ಹಲ್ಲುಗಳ ರಚನೆ ಪ್ರತಿ ಹಲ್ಲಿಗೂ ಎರಡು ಮುಖ್ಯಭಾಗಗಳಿವೆ. – ಕ್ರೌನ್ (ಕಿರೀಟ) ಮತ್ತು ಬೇರುಗಳು. ಕಿರೀಟ ಎಂದರೆ ನಾವು ನೋಡಬಹುದಾದ ಭಾಗ. ಬೇರುಗಳು ವಸಡಿನ ಕೆಳಗೆ ಅವಿತುಕೊಂಡಿರುತ್ತವೆ. ಅವು ಹಲ್ಲಿನ ಮೂರನೆ ಎರಡರಷ್ಟು ಉದ್ದವಾಗಿರುತ್ತವೆ. ವಯಸ್ಕರರಿಗೆ ೩೨ ಸ್ಥಿರ ಹಲ್ಲುಗಳಿದ್ದು, ಬುದ್ದಿಯ ಹಲ್ಲೂ ಸೇರಿರುತ್ತದೆ. ಪ್ರತಿ ಹಲ್ಲನ್ನು ನಾಲಕ್ಕು ಅಂಗಾಂಶಗಳು ಸೇರಿ ರಚಿಸಿರುವವು. ಎನಾಮಲ್ ಬಾಳಿಕೆ ಬರುವ , ಬಿಳಿಯ ಆವರಣ. ಎನಾಮಲ್ ಹಲ್ಲನ್ನು ಅಗಿಯುವಾಗ ಸವೆಯದಂತೆ ಮುರಿಯದಂತೆ ಕಾಪಾಡುವುದು. ಡೆಂಟಿನ್ ಹಲ್ಲಿನ ಮೇಲಿನ ಎನಾಮಲ್ ಗೆ ಸಹಾಯಕವಾಗಿರುವುದು. ಇದು ಹಳದಿಯಾದ ಮೂಳೆಯಂತಹ ವಸ್ತು ಆದರೆ ಎನಾಮಲ್ ಗಿಂತ ಮೃದುವಾಗಿರುವುದು.ಇದರಲ್ಲಿ ಕೆಲವು ನರತಂತುಗಳು ಇರುವವು. ಅವು ಹಲ್ಲಿನ ಒಳಗೆ ತೊಂದರೆಯಾದರೆ ಮಾಹಿತಿ ನೀಡುವವು. ಪಲ್ಪ್ ಹಲ್ಲಿನ ಮಧ್ಯದಲ್ಲಿರುವುದು. ಇದು ಮೃದುವಾದ ಅಂಗಾಂಶ. ಇದರಲ್ಲಿ ನರ, ರಕ್ತ ನಾಳ ಮತ್ತು ಲಿಂಫ್ ನಾಳಗಳು ಇರುತ್ತವೆ. ಪಲ್ಪ್ ನಿಂದ ಹಲ್ಲಿಗೆ ಪೌಷ್ಟಿಕತೆ ದೊರೆಯುವುದು ಮತ್ತು ಮೆದುಳಿಗೆ ಸಂದೇಶ ರವಾನೆಯಾಗುವುದು. ಸಿಮೆಂಟಮ್ ಹಲ್ಲಿನ ಬೇರಿನ ಬಹುತೇಕ ಭಾಗವನ್ನು ಮುಚ್ಚಿರುವುದು. ಇದು ಹಲ್ಲನ್ನು ದವಡೆಯ ಮೂಳೆಗೆ ಅಂಟಿಸಲು ಸಹಾಯಕ. ಸಿಮೆಂಟಮ್ ಮತ್ತು ದವಡೆಯ ಮೂಳೆಯ ನಡುವೆ ಮೆತ್ತೆಯಾಗಿ ಪೆರಿಯೊಡೆಂಟಲ್ ಲಿಗ್ಮೆಂಟ್ ಇರುವುದು. ಅವನ್ನು ಸೇರಿಸಲು ಇದು ಸಹಾಯಕ. ಮೂಲ:ಪೋರ್ಟಲ್ ತಂಡ