ಲಿಂಗಾಧಾರಿತ ಆಯ್ದ ಗರ್ಭಪಾತದಲ್ಲಿ ತೊಡಗಿದವರನ್ನು ಅಭಿಯೋಜಿಸಲು ಇರುವ ಮುಖ್ಯ ಕಾಯಿದೆ ಎಂದರೆ ಪ್ರಿ-ನೇಟಲ್ ಡಯಾಗ್ನೊಸ್ಟಿಕ್ ಟೆಕ್ನಿಕ್ಸ (ದುರ್ಬಳಕೆ ನಿಯಂತ್ರಣ ಮತ್ತು ತಡೆ) ಕಾಯಿದೆ ೧೯೯೪ ಅದು ಪ್ರಿ-ನೇಟಲ್ ಡಯಾಗ್ನೊಸ್ಟಿಕ್ ಟೆಕ್ನಿಕ್ಸ ಅನ್ನು ಭ್ರೂಣದ ಲಿಂಗ ಪತ್ತೆಗಾಗಿ ಬಳಸುವುದನ್ನು, ಮುಂದೆ ಹೆಣ್ಣು ಭ್ರೂಣದ ಹತ್ಯೆಗೆ ಕಾರಣ ವಾಗುವುದರಿಂದ, ಅದರ ಜಾಹಿರಾತು ನೀಡುವುದನ್ನು ನಿಷೇಧಿಸಿದೆ. . ಇದು ಪ್ರಿ-ನೇಟಲ್ ಡಯಾಗ್ನೊಸ್ಟಿಕ್ ಟೆಕ್ನಿಕ್ಸ ಅನ್ನು ನಿರ್ಧಿಷ್ಟ ಜೆನಿಟಿಕ್ ಅಸಹಜತೆಯನ್ನು, ಡಿಸ್ಆರ್ಡರಳನ್ನು ಪತ್ತೆ ಹಚ್ಚಲು ಬಳಸುವುದನ್ನು ಅನುಮತಿಸುತ್ತದೆ. ಇದನ್ನು ಕೆಲವು ಶರ್ತುಗಳಿಗೆ ಅನುಗುಣವಾಗಿ ನೊಂದಾಯಿತ ಸಂಸ್ಥೆಗಳು ಮಾತ್ರ ಮಾಡಬಹುದು ಇದರ ಪ್ರಕಾರ ಕಾಯಿದೆಯ ಉಲ್ಲಂಘನೆಯಾದಲ್ಲಿ ಶಿಕ್ಷೆ ನೀಡಬಹುದಾಗಿದೆ ಯಾವುದೆ ವ್ಯಕ್ತಿ ನೀಡಿದ ದೂರನ್ನು ಸೂಕ್ತ ಪ್ರಾಧಿಕಾರಕ್ಕೆ ಕೊಡಬೇಕು. ಮೂವತ್ತು ದಿನದೊಳಗೆ ಕ್ರಮತೆಗೆದು ಕೊಳ್ಳಲು ಸೂಚನೆ ಕೊಡಬೇಕು. ಮತ್ತು ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಉದ್ದೇಶವಿರಬೇಕು. ಈ ಕಾಯಿದೆ ಅಲ್ಲದೆ ಭಾರತೀಯ ದಂಡಸಂಹಿತೆ, ೧೮೬೦ ರ ಕೆಲವು ಪ್ರಕರಣಗಳು ಮುಖ್ಯವಾಗಿವೆ ಒಬ್ಬ ವ್ಯಕ್ತಿಯಿಂದ ಸಾವು ಸಂಭವಿಸಿದಾಗ (ಪ್ರಕರಣ 299 ಮತ್ತು ಪ್ರಕರಣ 300). ಗಭಿಣಿ ಮಹಿಳೆಗೆ ಉದ್ದೇಶ ಪೂರ್ವಕವಾಗಿ ಗರ್ಭಪಾತವಾಗುವಂತೆ ಮಾಡಿದಾಗ (ಪ್ರಕರಣ 312). ಮಗುವು ಜೀವಸಹಿತ ಹುಟ್ಟುವುದನ್ನು ತಡೆಯುವ ಅಥವ ಹುಟ್ಟಿದ ತಕ್ಷಣ ಸಾಯುವಂತೆ ಮಾಡುವ ಕ್ರಮ (ಪ್ರಕರಣ 315). ಇನ್ನೂ ಜನಿಸದ ಮಗುವಿನ ಸಾವಿಗೆ ಕಾರಣ ವಾಗುವುದು (ಪ್ರಕರಣ 316). ೧೨ ವರ್ಷದ ಒಳಗಿನ ಮಗುವನ್ನು ತೊರೆಯುವುದು (ಪ್ರಕರಣ 317). ಮಗುವಿನ ಜನನವನ್ನೆ ಮುಚ್ಚಿಟ್ಟು ಅದರ ದೇಹವನ್ನು ವಿಲೆ ಮಾಡುವುದು (ಪ್ರಕರಣ 318). ಈ ಅಪರಾಧಗಳಿಗೆ ಶಿಕ್ಷೆಯು ೨ ವರ್ಷದಿಂದ ಜೀವಾವಧಿವರೆಗೆ ಅಥವಾ ದಂಡ ಅಥವಾ ಎರಡೂ ಅಗಬಹುದು. ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನು ತೆದು ಕೊಳ್ಳ ಬಹುದು. ಮೂಲ: ಪೋರ್ಟಲ್ ತಂಡ