ನಮಗೆಲ್ಲರಿಗೂ ಹಠತ್ತನೆ ಯಾವಾಗಲಾದರೂ ಒಮ್ಮೆ ಹಲ್ಲು ನೋವು ಬರುವುದು. ಆ ನೋವನ್ನು ಸುರಕ್ಷಿತವಾಗಿ ನೈಸರ್ಗಿಕ ವಿಧಾನದಿಂದ ಶಮನ ಮಾಡುವುದು ಹೇಗೆ ಎಂಬುದನ್ನು ನಾವೆಲ್ಲ ತಿಳಿದಿರುವುದು ಮುಖ್ಯ. ನೈಸರ್ಗಿಕವಾದ ಗಿಡಮೂಲಿಕೆಗಳು ನೋವು ನಿವಾರಕಗಳಾಗಿವೆ ಉದಾ; ಸಾಸಿವೆ, ಕರಿ ಮೆಣಸು,.ಅಥವ ಬೆಳ್ಳುಳ್ಳಿ ಗಳು ಹಲ್ಲುನೋವನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತವೆ. ಈ ಕೆಳಗೆ ಹಲ್ಲು ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದಕ್ಕೆ ಕೆಲವು ಸಲಹೆಗಳಿವೆ. ಲವಂಗದ ಎಣ್ಣೆಯು ಬಹಳ ಪರಿಣಾಮಕಾರಿಯಾದ ಹಲ್ಲು ನೋವನ್ನು ನಿವಾರಿಸುವ ನೈಸರ್ಗಿಕ ಗಿಡಮೂಲಿಕೆ ಯಾಗಿದೆ. ಲವಂಗದ ಎಣ್ಣೆಯನ್ನು ತುಸು ಮೆಣಸಿನ ಪುಡಿಯೊಂದಗೆ ಬೆರಸಿ ಹಲ್ಲು ನೋವಿರುವ ಭಾಗದಲ್ಲ ಇರಿಸಿಬೇಕು. ಹಲ್ಲು ನೋವನ್ನು ಕಡಿಮೆ ಮಾಡಲು ಸಾಸಿವೆ ಎಣ್ಣೆಯು ಇನ್ನೊಂದು ಉತ್ತಮ ಸಾಧನ. ಚಿಟಿಕೆ ಉಪ್ಪನ್ನು ಸಾಸಿವೆ ಎಣ್ಣೆಗೆ ಸೇರಿಸಿ ನೋವಿರುವ ಭಾಗದಲ್ಲಿ ಹಚ್ಚಿದರೆ ಸಾಕು. ವಸಡಿನ ಭಾಗದಲ್ಲಿ ಅದನ್ನು ಮೃದುವಾಗಿ ಸವರಬೇಕು. ಹಲವು ಹನಿ ನಿಂಬೆ ರಸವು ಹಲ್ಲುನೋವನ್ನು ಕಡಿಮೆ ಮಾಡಬಲ್ಲದು. ನೋವಿರುವ ಭಾಗಕ್ಕೆ ಹೆಚ್ಚಿದ ಇರುಳ್ಳಿಚೂರನ್ನು ಒತ್ತಿ ಹಿಡಿದರೂ ನೋವು ಕಡಿಮೆ ಯಾಗುವುದು. ನೀವು ಮನೆಯಲ್ಲಿಯೇ ಗಿಡಮೂಲಿಕೆಯ ಮೌತ್ ವಾಷ್ ತಯಾರಿಸಬಹುದು. ಕಾಲೆಂಡುಲಾ, ಮಿರ್ತ್ ಮತ್ತು ಸೇಜ್ ಮುಂತಾದ ಗಿಡಮೂಲಿಗೆಗಳ ಕಷಾಯವನ್ನು ತಯಾರಿಸಿ ಬಾಯಿ ಮುಕ್ಕಳಿಸಬೇಕು. ಇಂಗು ಬೇಸಿಲ್, ಮರ್ಜೋರಮ್ ಮುಂತಾದ ವೈದ್ಯಕೀಯ ಗಿಡಮೂಲಿಕೆಗಳು ಹಲ್ಲು ನೋವಿಗೆ ತುಸು ಆರಾಮ ನೀಡುತ್ತವೆ. ಹಲ್ಲು ನೋವನ್ನು ಕಡಿಮೆ ಮಾಡಲು ಐಸ್ ಕ್ಯೂಬುಗಳನ್ನು ಹೊರಗಿನಿಂದ ಹಿಡಿಯಬೇಕು. ನಿಮಗೆ ಹಠಾತ್ತನೆ ಹಲ್ಲು ನೋವು ಬಂದರೆ ಅತಿ ಬಿಸಿಯಾದ, ತಂಪಾದ ಮತ್ತು ಸಿಹಿಯನ್ನು ಕಡ್ಡಾಯವಾಗಿ ಬಿಡಬೇಕು. ಅವು ನೋಯುತ್ತಿರುವ ಹಲ್ಲನ್ನು ಇನ್ನು ಹೆಚ್ಚು ನೋಯುವಂತೆ ಮಾಡುವವು. ನೀವು ನಿಮ್ಮ ಆಹಾರದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು.ಹೆಚ್ಚಾಗಿ ತರಕಾರಿ ತಿನ್ನಿ ಹಣ್ಣು ಮತ್ತು ಕಾಳುಗಳನ್ನು ತಿನ್ನಿ. ಜಂಕ್ ಆಹಾರವನ್ನು ತಿನ್ನಬೇಡಿ.. ಮೂಲ:ಪೋರ್ಟಲ್ ತಂಡ