ಎಚ್.ಐ.ವಿ. ಅತ್ಯಂತ ಸೂಕ್ಷ್ಮ ಜೀವಾಣುವಿನಿಂದ ಉಂಟಾಗುತ್ತದೆ. ರಕ್ತದಲ್ಲಿ ಎಚ್ಐವಿ ಫಾಸಿಟೀವ್ ಎಂದು ಪರಿಗಣಿಸಲಾಗುತ್ತದೆ. ರಕ್ತ ಪರೀಕ್ಷೆಯಿಲ್ಲದೆ ಇದನ್ನು ಗುರುತಿಸಲು ಸಾಧ್ಯವಿಲ್ಲವಾದ್ದರಿಂದ, ಒಬ್ಬ ವ್ಯಕ್ತಿಗೆ ಎಚ್ಐವಿ ಸೋಂಕು ತಗುಲಿದೆಯೇ ಎಂದು ಕೇವಲ ನೋಡುವುದರಿಂದ ಹೇಳಲಾಗುವುದಿಲ್ಲ. ಕೆಳಕಂಡ ಮಾರ್ಗಗಳ ಮೂಲಕ ಎಚ್ಐವಿ ಹರಡಬಹುದು. ಸೋಂಕು ಇರುವ ವ್ಯಕ್ತಿಯೊಡನೆ ಅಸುರಕ್ಷಿತ ಲೈಂಗಿಕ ಸಂಭೋಗ (ಯೋನಿಯ ಮೂಲಕ, ಗುದದ ಮೂಲಕ) ನಡೆಸುವುದರಿಂದ, ಎಚ್ಐವಿ ಪಾಸಿಟೀವ್ ವ್ಯಕ್ತಿಯಿಂದ ಪಡೆದ ರಕ್ತವನ್ನು ಇನ್ನೊಬ್ಬರಿಗೆ ಕೊಡುವುದರ ಮೂಲಕ. ಎಚ್ಐವಿ ಪಾಸಿಟೀವ್ ವ್ಯಕ್ತಿಗೆ ಈ ಮೊದಲೇ ಬಳಸಿದ ಕಲುಷಿತ ಸೂಜಿಯನ್ನು ಇನ್ನೊಬ್ಬ ವ್ಯಕ್ತಿಗೆ ಬಳಸುವ ಮೂಲಕ. ಎಚ್ಐವಿ ಪಾಸಿಟೀವ್ ಗರ್ಭಿಣಿ ಮಹಿಳೆಯಿಂದ ಹೆರಿಗೆಯ ಸಮಯದಲ್ಲಿ ಅಥವಾ ಅನಂತರ ಮಗುವಿಗೆ. ಎಚ್.ಐ.ವಿ. ಸೋಂಕು ಹರಡುತ್ತದೆ. ಎಚ್.ಐ.ಬಿ. ಕೆಳಕಂಡ ಸಂದರ್ಭಗಳಲ್ಲಿ ಹರಡುವುಲದಿಲ್ಲ. ಒಬ್ಬ ವ್ಯಕ್ತಿಯನ್ನು ಸ್ಪರ್ಶಿಸುವುದರಿಂದ ಮತ್ತು ಚುಂಬಿಸುವುದರಿಂದ ಒಟ್ಟಿಗೆ ಆಟವಾಡುವುದು, ಈಜಾಡುವುದರಿಂದ ಸಾಮಾನ್ಯವಾದ ಸ್ನಾನಗೃಹಗಳು ಮತ್ತು ಶೌಚಗೃಹಗಳನ್ನು ಬಳಸುವುದರಿಂದ ಸೊಳ್ಳೆ ಕಡಿತದಿಂದ ಇತರ ಬಳಕೆಯ ವಸ್ತುಗಳನ್ನು ಉಪಯೋಗಿಸುವುದರಿಂದ ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ