ಟಿಲಿಗೊ (ತೊನ್ನು) ಎಂದರೇನು? ತೊನ್ನಿನ ಕಲೆಗಳು ಚರ್ಮದ ಇತರ ಭಾಗಗಳಿಂದ ಎದ್ದು ಕಾಣುವಂತಿದ್ದು, ಹಾಲು ಬಿಳುಪಿನ ಬಣ್ಣದಲ್ಲಿ ಇರುತ್ತವೆ. ಚರ್ಮದ ಸಂವೇದನೆ ಹಾಗೂ ಮೇಲ್ಮೈ ಒಂದೇ ಸಹಜವಾಗಿ ಇರುತ್ತದೆ. ಚರ್ಮ ಪರೆ ಪರೆಯಾಗುವುದಿಲ್ಲ. ಲ್ಯೂಕೊಡರ್ಮಾ ಅಂದರೆ ಏನು? ಲ್ಯೂಕೊಡರ್ಮಾ ಅಂದರೆ ತೊನ್ನಿನ (ವಿಟಿಲಿಗೊದ) ಮತ್ತೊಂದು ಹೆಸರು. ಲ್ಯೂಕೊ ಅಂದರೆ ಬಿಳಿ. ಡರ್ಮಾ ಅಂದರೆ ಚರ್ಮ (ಗ್ರೀಕ್ ಮೂಲ). ತೊನ್ನಿಗೆ (ವಿಟಿಲಿಗೊಕ್ಕೆ) ಕಾರಣಗಳೇನು? ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲನೊಸೈಟ್ ಕೋಶಗಳಿಗೆ ಹಾನಿಯಾದಾಗ ಅಥವಾ ಅವು ಸತ್ತಾಗ ತೊನ್ನು ಕಾಣಿಸಿಕೊಳ್ಳುತ್ತದೆ. ತೊನ್ನು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಹಲವು ಸಿದ್ಧಾಂತಗಳನ್ನು ಮಂಡಿಸಲಾಗಿದೆ. ದೇಹದ ರೋಗನಿರೋಧಕ ವ್ಯವಸ್ಥೆ ಮೆಲನೊಸೈಟ್ಗಳನ್ನು ನಾಶಪಡಿಸಬಹುದು. ಚರ್ಮದ ಬಣ್ಣವೂ ಸಹ ಹೊರಗಿನಿಂದ ಪ್ರವೇಶಿಸಿದ ವಸ್ತು ಎಂಬ ಭ್ರಮೆಯಲ್ಲಿ ದೇಹ ಅದನ್ನು ನಾಶಪಡಿಸಬಹುದು. ದೇಹದ ವಂಶವಾಹಿಯಲ್ಲಿಯೇ ದೋಷವಿದ್ದು, ಮೆಲನೊಸೈಟ್ಗಳು ನಾಶವಾಗಬಹುದು. ಸಹಜವಾಗಿ ಕೆಲಸ ಮಾಡದ ನರಕೋಶಗಳು ಮೆಲನೊಸೈಟ್ಗೆ ಹಾನಿ ಉಂಟು ಮಾಡುವ ವಿಷ ವಸ್ತುಗಳನ್ನು ಉತ್ಪಾದಿಸಬಹುದು. ಮೆಲನೊಸೈಟ್ಗಳಿಂದ ಬಣ್ಣ ಉತ್ಪತ್ತಿಯಾಗುತ್ತಿರುವಾಗ ಜೊತೆಗೆ ವಿಷ ವಸ್ತುಗಳು ಬಿಡುಗಡೆಯಾಗಿ ಮೆಲನೊಸೈಟ್ಗಳನ್ನು ಹಾನಿಗೊಳಿಸಬಹುದು. ಮೇಲೆ ಹೇಳಿದ ಎಲ್ಲ ಅಂಶಗಳೂ ಸಹ ತೊನ್ನಿಗೆ ಕಾರಣವಾಗಬಹುದು ಎಂದು ಸಂಶೋಧಕರು ಹೇಳುತ್ತಾರೆ. ವಿಟಿಲಿಗೊ ಜೊತೆ ಬೇರೆ ದೋಷಗಳು ಕಾಣಿಸಿಕೊಳ್ಳಬಹುದೇ? ಹೌದು, ತೊನ್ನು ಹೊಂದಿರುವ ಜನರಲ್ಲಿ ಬೇರೆ ದೋಷಗಳು ಇರಬಹುದು. ಮೂಲ:ಪೋರ್ಟಲ್ ತಂಡ