*ತಂಬಾಕು ದೇಹದ ವಿವಿಧ ಭಾಗಗಳಾದ ಬಾಯಿ, ಗಂಟಲು, ಶ್ವಾಸ ಕೋಶ,. ಜಠರ, ಮೂತ್ರ ಪಿಂಡ, ಬ್ಲಾಡರ್, ಕ್ಯಾನ್ಸರಿಗೆ ಕಾರಣವಾಗುವುದು ಬೆಂಬಲಿಸುವ ಸತ್ಯಾಂಶಗಳು ಭಾರತದಲ್ಲಿ ತಂಬಾಕಿನಿಂದಾದ ಬಾಯಿ ಕ್ಯಾನ್ಸರನ ಪ್ರಕರಣಗಳು ಜಗತ್ತಿನಲ್ಲಿಯೇ ಅತಿ ಹೆಚ್ಚು ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ತಂಬಾಕಿನಿಂದ ಬರುವ ಕ್ಯಾನ್ಸರಿನ ಪ್ರಮಾಣ ಕ್ರಮವಾಗಿ 56.4% ಮತ್ತು 44.9% ಆಗಿದೆ ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ 90% ನಷ್ಟು ಕಾರಣವಾಗಿದೆ * ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿ ಮಾಡುವುದು. ಹೃದಯಾಘಾತ, ಎದೆ ನೋವು ಹಠಾತ್ ಹೃದಯಘಾತದಿಂದ ಸಾವು, ಲಕ್ವ , ಹೊರ ರಕ್ತನಾಳಗಳ ವ್ಯಾಧಿ, ಕಾಲಿನ ಗ್ಯಾಂಗ್ರಿನ್ . ಬೆಂಬಲಿಸುವ ಸತ್ಯಾಂಶಗಳು ಭಾರತದಲ್ಲಿನ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಗೆ ಶೇ. ೮೨ರಷ್ಟು ತಂಬಾಕು, ಧೂಮಪಾನ ಕಾರಣವಾಗುತ್ತವೆ. ಶ್ವಾಸಕೋಶದ ಕ್ಷಯ ಬರಲು ತಂಬಾಕು ಪರೋಕ್ಷವಾಗಿ ಕಾರಣವಾಗುತ್ತದೆ. ಧೂಮಪಾನ ಮಾಡದವರಿಗಿಂತ ಸತತವಾಗಿ ಧೂಮಪಾನ ಮಾಡುವವರಲ್ಲಿ ಕ್ಷಯ ಉಂಟಾಗುವ ಸಾಧ್ಯತೆ ಮೂರುಪಟ್ಟು ಹೆಚ್ಚಿರುತ್ತದೆ. ಸಿಗರೇಟು, ಬೀಡಿ. ಸೇದುವಿಕೆ ಹೆಚ್ಚಾದಷ್ಟೂ ಕ್ಷಯದ ಸಾಧ್ಯತೆ ಹೆಚ್ಚುತ್ತದೆ. ಧೂಮಪಾನ/ ತಂಬಾಕು ಸೇವನೆಯಿಂದ ಹಠಾತ್ತಾಗಿ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಕಾಲುಗಳಲ್ಲಿ ಗ್ಯಾಂಗ್ರೀನ್ಗೆ ಕಾರಣವಾಗಬಹುದು. ದೇಹದ ಎಲ್ಲ ರಕ್ತನಾಳಗಳಲ್ಲಿರುವ ರಕ್ಷಣಾ ಪೊರೆಗೆ ಧಕ್ಕೆ ತರುತ್ತದೆ. ಧೂಮಪಾನದಿಂದ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಿಗೆ ಆರೋಗ್ಯ ತೊಂದರೆಗಳು ಬರುತ್ತವೆ .(ನೀವು ಬಿಡುವ ಹೊಗೆಯನ್ನು ಉಸಿರಾಡಿದ್ದರಿಂದ). ಧೂಮಪಾನ (ಪ್ರತಿದಿನ ಎರಡು ಪ್ಯಾಕ್) ಮಾಡುವ ವ್ಯಕ್ತಿಯೊಂದಿಗೆ ಜೀವಿಸುವ ವ್ಯಕ್ತಿಯೂ ಪರೋಕ್ಷವಾಗಿ (ದಿನಕ್ಕೆ ಮೂರು ಸಿಗರೇಟ್) ಧೂಮಪಾನ ಮಾಡಿದಂತಾಗುತ್ತದೆ. ಪರೋಕ್ಷ ಧೂಮಪಾನ ಮಾಡಿದವರ ಮೂತ್ರ ಪರೀಕ್ಷೆ ನಡೆಸಿದಾಗ ಅವರ ಮೂತ್ರದಲ್ಲಿನ ನಿಕೊಟಿನ್ ಪ್ರಮಾಣವು ಮೂರು ಸಿಗರೇಟ್ ಸೇದಿದವರ ಪ್ರಮಾಣದಷ್ಟಿತ್ತು. ಧೂಮಪಾನ/ ತಂಬಾಕು ಸೇವನೆಯು ಮಧುಮೇಹದ ಸಾಧ್ಯತೆಯನ್ನೂ ಹೆಚ್ಚಿಸುವುದು ಕಂಡುಬಂದಿದೆ. ರಕ್ತದಲ್ಲಿರುವ ಒಳ್ಳೆಯ ಕೊಬ್ಬಿನಂಶವನ್ನು ತಂಬಾಕು ಕಡಿಮೆ ಮಾಡುತ್ತದೆ. ಧೂಮಪಾನ/ ತಂಬಾಕು ಸೇವಿಸುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಹೆಚ್ಚು * ಪ್ರತಿ 8 ಸೆಕೆಂಡಿಗೆ ತಂಬಾಕಿಗೆ ಸಂಬಂಧಿಸಿದ 'ಒಂದು' ಸಾವು ಆಗುವುದು ಮೂಲ: ಪೋರ್ಟಲ್ ತಂಡ