ಚರ್ಮಕ್ಕೆ ಬರುವ ಖಾಯಿಲೆಗಳು ಹಲವಾರು, ರಕ್ತದ ದೋಷದಿಂದಲೆ ಬಹುತೇಕ ಚರ್ಮರೋಗಗಳು ಬರುತ್ತವೆ. ರಕ್ತ ದೋಷವು, ಕೆಟ್ಟ ಆಹಾರ, ಅಶುದ್ಧ ನೀರು ಮತ್ತು ಕಲುಷಿತ ವಾತಾವರಣದಿಂದ ಬರುತ್ತದೆ. ಎಲ್ಲ ಚರ್ಮ ಖಾಯಿಲೆಗಳಿಗೆ ಮನೆ ಮದ್ದು. ಚರ್ಮಕ್ಕೆ ಶ್ರೀಗಂಧ ಮತ್ತು ಅರಿಷಿಣವನ್ನು ನಿಂಬೆರಸದಲ್ಲಿ ಗಂಧಮಾಡಿ ಲೇಪಿಸುವುದು. ಲೋಳೆಸರದೊಂದಿಗೆ ಅರಿಷಿಣ ಕಲೆಸಿ ಲೇಪಿಸುವುದು. ಪಚ್ಚ ಕರ್ಪೂರಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ಲೇಪಿಸುವುದು. ದೇಶಿ ಆಕಳ ಸಗಣಿಯನ್ನು ಗೋಮೂತ್ರ ಕಲೆಸಿ ಲೇಪಿಸುವುದು. ಸ್ನಾನಕ್ಕೆ ಕಡ್ಲೆ ಹಿಟ್ಟು, ಹೆಸರು ಹಿಟ್ಟು, ಅರಿಷಿಣ ಚೂರ್ಣ ಕರ್ಪೂರ ಸೇರಿಸಿ ಉಪಯೋಗಿಸಬೇಕು. ಊಟದಲ್ಲಿ ಸೈಂಧ್ರ ಲವಣ, ಮೆಣಸು, ನಿಂಬೆ ಹುಳಿ, ಬೆಲ್ಲ, ರುಚಿಗಾಗಿ ಬಳಸಬೇಕು. ನಿತ್ಯ ಸ್ನಾನವನ್ನು ತಣ್ಣೀರಿನಿಂದ ಮಾಡಬೇಕು. ನೀರಿನಲ್ಲಿ ಗೋಮೂತ್ರ ಹಾಕಬೇಕು. ದಿನಾಲು 4 ಚಮಚ ದೇಶಿ ಆಕಳ ಗೋಮೂತ್ರ ಸೋಸಿ ಸೇವಿಸಬೇಕು ಅಥವಾ ಗೋ ಅರ್ಕ ಸೇವಿಸುವುದು. ದಿನಾಲು ನೀರಿನಲ್ಲಿ 2 ಚಮಚ ಜೇನು ಹಾಕಿ ಸೇವಿಸಬೇಕು. ಬಟ್ಟೆಯನ್ನು ಹತ್ತಿಯಿಂದ ತಯಾರಿಸಿದ್ದನ್ನು ಉಪಯೋಗಿಸಬೇಕು. ತಾಮ್ರದ ಪಾತ್ರೆ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಉಪಯೋಗಿಸಬೇಕು. ದಿನಾಲೂ 2 ಸಲ ತುಳಸಿ ಕಷಾಯ ಸೇವಿಸಬೇಕು. ವಾರಕ್ಕೊಮ್ಮೆ 1 ಲೀಟರ್ ಬಿಸಿ ನೀರಿಗೆ ಸ್ವಲ್ಪ ಸೈಂಧ್ರ ಲವಣ ಹಾಕಿ ಸೇವಿಸಬೇಕು (ಬೆಳಿಗ್ಗೆ) ರಾತ್ರಿ ಊಟ ಮಾಡಬಾರದು. ಕಷಾಯವನ್ನು ತಯಾರಿಸುವಾಗ ನೀರಿಗೆ ಹಾಕುವ ಮೂಲಿಕೆಗಳನ್ನು 10 ನಿಮಿಷ ಕುದಿಸಿ ಸೋಸಿ ಸೇವಿಸಬೇಕು, ಹಾಲು ಸೇರಿಸಬಾರದು. ಎಲ್ಲ ವ್ಯಾಧಿಗಳಿಗೆ ಸಂಬಂಧಪಟ್ಟ ಪಥ್ಯ ಕ್ರಮಗಳನ್ನು ತಪ್ಪದೆ ಅನುಸರಿಸುವುದು ಮೂಲ: ವಿಕ್ರಮ