿ / ಹೋಲಿಸುವಲ್ಲಿ ಮಗುವು ವಿಫಲವಾಗುತ್ತಿದೆಯೇ? ಹೌದು / ಇಲ್ಲ 9 ಮಗುವಿನ ಕಣ್ಣಿನ ಆಕೃತಿಯಲ್ಲಿ ಅಸಹಜತೆಯೇನಾದರೂ ಇದೆಯೇ (ಉಬ್ಬಿದ ಕಣ್ಣು / ದೊಡ್ಡಕಣ್ಣು / ತೀರಾ ಚಿಕ್ಕ ಕಣ್ಣು)? ಹೌದು / ಇಲ್ಲ 10 ಮಗುವಿನ ಕಣ್ಣಲ್ಲಿ ಆಗಾಗ ನೀರರೂರುತ್ತಿದೆಯೇ? ಹೌದು / ಇಲ್ಲ 11 ಚಲಿಸುತ್ತಿರುವ ವಸ್ತುಗಳನ್ನು ಗಮನಿಸುವಲ್ಲಿ ಮಗುವಿಗೆ ಕಷ್ಟವಾಗುತ್ತಿದೆಯೇ? ಹೌದು / ಇಲ್ಲ 12 ವಾತಾವರಣದಲ್ಲಿನ ಬೆಳಕಿನ ಪ್ರಮಾಣದ ಬದಲಾವಣೆಯಿಂದ ಮಗುವು ಗೊಂದಲಕ್ಕೆ ಈಡಾಗುತ್ತದೆಯೇ? ಹೌದು / ಇಲ್ಲ 13 ಮಗುವು ಸದಾ ಕಣ್ಣು ಪಿಳುಕಿಸುತ್ತಿದೆಯೇ? ಹೌದು / ಇಲ್ಲ 14 ಮಗುವು ೪-೫ ಮೀಟರ್ ದೂರದಲ್ಲಿನ ವಸ್ತುಗಳು / ಜನರನ್ನು ಗುರುತಿಸಲು ಕಷ್ಟ ಪಡುತ್ತಿದೆಯೇ? ಹೌದು / ಇಲ್ಲ ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು. ಮೂಲ: ಪೋರ್ಟಲ್ ತಂಡ