ಏಕಪಾದ ಕಂದರಾಸನಕ್ಕೆ ಏಕಪಾದ ಶೀರ್ಷಾಸನ ಎಂಬ ಹೆಸರೂ ಇದೆ. ವಾಮೈಕಪಾದ ಶೀರ್ಷಾಸನ ಮತ್ತು ದ್ವಿಪಾದ ಶೀರ್ಷಾಸನವೆಂಬ ಪ್ರಭೇದಗಳೂ ಇವೆ.

ಮಾಡುವ ಕ್ರಮ

1) ಯೋಗಾಭ್ಯಾಸಿಯು ಪ್ರಾರಂಭದಲ್ಲಿ ನೆಲದ ಮೇಲೆ ತನ್ನೆರಡು ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ಕುಳಿತುಕೊಳ್ಳಬೇಕು.

2) ಅನಂತರ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ ಎಡಗಾಲನ್ನು ನಿಧಾನವಾಗಿ ನೆಲದಿಂದ ಮೇಲಕ್ಕೆ ಎತ್ತಿ, ಮಂಡಿಯ ಬಳಿ ಬಗ್ಗಿಸಿ, ಕುತ್ತಿಗೆಯ ಹಿಂಬದಿಯಲ್ಲಿ ಇಡಬೇಕು.

3) ಅನಂತರ ಬಲಗಾಲನ್ನು ಚಿತ್ರದಲ್ಲಿರುವಂತೆ ಮಡಿಸಿ ಎಡತೊಡೆಯ ಮೂಲಭಾಗಕ್ಕೆ ತಾಗಿ ಕೊಂಡಂತೆ ಇಡಬೇಕು. (ಅಥವಾ ಬಲಗಾಲನ್ನು ನೇರವಾಗಿ ಚಾಚಿರಲೂ ಬಹುದು).

4) ಎದೆಯನ್ನು ಸಾಧ್ಯವಾದಷ್ಟೂ ಮೇಲಕ್ಕೆತ್ತಿ ನಮಸ್ಕಾರ ಮುದ್ರೆಯಲ್ಲಿ ಒಂದರಿಂದ ಒಂದೂವರೆ ನಿಮಿಷಗಳವರೆಗೆ ಕುಳಿತುಕೊಳ್ಳಬೇಕು. ಅನಂತರ ಇದೇ ರೀತಿ ಬಲಗಾಲಿನಿಂದಲೂ ಅಭ್ಯಾಸ ಮಾಡಬೇಕು.

ಲಾಭಗಳು:

ಏಕಪಾದ ಕಂದರಾಸನದ ಅಭ್ಯಾಸದಿಂದ ಸೊಂಟ ದೃಢವಾಗುವುದು. ತೊಡೆಯಲ್ಲಿನ ನರಗಳಿಗೆ ಶಕ್ತಿ ಬರುವುದು. ಕುತ್ತಿಗೆ, ಬೆನ್ನು ಮತ್ತು ಕಿಬ್ಬೊಟ್ಟೆಯ ಅನೇಕ ದೋಷಗಳೂ ದೂರವಾಗುವುವು.