ವೆರಿಸೆಲ್ಲಾ ಝೋಸ್ಟರ್ ವೈರಾಣು (ವೈರಸ್) ವಿನಿಂದ ಈ ಸೋಂಕು ರೋಗ ಹರಡುತ್ತದೆ. ಇದು ಸೋಂಕು ತೀವ್ರವಾಗಿ ಹರಡುವ ರೋಗ ಸೋಂಕಿತ ಹನಿಗಳನ್ನು ಉಸಿರಾಡುವುದರಿಂದಲೂ ಈ ರೋಗ ಬರುತ್ತದೆ. ಲಕ್ಷಣಗಳು ಮೈಮೇಲೆ ಏಳುವ ಗುಳ್ಳೆಗಳ ಲಕ್ಷಣಗಳು: ಕೆಂಪು ಬಣ್ಣದ ಪುಟ್ಟಪುಟ್ಟ ಗುಳ್ಳೆಗಳೇಳುತ್ತವೆ ಗುಳ್ಳೆಗಳು ನೀರು ತುಂಬಿಕೊಂಡು ನಂತರ, ಕೀವು ತುಂಬಿ ಒಡೆಯುತ್ತವೆ. ನಂತರ ಸುತ್ತೆಲ್ಲ ಹರಡಿಕೊಳ್ಳುತ್ತದೆ. ಮುಖ, ನೆತ್ತಿ, ಹೊಟ್ಟೆಯ ಮೇಲೆ ಹೆಚ್ಚು ಕಂಡು ಬರುತ್ತವೆ. ತೋಳು ಕಾಲುಗಳ ಮೇಲೆ ಇವುಗಳ ಸಾಂದ್ರತೆ ಕಡಿಮೆ. ತೀವ್ರ ತೆರನಾದ ತುರಿಕೆ ಇರುವ ಸಾಧ್ಯತೆ ಹೆಚ್ಚು. ಜ್ವರ ತಡೆಗಟ್ಟುವಿಕೆ ಈಗ ಚಿಕನ್ ಪಾಕ್ಸ್ ಗೆ ರೋಗ ನಿರೋಧಕ ಲಸಿಕೆ ಲಭ್ಯವಿದೆ. ಮಗುವಿಗೆ ೧೨ ತಿಂಗ ಳ ನಂತರ ಹಾಕಿಸಬೇಕು. ರೋಗನಿರೋಧಕ ಶಕ್ತಿ ಕಡಿಮೆ ಇರುವ ಯಾರು ಬೇಕಾದರೂ ಈ ಲಸಿಕೆ ಹಾಕಿಸಿಕೊಳ್ಳಬಹುದು. ಕೈಗೊಳ್ಳಬೇಕಾದ ಎಚ್ಚರಿಕೆಗಳು ಚಿಕನ್ ಪಾಕ್ಸ್ ಇರುವ ಮಕ್ಕಳು ಆಸ್ಪಿರಿನ್ ತೆಗೆದುಕೊಂಡರೆ ಅದು ರಿಯೆಸ್ ಸಿಂಡ್ರೋಮ್ಗೆ ಕಾರಣವಾಗಬಹುದು. ಇದು ಮೆದುಳಿಗೆ ಧಕ್ಕೆ ತಂದು ಸಾವಿಗೂ ಕಾರಣವಾಬಹುದು. ಚಿಕನ್ಪಾಕ್ಸ್ ಇರುವ ಮಕ್ಕಳಿಗೆ ಆಸ್ಪಿರಿನ್ ಕೊಡಬಾರದು. ಬೇರೆ ಯಾವುದೇ ರೋಗಗಳಿಗೂ ಕೂಡ ವೈದ್ಯರು ನಿರ್ದಿಷ್ಟ ಸಲಹೆ ನೀಡದೇ ಇದ್ದಾಗ ಆಸ್ಪಿರಿನ್ ಬಳಕೆ ಸಲ್ಲ. ಮಕ್ಕಳಿಗೆ ಸುರಕ್ಷಿತ ಔಷಧಗಳ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಪ್ರೌಢರಲ್ಲಿ ನ್ಯುಮೋನಿಯಾ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಲ್ಲದೆ ಎಚ್ಐವಿ ಸೋಂಕಿರುವ ಮಕ್ಕಳಲ್ಲಿ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ನ್ಯುಮೋನಿಯಾ ಸಾಧ್ಯತೆ ಹೆಚ್ಚು. ಚಿಕನ್ ಪಾಕ್ಸನಿಂದ ಬಳಲದ ಗರ್ಭಿಣಿಯರು ಈ ವೈರಸ್ ಸೋಂಕಿನಿಂದ ದೂರ ಉಳಿಯುವುದು ಒಳಿತು. ಮೂಲ:ಪೋರ್ಟಲ್ ತಂಡ