1. ಹಲ್ಲು ಸಡಿಲವಾಗಿದ್ದರೆ ದಾಳಿಂಬೆ ಕಾಯಿಯ ಸಿಪ್ಪೆಯ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಬೇಕು. 2. ಹಲ್ಲು ನೋವಿಗೆ: ಶುಂಠಿ ಪುಡಿಯನ್ನು ನೋವಿನ ಹಲ್ಲಿಗೆ ಹಾಕಿ ಸ್ವಲ್ಪ ಹೊತ್ತು ಹಿಡಿಯಿರಿ.3. ಹಲ್ಲು ನೋವಿಗೆ ಬೆಳ್ಳುಳ್ಳಿ ಮತ್ತು ಸೈಂಧ್ರ ಲವಣ ಜಜ್ಜಿ ಹಲ್ಲಿನಲ್ಲಿ ಹಿಡಿದುಕೊಳ್ಳಿ.4. ಹಲ್ಲು ಸ್ವಚ್ಛವಾಗಲು ತುಳಸಿ ಎಲೆ ತಿಂದು ಹಲ್ಲುಜ್ಜಿರಿ.5. ಹಲ್ಲು ಹೊಳಪು ಬರಲು ನಿಂಬೆರಸ, ಸೈಂಧ್ರ ಲವಣ (ಉಪ್ಪು) ಸೇರಿಸಿ ಹಲ್ಲು ಉಜ್ಜಿರಿ.6. ಹಲ್ಲು ಚಳಕು ಬಂದರೆ ಅರಿಷಿಣ ಮತ್ತು ಉಪ್ಪಿನಿಂದ ಹಲ್ಲುಜ್ಜಿರಿ.7. ಹಲ್ಲುಜ್ಜುವ ಕಡ್ಡಿಗಳು-ಆಲ, ಅರಳಿ, ಮಾವು, ಬೇವು, ನೇರಳೆ, ಉತ್ತರಾಣಿ ಇವೆಲ್ಲವುಗಳಿಂದ ಉಜ್ಜಬಹುದು.8. ಹಲ್ಲಿನಲ್ಲಿ ರಕ್ತ ಬರುತ್ತಿದ್ದರೆ ಆಲದ ಕಡ್ಡಿಯಿಂದ ಹಲ್ಲುಜ್ಜುವುದು.ಎಲ್ಲ ವ್ಯಾಧಿಗಳಿಗೆಸಂಬಂಧಪಟ್ಟ ಪಥ್ಯ ಕ್ರಮಗಳನ್ನು ಸೂಚಿಸಲಾಗಿದೆ. ಅವುಗಳನ್ನು ಅನುಸರಿಸುವುದು. ಮೂಲ: ವಿಕ್ರಮ