ಪ್ರತಿದಿನ ಮಲಗುವುದಕ್ಕೆ ಮುಂಚೆ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಿರಿ. ಕಣ್ಣುಗಳನ್ನು ಶುಭ್ರವಾದ ವಸ್ತ್ರದಿಂದ ಒರೆಸಿ; ಆದರೆ ಇತರರು ಬಳಸಿದ ವಸ್ತ್ರವನ್ನು ಬಳಸಬೇಡಿ. ಅತಿಯಾದ ಧೂಳಿಗೆ, ಹೆಚ್ಚು ಪ್ರಕಾಶಮಾನವಾದ ಬೆಳಕಿಗೆ ಕಣ್ಣುಗಳನ್ನು ಒಡ್ಡಬೇಡಿ. ಸೂರ್ಯನನ್ನು ದಿಟ್ಟಿಸಿ ನೋಡಬೇಡಿ. ಕಣ್ಣುಗಳಿಗೆ ಅವರಿವರು ಹೇಳಿದ ಮದ್ದು ಹಚ್ಚಬೇಡಿ. ಕಣ್ಣಿನಲ್ಲಿ ಅನ್ಯ ಪದಾರ್ಥ ಬಿದ್ದಾಗ ಕಣ್ಣು ಉಜ್ಜಬೇಡಿ; ಕಣ್ಣಿಗೆ ತಣ್ಣೀರನ್ನು ಎರಚಿ ಚೆನ್ನಾಗಿ ಜಾಲಿಸಿ ತೊಳೆಯಿರಿ; ಆಗ ಕಣ್ಣಿನಲ್ಲಿ ಬಿದ್ದ ಅನ್ಯವಸ್ತು ಕೊಚ್ಚಿ ಹೋಗುವುದು. ಮಿನುಗು ದೀಪ ಅಥವಾ ಮಂದಪ್ರಕಾಶದಲ್ಲಿ ಓದಬೇಡಿ. ಓದುವ ಪುಸ್ತಕ ನಿಮ್ಮ ಕಣ್ಣಿನಿಂದ ಸುಮಾರು 40 ಸೆಂ.ಮೀ.ದೂರದಲ್ಲಿರಲಿ. ಚಲಿಸುತತ್ತಿರುವ ರೈಲು ಅಥವಾ ಬಸ್ಸಿನಲ್ಲಿ ಓದಬೇಡಿ ಬಸಳೆ, ಅಗಸೆ, ಪಾಲಕ್, ದಂಟು, ನುಗ್ಗೆ ಸೊಪ್ಪು, ನುಗ್ಗೆಕಾಯಿ, ಕೆಂಪು ಮೂಲಂಗಿ, ಪರಂಗಿ ಹಣ್ಣು, ಮಾವಿನ ಹಣ್ಣು ಹೆಚ್ಚಾಗಿ ಸೇವಿಸುವುದರ ಮೂಲಕ ಕಣ್ಣುಗಳ ಆರೋಗ್ಯವನ್ನು ರಕ್ಷಿಸಿ ಮೂಲ: ವಿಕ್ರಮ