1. ಸೂರ್ಯ ನಮಸ್ಕಾರದಲ್ಲಿ ಬಳಸುವ ಆರು ಬೀಜಮಂತ್ರಗಳು - ಹ್ರಾಂ, ಹ್ರೀಂ, ಹ್ರೂಂ, ಹ್ರೈಂ, ಹ್ರೌಂ, ಹ್ರಃ 2. ಸೂರ್ಯ ನಮಸ್ಕಾರದ 8 ಆಸನಗಳು-ಊಧ್ರ್ವನಮನಾಸನ, ಪಾದಹಸ್ತಾಸನ, ಏಕಪಾದಪ್ರಸರಣಾಸನ, ಚತುರಂಗದಂಡಾಸನ, ಶಶಾಂಕಾಸನ, ಸಾಷ್ಟಾಂಗಪ್ರಣಿಪಾತಾಸನ, ಊಧ್ರ್ವಮುಖಶ್ವಾನಾಸನ, ಅಧೋಮುಖಶ್ವಾನಾಸಾನ.3. ಸೂರ್ಯನಮಸ್ಕಾರದಲ್ಲಿ ಬರುವ 13 ಮಂತ್ರಗಳಲ್ಲಿ ಸೂರ್ಯನ ಹೆಸರುಗಳು – ಮಿತ್ರ, ರವಿ, ಸೂರ್ಯ, ಭಾನು, ಖಗ, ಪೋಷ್ಣೆ, ಹಿರಣ್ಯಗರ್ಭ, ಮರಿಚ, ಆದಿತ್ಯ, ಸವಿತ್ರೇ, ಅರ್ಕ, ಭಾಸ್ಕರ, ಸವಿತೃಸೂರ್ಯನಾರಾಯಣ. 4. ಸೂರ್ಯನಮಸ್ಕಾರದ ‘ಸಾಷ್ಟಾಂಗ ನಮನಾಸನ’ದಲ್ಲಿ ಬಳಸುವ 8 ಅಂಗಗಳು ¬- ಹಣೆ, ಎದೆ, ಹಸ್ತಗಳೆರಡು, ಮಂಡಿಗಳೆರಡು, ಉಂಗುಷ್ಟಗಳೆರಡು. 5. ರಕ್ತದೊತ್ತಡ, ಸ್ಪಾಂಡಿಲೋಸಿಸ್, ಕಿವಿಸೋರುವವರು, ದುರ್ಬಲ ಹೃದಯದವರು, ಗ್ಲೋಕೋಮಾ ಸಮಸ್ಯೆ ಇರುವವರು ಶೀರ್ಷಾಸನ ಮಾಡಬಾರದು.6. ‘ಮಾತ್ಸ್ಯಾಸನ’ದಲ್ಲಿ ಮತ್ಸ್ಯ ಎಂದರೆ - ಮೀನು 7. ಬಲರಾಮನ ಆಯುಧದ ಹೆಸರಿನ ಆಸನ - ಹಲಾಸನ 8. ‘ಭುಜಂಗಾಸನ’ದಲ್ಲಿ ಭುಜಂಗ ಶಬ್ದದ ಅರ್ಥ - ಹೆಡೆ ಎತ್ತಿದ ಸರ್ಪ 9. ‘ಮಿಡತೆ’ಯ ಭಂಗಿ ಹೋಲುವ ಆಸನ - ಶಲಭಾಸನ 10. ಬಿಲ್ಲನ್ನು ಹೋಲುವ ಆಸನ –ಧನುರಾಸನ 11. ನಾವೆ ಅಥವಾ ದೋಣಿಯನ್ನು ಹೋಲುವ ಆಸನ - ನೌಕಾಸನ 12. ಆಕಳಿನ ಮುಖವನ್ನು ಹೋಲುವ ಆಸನ - ಗೋಮುಖಾಸನ 13. ‘ಮತ್ಸ್ಯೇಂದ್ರಾಸನ’ - ಮತ್ಸ್ಯೇಂದ್ರನಾಥ ಯೋಗಿಯ ಹೆಸರನ್ನು ಹೊಂದಿದೆ 14. ‘ನವಿಲ’ನ್ನು ಹೋಲುವ ಆಸನ - ಮಯೂರಾಸನ 15. ‘ಮೊಸಳೆ’ಯ ಭಂಗಿ ಹೋಲುವ ಆಸನ – ಮಕರಾಸನ 16. ‘ಚೇಳನ್ನು’ ಹೋಲುವ ಆಸನ - ವೃಶ್ಚಿಕಾಸನ 17. ‘ಮರ’ದಂತೆ ನಿಲ್ಲುವ ಆಸನ – ವೃಕ್ಷಾಸನ18. ವಿಷ್ಣುವಿನ ವಾಹನದ ಹೆಸರನ್ನು ಹೊಂದಿರುವ ಆಸನ – ಗರುಡಾಸನ 19. ‘ಅರ್ಧಕಟಿ ಚಕ್ರಾಸನ’ದಲ್ಲಿ ‘ಕಟಿ’ ಶಬ್ದದ ಅರ್ಥ - ಸೊಂಟ 20. ‘ಒಂಟೆಯ’ ಭಂಗಿಯನ್ನು ಹೋಲುವ ಆಸನ - ಉಷ್ಟ್ರಾಸನ 21. ಸರ್ವಾಂಗಾಸನದ ಪೂರ್ಣ ಲಾಭ ದೊರೆಯಬೇಕಾದರೆ ಪೂರಕವಾಗಿ ಮತ್ಸಾಸನ ಮಾಡಬೇಕು22. ಹಠಯೋಗ ಪ್ರದೀಪಿಕೆಯಲ್ಲಿ ಹೇಳುವ ಎಂಟು ಪ್ರಾಣಾಯಾಮ - ಸೂರ್ಯಭೇದನ, ಉಜ್ಜಾಯಿ, ಶೀಥಲಿ, ಸಿತ್ಕಾರಿ. ಭಸ್ತ್ರಿಕಾ, ಭ್ರಾಮರಿ, ಮೂರ್ಛಾ, ಪ್ಲಾವನಿ. 23. ಪೂರಕ ಎಂದರೆ – ಉಸಿರನ್ನು ಒಳಗೆ ಎಳೆದುಕೊಳ್ಳುವುದು 24. ರೇಚಕ ಎಂದರೆ – ಉಸಿರನ್ನು ಹೊರಗೆ ಬಿಡುವುದು 25. ಕುಂಭಕ ಎಂದರೆ – ಉಸಿರನ್ನು ತಡೆಹಿಡಿಯುವುದು 26. ಕುಂಭಕಗಳ ವಿಧಗಳು –ಅಂತರ್ಕುಂಭಕ, ಬಾಹ್ಯ ಕುಂಭಕ, ಸಹಜಕುಂಭಕ ಅಥವಾ ಶೂನ್ಯಕ27. ನಮ್ಮ ಶರೀರದಲ್ಲಿರುವ ನಾಡಿಗಳು -72 ಸಾವಿರ 28. ನಮ್ಮ ಶರೀರದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಮೂರು ನಾಡಿಗಳು - ಇಡಾ, ಪಿಂಗಳ, ಸುಷುಮ್ನ 29. ಪಂಚಪ್ರಾಣಗಳು - ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ 30. ಪಂಚ ಉಪಪ್ರಾಣಗಳು - ನಾಗ, ಕೂರ್ಮ, ಕ್ರಕರ, ದೇವದತ್ತ, ಧನಂಜಯ ಮೂಲ : ಜಿ ನ್ಯೂಸ್ ೫