ಶಾರೀರಿಕ ಶಿಕ್ಷೆಯ ವಿಧಗಳು - ಶಾರೀರಿಕ ಶಿಕ್ಷೆಗಳು : ಮಕ್ಕಳನ್ನು ಗೋಡೆಗೆ ಕುರ್ಚಿ ಕೂಡಿಸುವುದು. ಶಾಲಾ ಚೀಲವನ್ನು ಅವರ ತಲೆಯ ಮೇಲೆ ಹೊರಿಸುವುದು. ಬಿಸಿಲಲ್ಲಿ ದಿನಪೂರ್ತಿ ನಿಲ್ಲಿಸುವುದು. ಬಾಗಿ ನಿಂತು ಕೆಲಸ ಮಾಡಲು ಹೇಳುವುದು. ಬೆಂಚಿನ ಮೇಲೆ ನಿಲ್ಲಿಸುವುದು. ಕೈ ಎತ್ತಿ ನಿಲ್ಲಿಸುವುದು. ಪೆನ್ಸಿಲ್ಲನ್ನು ಬಾಯಿಯಲ್ಲಿ ಕಚ್ಚಿಸಿ ನಿಲ್ಲಿಸುವುದು ಮೊಣ ಕಾಲು ಕೆಳಗೆ ಕೈ ಹಾಕಿ ಕಿವಿ ಹಿಡಿಸುವುದು ಕೈಕಟ್ವುವುದು ಬಸ್ಕಿ ಹೊಡೆಸುವುದು. ಬೆತ್ತದಿಂದ ಹೊಡೆಯುವುದು. ಕಿವಿ ಹಿಂಡುವುದು. ಭಾವನಾತ್ಮಕ ಶಿಕ್ಷೆಗಳು: ಅನ್ಯ ಲಿಂಗಿಯರಿಂದ ಹೊಡೆಸುವುದು ಅವನ ತಪ್ಪಿಗೆ ಅನುಗುಣವಾಗಿ ಲೇಬಲ್ ಮಾಡುವುದು ಶಾಲೆಯ ಅಥವ ಆಟದ ಮೈದಾನದ ಸುತ್ತಲೂ ಓಡಲು ತಿಳಿಸುವುದು. ತರಗತಿಯಲ್ಲಿ ಹಿಂದೆ ನಿಂತು ಕೆಲಸ ಪೂರ್ತಿಮಾಡಲು ಹೇಳವುದು. ಕೆಲ ದಿನಗಳಿಗೆ ಶಾಲೆಯಿಂದ ಅಮಾನತ್ತು ಮಾಡುವುದು ಅವನ ಬೆನ್ನಿಗೆ “ನಾನು ಮೂರ್ಖ’ , “ನಾನು ದಡ್ಡ” , “ ನಾನು ಕತ್ತೆ” ಎಂದು ಬರೆದ ಹಾಳೆಯನ್ನು ಹಚ್ಚುವುದು. ಪ್ರತಿ ತರಗತಿಗೆ ಅವನನ್ನು ಕರೆದೊಯ್ಯವುದು. ವಿದ್ಯಾರ್ಥಿಗಳ ಷರ್ಟು ತೆಗೆಸುವುದು ನ್ಯೇತ್ಯಾತ್ಮಕ ಒತ್ತಡಗಳು : ಊಟ ,ಮತ್ತು ವಿರಾಮದ ಅವಧಿಯಲ್ಲಿ ಹೊರಗೆ ಬಿಡದೆ ಇರುವುದು ಕತ್ತಲ ಕೋಣೆಯಲ್ಲಿ ಕೂಡಿಹಾಕುವುದು . ತಾಯಿತಂದೆಯರನ್ನು ಕರೆಸುವುದು. ಇಲ್ಲವೆ ಅವರಿಂದ ಪತ್ರ ತರಲು ಹೇಳುವುದು. ಅವರನ್ನು ಮನೆಗೆ ಕಳುಹಿಸುವುದು ಇಲ್ಲವೆ ಬಾಗಿಲ ಹೊರಗೆ ನಿಲ್ಲಿಸುವುದು. ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು. ಮಗುವಿಗೆ ಆವರಣವನ್ನು ಶುಚಿಗೊಳಿಸಲು ತಿಳಿಸುವುದು. ಶಾಲೆಯಸುತ್ತಲೂ ಇಲ್ಲವೆ ಆಟದ ಮೈದಾನದ ಸುತ್ತಲೂ ಓಡಿಸುವುದು.. ಮುಖ್ಯೋಪಾಧ್ಯಾಯರ ಹತ್ತಿರ ಕಳುಹಿಸುವುದು. ತರಗತಿಯಲ್ಲಿ ಪಾಠ ಮಾಡಲು ತಿಳಿಸುವುದು. ಶಿಕ್ಷಕರು ಬರುವವರೆಗೆ ನಿಲ್ಲಿಸುವುದು. ಮೌಖಿಕ ಎಚ್ಚರಿಕೆ ನೀಡುವುದು, ದಿನಚರಿಯಲ್ಲಿ ಬರೆಯುವುದು.. ಮಗುವಿಗೆ TC ಕೊಡುವುದಿಲ್ಲವೆಂದು ಹೆದರಿಸುವುದು. ಆಟ ಮತ್ತು ಇತರ ಚಟುವಟಿಕೆಗೆ ಬಿಡದೆ ಇರುವುದು. ಅಂಕಗಳನ್ನು ಖೋತಾ ಮಾಡುವುದು. ಮೂರು ದಿನ ತಡವಾದರೆ ಒಂದುದಿನ ಶಾಲೆಗೆ ಗೈರುಹಾಜರಿ ಎಂದು ಪರಿಗಣಿಸುವುದು. ಅತಿ ಹೆಚ್ಚು ಗೃಹ ಪಾಠ ಕೊಡುವುದು. ದಂಡ ವಿಧಿಸುವುದು. ತರಗತಿಯ ಒಳಗೆ ಬಿಡದೆ ಇರುವುದು. ಒಂದು ದಿನ, ವಾರ, ತಿಂಗಳು ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು . ಅವರ ಶಿಸ್ತಿನ ದಾಖಲೆಯಲ್ಲಿ ಕಪ್ಪು ಗುರುತು ಹಾಕುವುದು.. ಮೂಲ: ಶಾರೀರಿಕ ಶಿಕ್ಷೆ ಶಾಲೆಯಲ್ಲಿ ಮಗುವಿನ ಹಕ್ಕುಗಳ ಉಲ್ಲಂಘನೆ - ಲೇಖಕ –ಪ್ರೊ. ಮಾದಭುಷಿ ಶ್ರೀಧರ .ನಲ್ಸಾರ ಕಾನೂನು ವಿಶ್ವ ವಿದ್ಯಾಲಯ- ಹೈದರಾಬಾದು.