ಮೂತ್ರ ವಿಸರ್ಜನ ನಾಳದ ಸ್ರಾವ ಪುರುಷರಲ್ಲಿ ಮೂತ್ರ ವಿಸರ್ಜನ ನಾಳದ ಸ್ರಾವದ ತೊಂದರೆ ಬಹಳ ಸಾಮಾನ್ಯವಾದದ್ದು. ಮೂತ್ರನಾಳದಿಂದ ಯಾವುದೇ ಕೀವು ಬರಲು ರೋಗಾಣುವೊಂದೇ ಕಾರಣ. ಅತ್ಯಂತ ಸಾಮಾನ್ಯವಾದ ರೋಗಾಣುವು ಬೆಳಿಗ್ಗೆ ಮೊದಲ ಬಾರಿ ಮುತ್ರ ವಿಸರ್ಜಿಸುವ ಮೊದಲು ಹಳದಿ/ಬಿಳಿ ಕೀವಿನ ಬಿಂದು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಎಲ್ಲ ಸಂದರ್ಭಗಳಲ್ಲು ಅದು ನೋವು ಉಂಟು ಮಾಡುತ್ತದೆ ಮತ್ತು ದೀರ್ಘಕಾಲದ ಸೋಂಕಿಗೆ ಕಾರಣವಾಗುತ್ತದೆ. ಅಂತಹ ತೊಂದರೆಗಳಿರುವ ಪುರುಷರು ಕೂಡಲೇ ಅರ್ಹ ವೈದ್ಯರ ಬಳಿ ತೋರಿಸಿಕೊಳ್ಳಬೇಕು. ತಡೆಗಟ್ಟುವುದು ಇದನ್ನು ತಡೆಗಟ್ಟುವುದಕ್ಕೆ ಅತ್ಯುತ್ತಮ ವಿಧಾನವೆಂದರೆ ಬಹು ಲೈಂಗಿಕ ಸಂಗಾತಿಗಳನ್ನು ಹೊಂದಬಾರದು, ಅಥವಾ ಅಪಾಯಕಾರಿ ಲೈಂಗಿಕ ನಡವಳಿಕೆಯನ್ನು ಮಾಡಬಾರದು. ಕ್ಷಿಪ್ರವಾದ ಮತ್ತು ಸಂಪೂರ್ಣವಾದ ಚಿಕಿತ್ಸೆಯು ಸೋಂಕನ್ನು ಗುಣಪಡಿಸುತ್ತದೆ ಮತ್ತು ಮುಂದಿನ ಸಂಗಾತಿಗೆ ಹರಡುವುದನ್ನು ತಡೆಯುತ್ತದೆ. ಚಿಕಿತ್ಸೆಯ ಅವಧಿಯಲ್ಲಿ ಸಂಭೋಗ ನಡೆಸದಿರುವುದು ಉತ್ತಮ. ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ