ಕಾರಣಗಳು ಮೊಣಕಾಲು –ನೋವು ಬಹಳವಾಗಿ ಬಳಸುವುದರಿಂದ ಬರುವುದು, ಸರಿಯಾದ ಭಂಗಿಯಲ್ಲಿ ಕೂಡದೆ ಇರುವುದು, ದೈಹಿಕ ಕೆಲಸ ಮಾಡದೆ ಇರುವುದು , ಸಾಕಷ್ಟು ವ್ಯಾಯಾಮವಿಲ್ಲದೆ ಇರುವುದು, ಹೆಚ್ಚುತೂಕವಿರುವುದು ಮೊಣಕಾಲು –ನೋವಿನ ಸಮಸ್ಯೆಗೆ ಕಾರಣವಾಗಬಹುದು. ಮೊಣಕಾಲು –ನೋವು ಬರಲು ಕಾರಣಗಳು : ಅರ್ಥ್ರೈಟಿಸ್ ಮೊಣಕಾಲು ಮೇಲೆ ಹೆಚ್ಚಿನ ಒತ್ತಡಹಾಕುವುದರಿಂದ ಉರಿಯೂತ (ಹೆಚ್ಚು ಹೊತ್ತು ಬಾಗಿ ನಿಲ್ಲುವುವುದು, ಅತಿ ಬಳಕೆ ಅಥವ ಗಾಯ). ಮೊಣಕಾಲು ಮುಂಭಾಗದ ನೋವು ಮೆಟ್ಟಿಲು ಹತ್ತಿ ಇಳಿಯುವಾಗ ತೀವ್ರವಾಗುತ್ತದೆ. ನಟ್ಟಿ / ಕಾರ್ಟಿಲೇಜು ಅಥವ ಲಿಗ್ಮೆಂಟು ಹರಿಯುವಿಕೆ ಒತ್ತಡ ಅಥವ ಹೊರಳುವುದು ಮೊಣಕಾಲಚಿಪ್ಪಿನ ಸರಿಯುವಿಕೆ ಕೀಲುಗಳ ಉರಿಯೂತ ಮೊಣಕಾಲು ಗಾಯ ಸೊಂಟ ಅಥವ ಹಿಪ್ ತೊಂದರೆಯಿಂದ ಮೊಣಕಾಲಿನಲ್ಲಿ ನೋವು ಕಾಣಿಸಬಹುದು. ಮೊಣಕಾಲಿನ ನೋವಿಗೆ ತುಸುಮಟ್ಟಿಗೆ ಮೂಳೆ ಗಳ ಗಡ್ಡೆ ಸಹ ಕಾರಣ ಮನೆ ಆರೀಕೆ ಮೊಣಕಾಲಿನ ನೋವಿಗೆ ಕಾರಣವಾಗುವ ಅನೇಕ ಕಾರಣಗಳು, ವೀಶೇಷವಾಗಿ ಅತಿ ಬಳಕ ಮತ್ತು ದೈಹಿಕ ಚಟುವಟಿಕೆ ಆರೈಕೆಗೆ ಸ್ಪಂದಿಸುವವು: ವಿಶ್ರಮಿಸಿ, ಮತ್ತು ನೋವು ಜಾಸ್ತಿಮಾಡುವ ಟುವಟಿಕ ವೀಶೇಷವಾಗಿ ಭಾರಹೊರುವ ಕೆಲಸ ಮಾಡ ಬೇಡಿ. ಆ ಜಾಗದಲ್ಲಿ ಬರ್ಫವನ್ನು ಇಡಿ. ಪ್ರತಿ 15ನಿಮಿಷ ಇಡಿ. ನಂತರ ದಿನಕ್ಕೆ ಕನಿಷ್ಟ 4 ಸಲ ತಂಪು ಚಿಕಿತ್ಸೆ ಮಾಡಿ. ಮೊಣ ಕಾಲನ್ನು ಎತ್ತರದಲ್ಲಿ ಇಡಿ. ಊತ ಕಡಿಮೆಯಾಗುವುದು. ನೋವು ಮತ್ತು ಬಾವಿಗೆ ಔಷಧಿ ತೆಗದುಕೊಳ್ಳಿ ಮೊಳಕಾಲಿನ ನಡುವೆ ಮತ್ತು ಕೆಳಗೆ ಮೆತ್ತನೆಯ ದಿಂಬು ಇಟ್ಟುಕೊಂಡು ಮಲಗಿ. ಮೂಲ:ಪೋರ್ಟಲ್ ತಂಡ