ಈ ಅರ್ಬುದ ರೋಗವು ಹೇಗೆ ಬರುತ್ತದೆ ಎಂಬುದೇ ತಿಳಿದಿಲ್ಲ. ಅದಕ್ಕಾಗಿಯೇ ಇದಕ್ಕೆ ನಿರ್ದಿಷ್ಟ ಔಷಧವು ಇಲ್ಲ. ಈ ರೋಗಕ್ಕೆ ಆದಿಕರ್ಮವ್ಯಾಧಿಎನ್ನುತ್ತಾರೆ. ಅಂದರೆ ದೇಹದ ಬಗ್ಗೆ ನಿರ್ಲಕ್ಷ್ಯವೇ ಕಾರಣ. ಆದರೂ ಈ ರೋಗ ಹೆಚ್ಚು ಹೆಚ್ಚಾಗಿ ಕಂಡು ಬರುವ ಪ್ರದೇಶವನ್ನು ಪರಿಶೀಲಿಸಿದರೆ, ಕಲುಷಿತ ನೀರು, ವಾತಾವರಣ ನಿರ್ಮಲತೆ ಇಲ್ಲದಿರುವುದು ಕಂಡು ಬರುತ್ತದೆ. ಈ ರೋಗ ತಡೆಯಲು ಹಾಗೂ ಹತೋಟಿ ಮಾಡಲು ‘‘ಮನೆ ಮದ್ದು’’. 1. ನಿತ್ಯ 2 ಸಾರಿ ಅರಿಶಿಣ + ಕಾಳುಮೆಣಸು + ಜೀರಿಗೆ ಸೇರಿಸಿ ಸೇವಿಸುವುದು.2. ನಿತ್ಯ ಎರಡು ಸಾರಿ ತುಳಸಿ ಕಷಾಯ ಸೇವಿಸುವುದು.3. ನಿತ್ಯ ಮೂರು ಸಾರಿ ಗೋಮೂತ್ರ ಅಥವಾ ಗೋ ಅರ್ಕ ಸೇವಿಸುವುದು. 4. ನಿತ್ಯ 2 ಸಾರಿ 1ಲೋಟ ನೀರು + ಅರ್ಧ ಚಮಚ ಶುದ್ಧ ಅರಿಶಿಣ + 2 ಚಮಚ ಜೇನು ಹಾಕಿ ಸೇವಿಸುವುದು. 5. ದಿನಾಲು ಮಧ್ಯಾಹ್ನ 1 ಲೋಟ ದೇಶಿ ಆಕಳ ಮಜ್ಜಿಗೆ + 10 ತುಳಸಿ ಎಲೆ ಅರೆದು ಹಾಕಿ ಸೇವಿಸುವುದು. 6. ದಿನಾಲು ಊಟದಲ್ಲಿ ಹಸಿ ಬೆಳ್ಳುಳ್ಳಿ ಸೇವಿಸುವುದು.7. ಅಮೃತ ಬಳ್ಳಿ ಕಷಾಯ ಸೇವಿಸುವುದು.8. ಗರಿಕೆ ರಸ ದಿನಾಲು ಸೇವಿಸುವುದು.9. ಊಟದಲ್ಲಿ ರುಚಿಗಾಗಿ ಸೈಂಧ್ರ ಲವಣ, ನಿಂಬೆಹುಳ್ಳಿ, ಬೆಲ್ಲ, ಹಾಗೂ ಕಾಳು ಮೆಣಸು ಬಳಸುವುದು. ಹಾಗೂ ನಿತ್ಯ ತಲೆ ಸ್ನಾನ ಕಡ್ಡಾಯ. ನೀರು ಕಾಯಿಸಿ ಸೋಸಿ ಸೇವಿಸುವುದು.10. ಮನೆಯಲ್ಲಿ ನಿತ್ಯ ಎರಡು ಸಾರಿ ‘‘ಅಗ್ನಿಹೋತ್ರ’’ ಅರಿತು ಮಾಡುವುದು.11. ಕ್ಯಾನ್ಸರ್ ಗಡ್ಡೆ ಆಗಿದ್ದರೆ, ಅದಕ್ಕೆ ದೇಶಿ ಆಕಳ ಸಗಣಿ ಲೇಪಿಸಿ ಶಾಖ ಕೊಡುವುದು.12. ಊಟದಲ್ಲಿ ಹೆಚ್ಚು ಹಸಿರು ತರಕಾರಿ, ಮೊಳಕೆ ಕಾಳು ಹಣ್ಣುಗಳನ್ನು ಉಪಯೋಗಿಸುವುದು. 13. ದಿನಾಲು ಪಾಲಕ ಸೊಪ್ಪಿನ ರಸ + 2 ಚಮಚ ಜೇನು ಹಾಕಿ ಸೇವಿಸುವುದು. 14. ದಿನಾಲು ಹಸಿ ಶುಂಠಿ ಕಷಾಯ ಸೇವಿಸುವುದು.15. ಶ್ರೀಗಂಧವನ್ನು ಗಂಧ ಮಾಡಿ ನೀರಿನಲ್ಲಿ 1 ತೊಲ ಕಲೆಸಿ ಸೇವಿಸುವುದು.16. ವಾರಕ್ಕೊಮ್ಮೆ ತಿಳಿ ಆಹಾರದಿಂದ ಪೂರ್ಣ ಉಪವಾಸ ಮಾಡುವುದು.17. ಹುರಿದ, ಕರಿದ, ತಂಗಳ ಆಹಾರ, ಹೆಚ್ಚು ಮಸಾಲೆ, ಮಾಂಸ, ಮೀನು ಸೇವಿಸಬಾರದು.18. ಗೋಧಿಹುಲ್ಲಿನ ರಸ ಸೇವಿಸಬೇಕು. ಮೂಲ: ವಿಕ್ರಮ