ಗನೋರಿಯಾ ವೆಂದರೇನು?ಗನೋರಿಯಾವು ಲೈಂಗಿಕವಾಗಿ ಹರಡುವ ರೋಗ. (STD). ಗನೋರಿಯಾ ನೈಸ್ಸೇರಿಯಾಗನೋರಿಯಾ ಎಂಬ ಬ್ಯಾಕ್ಟೀರಿಯಾದಿಂದ ಹರಡುವುದು.ಅದು ವದ್ದೆ ಯಾದ, ಬೆಚ್ಚಗಿನ ಪುರುಷರ ಮತ್ತು ಮಹಿಳೆಯರ ಸಂತಾನೋತ್ಪತ್ತಿ ನಾಳಗಳಲ್ಲಿ ಬಹುಬೇಗ ವೃದ್ಧಿಯಾಗುವುದು.ಅವು ಬಾಯಿ, ಗಂಟಲು , ಕಣ್ಣುಗಳು ಮತ್ತು ಗುಧದಲ್ಲಿಯೂ ಬೆಳೆಯುತ್ತವೆ. ಜನರಿಗೆ ಗನೋರಿಯಾ ಹೇಗೆ ಬರುವುದು ? ಗನೋರಿಯಾವು ಶಿಶ್ನ, ಯೋನಿ, ಬಾಯಿ ಅಥವ ಗುಧ ದ್ವಾರಗಳ ಸಂಪರ್ಕದಿಂದ ಹರೆಯುವುದು. ಅದು ತಾಯಿ ಯಿಂದ ಮಗುವಿಗೂ ಜನನ ಕಾಲದಲ್ಲಿ ಹರಡಬಹುದು. ಗನೋರಿಯಾದ ಲಕ್ಷಣಗಳೇನು? ಲೈಂಗಿಕವಾಗಿಕ್ರಯಾಶೀಲನಾದ ಯಾರಿಗೆ ಆದರೂ ಗನೋರಿಯಾ ಸೋಂಕು ತಗುಲಬಹುದು. ಗನೋರಿಯಾ ಸೋಂಕಿತ ಅನೇಕ ಪುರುಷರಿಗೆ ಯವುದೆ ಲಕ್ಷಣ ಗೋಚರಿಸಲಿಕ್ಕಿಲ್ಲ. ಕೆಲವರಿಗೆ ಸೋಂಕಿನ ಕೆಲ ಲಕ್ಷಣಗಳು ಅಥವ ಚಿಹ್ನೆಗಳು ಸೋಂಕು ತಗುಲಿದ ಎರಡರಿಂದ ಐದು ದಿನದ ಮೇಲೆ ಕಾಣಿಸಿಕೊಳ್ಳ ಬಹುದು. ಅನೇಕ ಬಾರಿ ಸೋಂಕು ತಗುಲಿದ 30 ದಿನಗಳ ನಂತರ ಕಾಣಿಸಬಹುದು. ಅದರ ಲಕ್ಷಣ ಎಂದರೆ ಮೂತ್ರ ವಿಸರ್ಜಿಸುವಾಗ ಉರಿ ಮತ್ತು ಜೊತೆಗೆ ಹಳದಿ ಅಥವ ಹಸಿರು ಕೀವು ಬರುವುದು. ಹಲವುಬಾರಿ ತೊರಡು ಬಾವು ಮತ್ತು ನೋವು ಉಂಟಾಗುವುದು. ಮಹಿಳೆಗೆ ಗನೋರಿಯಾ ಬಂದಾಗ ಬಹಳ ತೀವ್ರವಾದ ಚಿಹ್ನೆಗಳು ಇರುವುದಿಲ್ಲ. ಮೂತ್ರವಿಸರ್ಜನೆಯ ಸಮಯದಲ್ಲಿ ನೋವು, ಉರಿ ಆಗುವುದು. ಯೋನಿಯಿಂದ ಬಿಳಿ ಸ್ರಾವ ಮತ್ತು ಆಗಾಗ ರಕ್ತ ಸ್ರಾವ ಆಗುವುದು. ಗನೋರಿಯಾವು ಗರ್ಭೀಣಿ ಹಾಗೂ ಅವಳ ಮಗುವಿಗೆ ಏನು ಪರಿಣಾಮ ಬೀರುವುದು? ಗನೋರಿಯಾ ಇದ್ದ ಮಹಿಳೆಯು ಜನನ ಸಮಯದಲ್ಲಿ ಮಗುವಿಗೆ ಸೋಂಕು ತಗುಲಿಸಬಹುದು. ಇದರಿಂದ ಕುರುಡುತನ, ಸಂಧಿಗಳಿಗೆ ಸೋಂಕು ಅಥವ ಮಗುವಿಗೆ ಮಾರಾಣಾಂತಕ ರಕ್ತದ ಸೋಂಕು ತಗುಲಬಹುದು. ಗರ್ಭೀಣಿಗೆ ಗನೋರಯಾ ಇದೆ ಎಂದು ತಿಳಿದ ತಷ್ಕ್ಷಣ ಚಿಕಿತ್ಸೆ ಕೊಟ್ಟರೆ ಈ ಸಮಸ್ಯೆಗಳು ತೀವ್ರತೆ ಬಹಳ ಕಡಿಮೆ ಯಾಗುವುದು. ಗರ್ಭೀಣಿ ಮಹಿಳೆಯು ಆರೋಗ್ಯ ಸೇವಾ ಕರ್ತರನ್ನು ಸಂಪರ್ಕಿಸಿ ಸೂಕ್ತವಾದ ಪರೀಕ್ಷೆ ಮತ್ತು ಅಗತ್ಯ ಬಿದ್ದರೆ ಚಿಕಿತ್ಸೆ ಪಡೆಯಬೇಕು. ಗನೋರಿಯಾವನ್ನು ಹೇಗೆ ತಡೆಯಬಹುದು ? ಖಚಿತ ವಾಗಿ ಲೈಂಗಿಕವಾಗಿ ಹರಡುವರೋಗವನ್ನು ತಡೆಯುವ ವಿಧಾನ ವೆಂದೆರ ಲೈಂಗಿಕ ಸಂಪರ್ಕದಿಂದ ದೂರವಿರುವುದು ಅಥವ ಸೋಂಕಿತರಲ್ಲದ ಮತ್ತು ರಕ್ತ ಪರೀಕ್ಷೆಗೊಳಗಾಗಿರುವ ಏಕ ವ್ಯಕ್ತಿಯೊಂದಿಗೆ ಬಹುಕಾಲದ ಸಂಬಂಧವಿರಿಸಿಕೊಳ್ಳುವುದು. ಮೂಲ :ಪೋರ್ಟಲ್ ತಂಡ