ಭಾರತೀಯ ಸಂವಿಧಾನವು ನೀಡುವ ಖಾತ್ರಿ ಕಾನೂನಿನ ಮುಂದೆ ಸಮಾನತೆ . ದೇಶದಲ್ಲಿರುವ ಪ್ರತಿಯೊಬ್ಬನಿಗೂ ಕಾನೂನಿನ ಸಮಾನ ರಕ್ಷಣೆ (ಕಲಂ 14). ಜನಾಂಗ, ಜಾತಿ, ಲಿಂಗ, ವಂಶ, ಜನ್ಮ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತ ದೆ(ಕಲಂ 15). ಜನಾಂಗ, ಜಾತಿ, ಇಂಗ, ವಂಶ, ಜನ್ಮ ಸ್ಥಳದ ಆಧಾರದ ಮೇಲೆ ಸಾರ್ವಜನಿಕ ನೆಮಕಾತಿಯಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ (ಕಲಂ 16). ಅಸ್ಪೃಶತೆಯನ್ನು ರದ್ದು ಮಾಡಿದೆ. ಮತ್ತು ಅಸ್ಪೃಶತೆಯನ್ನು ಯಾವುದೆ ರೂಪದಲ್ಲಿ ಆಚರಿಸಿದರೂ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ (ಕಲಂ 17). ಅಸ್ಪೃಶತೆಯನ್ನು ಯಾವುದೆರೂಪದಲ್ಲಿ ಆಚರಿಸಿದರು ಶಿಕ್ಷಿಸುವ ಮೊದಲ ಭಾರತೀಯ ಕಾನೂನು “ನಾಗರೀಕ ಹಕ್ಕುಗಳ ರಕ್ಷಣೆ ಕಾಯಿದೆ ೧೯೫೫” ಪರಿಶಿಷ್ಟ ಜಾತಿಯವರನ್ನು ಅವರ ಜಾತಿಯ ಹೆಸರಿನೀಂದ ಕರೆಯುವುದು ಉದಾ: ಚಮ್ಮಾರ ಎನ್ನುವುದು ಕಾನೂನಿನ ಪ್ರಕಾರ ಅಪರಾಧ. ಭಾರತ ಸರಕಾರವು 1989 ರಲ್ಲಿ ಜಾರಿಗೆ ತಂದ, ‘ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ( ದೌರ್ಜನ್ಯ ತಡೆ) ಕಾಯಿದೆ’, ಯಾವುದೇ ರೀತಿಯ ಹಿಂಸೆ, ಮತ್ತು ತಾರತಮ್ಯವನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಅಲ್ಲದವರು ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಈ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದು, ಮತ್ತು ಸಾಮೂಹಿಕ ದಂಡವನ್ನು ವಿಧಿಸಬಹುದು ಮೂಲ: ಪೋರ್ಟಲ್ ತಂಡ