1. ನಿರ್ಮಾಣಾತ್ಮಕ ಆಸನಗಳು – ವೃಕ್ಷಾಸನ, ಭುಜಂಗಾಸನ, ಸರ್ವಾಂಗಾಸನ, ಮತ್ಸ್ಯಾಸನ, ನೌಕಾಸನ. 2. ವಿಶ್ರಾಂತಿದಾಯಕ ಆಸನಗಳು - ಶವಾಸನ, ಮಕರಾಸನ, ಯೋಗನಿದ್ರೆ, ಸುಪ್ತವಜ್ರಾಸನ. 3. ಕೈಗಳ ಮೇಲೆ ಸಮತೋಲನ ಮಾಡುವ ಆಸನಗಳು -ಶೀರ್ಷಾಸನ, ಬಕಾಸನ, ವೃಶ್ಚಿಕಾಸನ, ಅಧೋಮುಖವೃಕ್ಷಾಸನ, ಓಂಕಾರಾಸನ. 4. ಪಕ್ಷಿಗಳ ಹೆಸರಿನಲ್ಲಿರುವ ಆಸನಗಳು - ಬಕಾಸನ, ಹಂಸಾಸನ, ಮಯೂರಾಸನ, ಕಾಕಾಸನ, ಕಪೋತಾಸನ5. ಪ್ರಾಣಿಗಳ ಹೆಸರಲ್ಲಿರುವ ಆಸನಗಳು – ಉಷ್ಟ್ರಾಸನ, ಸಿಂಹಾಸನ, ಮಕರಾಸನ, ಗೋಮುಖಾಸನ, ಭುಜಂಗಾಸನ. 6. ಬೆನ್ನಮೇಲೆ ಮಲಗಿ ಮಾಡುವ ಆಸನಗಳು - ಸರ್ವಾಂಗಾಸನ, ಮತ್ಸ್ಯಾಸನ, ಸೇತುಬಂಧಾಸನ, ಯೋಗನಿದ್ರಾಸನ, ಹಲಾಸನ. 7. ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳು –ಧನುರಾಸನ, ಶಲಭಾಸನ, ಮಕರಾಸನ, ಭುಜಂಗಾಸನ, ರಾಜ ಕಪೋತಾಸನ. 8. ಒಂದೇ ಕಾಲಲ್ಲಿ ನಿಂತು ಮಾಡುವ ಆಸನಗಳು – ವೃಕ್ಷಾಸನ, ಚಂದ್ರಾಸನ, ಗರುಡಾಸನ, ಉತ್ಧಿತಏಕಪಾದ ಕಂದರಾಸನ. 9. ಆಸ್ತಮ ಕಾಯಿಲೆ ನಿವಾರಣೆಗೆ ಮಾಡುವ ಆಸನ-ಭುಜಂಗ, ಧನು, ಉಷ್ಟ್ರಾಸನ, ಸೂರ್ಯ ನಮಸ್ಕಾರ, ಕಪಾಲಭಾತಿ, ನಾಡೀಶೋಧನೆ10. ಜಲನೇತಿ ಕ್ರಿಯೆಯ ಲಾಭ – ಮೂಗು ಸ್ವಚ್ಛ, ಸೈನಸ್ ನಿವಾರಣೆ. 11. ಯೋಗದೀಪಿಕಾ ಗ್ರಂಥದ ಲೇಖಕರು – ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್. 12. ಹಠಯೋಗ ಪ್ರದೀಪಿಕಾ ಗ್ರಂಥ ರಚಿಸಿದವರು - ಸ್ವಾತ್ಮಾರಾಮ ಸೂರಿ 13. ಪಂಚಕೋಶಗಳು – ಅನ್ನಮಯ, ಪ್ರಾಣಾಮಯ, ಮನೋಮಯ, ವಿಜ್ಞಾನಮಯ, ಆನಂದಮಯ. 14. ಯೋಗಾಸನ ಮತ್ತು ಭೋಜನದ ಮಧ್ಯೆ ಇರಬೇಕಾದ ಸಮಯದ ಅಂತರ – ಕನಿಷ್ಠ 2.30 ಗಂಟೆಗಳು ತ್ರಾಟಕ ಕ್ರಿಯೆಯಿಂದ ಯಾವ ತೊಂದರೆ ಪರಿಹರಿಸಿಕೊಳ್ಳಬಹುದು – ಏಕಾಗ್ರತೆ ಹೆಚ್ಚಲು, ಚಂಚಲತೆ ನಿವಾರಣೆ, ವಕ್ರಕಣ್ಣಿನ ದೃಷ್ಠಿ ಸರಿಪಡಿಸಿಕೊಳ್ಳಲು. ಕಣ್ಣಿನ ಶುದ್ಧತೆ. ಮೂಲ : ಜಿ ನ್ಯೂಸ್ ೫