ಈ ಆಸನಕ್ಕೆ ವೃಕ್ಷಾಸನ ಎಂಬ ಹೆಸರು ಸಹ ಬಳಕೆಯಲ್ಲಿದ್ದರೂ, ಹೆಚ್ಚು ಪ್ರಚಲಿತವಿರುವುದು ‘ಗರುಡಾಸನ’ ಎಂಬುದೇ. ಮಾಡು ಕ್ರಮ 1) ಮೊದಲು ಯೋಗಾಭ್ಯಾಸಿಯೂ ಭೂಮಿಗೆ ಲಂಬವಾಗಿ, ಎರಡೂ ಕಾಲುಗಳ ಮೇಲೆ ಸಮವಾಗಿ ಭಾರ ಹಾಕಿ ನಿಂತುಕೊಳ್ಳಬೇಕು. 2) ಅನಂತರ ಬಳ್ಳಿ ಮರವನ್ನು ಸುತ್ತುವಂತೆ, ಉದಾ: ಎಡಗಾಲನ್ನು ಬಲಗಾಲಿನ ಮಂಡಿಯ ಮೇಲೆ ತಂದು ಬಲಗಾಲನ್ನು ಸುತ್ತಿಸಿ ಬಲಪಾದದ ಮೇಲೆ ಎಡಪಾದವನ್ನು ಇಡಲು ಪ್ರಯತ್ನಿಸಬೇಕು. 3) ಇದೇ ರೀತಿ ಬಲ ಮೊಣಕೈ ಕೆಳಗೆ ಎಡಮೊಣಕೈ ತಂದು ಅನಂತರ ಬಲಗೈಯನ್ನು ಸುತ್ತಿಸಿ, ಎರಡೂ ಅಂಗೈಗಳು ಪರಸ್ಪರ ಜೋಡಿಸಬೇಕು. ಈ ಸ್ಥಿತಿಯಲ್ಲಿ ದೇಹವು ಸಾಧ್ಯವಾದಷ್ಟೂ ಭೂಮಿಗೆ ಲಂಬವಾಗಿರಬೇಕು. ಅನಂತರ ಚಿತ್ರದಲ್ಲಿರುವ ಸ್ಥಿತಿಯನ್ನು ಒಮ್ಮೆ ತಲುಪಿದಾಗ, ಅದೇ ಸ್ಥಿತಿಯಲ್ಲಿ ಸಮತೋಲನ ಪಡೆದು, ನಿಧಾನವಾಗಿ ಕಾಲು ಕೈಗಳನ್ನು ಬದಲಾಯಿಸಬಹುದು. ಲಾಭಗಳು: ಈ ಆಸನದ ಅಭ್ಯಾಸದಿಂದ ಮೊಣಕಾಲುಗಳಲ್ಲಿನ ದೋಷ ನಿವಾರಣೆಯಾಗುವುದು. ಕೈ- ಕಾಲುಗಳಲ್ಲಿನ ನರಗಳಿಗೆ ಬಲ ಬರುವುದು. ಅಂಡಕೋಶದ ನ್ಯೂನತೆಯು ಸರಿ ಹೊಂದುವುದು. ಮೂಲ: ವಿಕ್ರಮ