ಗೋರಕ್ಷಾಸನವನ್ನು ವಿಪರೀತ ವಜ್ರಾಸನ ಎಂದೂ ಕರೆಯಲಾಗುತ್ತದೆ.

ಮಾಡುವ ಕ್ರಮ:

1) ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಮುಂದಕ್ಕೆ ಕಾಲು ಚಾಚಿ, ಎದೆ ಎತ್ತಿ ನೇರವಾಗಿ ಕುಳಿತುಕೊಳ್ಳಬೇಕು.

2) ಅನಂತರ ಎರಡೂ ಕಾಲುಗಳನ್ನು ಮಂಡಿಯ ಬಳಿ ಬಗ್ಗಿಸಿ ಹಿಮ್ಮಡಿಗಳು (ಯೋಗಾಸನ ಕ್ರಮಾಂಕ 37ರ ವಜ್ರಾಸನದಲ್ಲಿ ವಿವರಿಸುವಂತೆ) ಷೃಷ್ಠದ ಕೆಳಗೆ ಬರುವಂತೆ ಕುಳಿತುಕೊಳ್ಳಬೇಕು.

3) ಆಮೇಲೆ ಮಂಡಿಗಳನ್ನು ಪರಸ್ಪರ ಅಗಲಿಸಬೇಕು ಅಂದರೆ ಗೋರಕ್ಷಾಸನದ ಪೂರ್ಣ ಸ್ಥಿತಿಯಲ್ಲಿ ಎರಡು ಮಂಡಿಗಳ ನಡುವಿನ ಅಂತರವು 180 ಇರಬೇಕು.

4) ಅನಂತರ ಎರಡೂ ಕೈಗಳನ್ನು ಮಂಡಿಗಳ ಮೇಲೆ ಇಟ್ಟು ನೇರವಾಗಿ ಕುಳಿತುಕೊಳ್ಳಬೇಕು. ದೀರ್ಘವಾಗಿ ಉಸಿರಾಡುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷದ ವರೆಗೆ ಇದೇ ಸ್ಥಿತಿಯಲ್ಲಿ ಕುಳಿತಿರಬೇಕು. ಪ್ರಾರಂಭದಲ್ಲಿ ಗೋರಕ್ಷಾಸನ ಮಾಡುವುದು ಕಠಿಣವೆನಿಸಿದರೂ ಬಿಡದೆ ಅಭ್ಯಾಸಮಾಡಬೇಕು.

ಲಾಭಗಳು:

ಗೋರಕ್ಷಾಸನದ ಅಭ್ಯಾಸದಿಂದ ಉದರದ ದೋಷಗಳು ದೂರವಾಗುವುವು. ವೀರ್ಯವೃದ್ಧಿಯಾಗುವುದು. ಅಂಡಕೋಶದ ಎಲ್ಲ ಬಗೆಯ ವಿಕಾರಗಳೂ ನಾಶವಾಗುವುವು.