ಇದು ಒಂದು ಬ್ಯಾಕ್ಟೀರಿಯಲ್ ಸೋಂಕು. ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಧಾರಣವಾಗಿ 2 ವರ್ಷದೊಳಗಿನ ಮಕ್ಕಳ ಶ್ವಾಸ ನಾಳದ ಮೇಲೆ ಪರಿಣಾಮ ಬೀರುವುದು. ಈ ರೋಗ ಬಂದಾಗ ಉಸಿರು ಎಳೆದೊಕೊಳ್ಳುವಾಗ ಬರುವ ಶಬ್ದದಿಂದ ಈ ಹೆಸರು ಬಂದಿದೆ. ಕಾರಣಗಳುಬ್ಯಾಕ್ಟೀರಯಂ, ಬೊಡೆಟೆಲ್ಲ ಪರ್ಟಸಿಸ್ ಎಂಬ ರೋಗಾಣು ಇದಕ್ಕೆ ಕಾರಣ. ಇದು ಜನರ ನಡುವೆ ಉಸಿರಾಟದ ಸಮಯದಲ್ಲಿ ತುಂತುರಾಗಿ ಹರಡುವುದು. ಸೋಂಕಿತ ಜನರು ಕೆಮ್ಮಿದಾಗ ಮತ್ತು ಸೀನಿದಾಗ ಹರಡುವುದು. ಇದು ಸೋಂಕಿತ ಜೀವದ್ರವಗಳ ಮೂಗಿನ ಸ್ರಾವದ ಸಂಪರ್ಕದಿಂದಲೂ ಬರಬಹುದು ಲಕ್ಷಣಗಳು ಬ್ಯಾಕ್ಟೀರಿಯಾ ಸೋಂಕು ತಗುಲಿದ 7-17 ದಿನಗಳಲ್ಲಿ ಲಕ್ಷಣಗಳು ಕಾಣುತ್ತವೆ ಲಕ್ಷಣ ಕಾಣಿಸಿದ ರೋಗಿಗಳಲ್ಲಿ ಬಹತೇಕರು 2 ವರ್ಷದ ಒಳಗಿನವರು ಲಕ್ಷಣಗಳು ಕಾಣಲು ಸಾಧಾರಣವಾಗಿ 6 ವಾರ ಬೇಕು, ಅದು ಮೂರು ಹಂತದಲ್ಲಿರುವುದು: ಹಂತ 1 : ಸೀನುವುದು, ಕಣ್ಣಲ್ಲಿ ನೀರು ಬರುವುದು, ಮೂಗುಸೋರುವುದು ,ಹಸಿವೆ ಇಲ್ಲದಿರುವುದು, ಶಕ್ತಿ ನಷ್ಟ, ರಾತ್ರಿಯಲ್ಲಿ ಕೆಮ್ಮು ಗಳಂತಹ ಲಕ್ಷಣಗಳನ್ನು ಕಾಣಬಹುದಾಗಿದೆ. ಹಂತ 2 : ಜೋರಾದ ತಡೆರಹಿತ ಕೆಮ್ಮು ಜೊತೆಗೆ ಗಾಳಿ ಒಳಗೆ ತೆಗೆದುಕೊಂಡಾಗ ಸೆಳೆವ ಶಬ್ದ. ಹಂತ 3 :ಸುಧಾರಣೆಯ ಹಂತ ಕೆಮ್ಮು ಮೊದಲಿನಷ್ಟು ತೀವ್ರ ವಲ್ಲ, ಜಾಸ್ತಿಯೂ ಇಲ್ಲ. ಈ ಹಂತವು ಸಾಧಾರಣ ವಾಗಿ 4ನೆ ವಾರದ ನಂತರ ಬರುವುದು. ಎಳೆಯ ರೋಗಿಗಳಲ್ಲಿ ಕೆಮ್ಮು 2 ವಾರಕ್ಕಿಂತ ಹೆಚ್ಚು ಮುಂದುವರೆದರೆ ನಾಯಿಕೆಮ್ಮು ಎಂದು ಅನುಮಾನ ಪಡಬಹುದು. ತಡೆಗಟ್ಟುವಿಕೆ ಪರ್ಟುಸಿಸ್ ವ್ಯಾಕ್ಸನ್ನಿಂದ ಇಮ್ಯುನೈಜೇಷನ್ ಎಲ್ಲ ಶಿಶುಗಳಿಗೂ ಮಾಡಿಸಬೇಕು. ಇದು ಸಾಧಾರಣವಾಗಿ DTP (ಡಿಫ್ತೀರಿಯಾ,ಟೆಟನಸ್, ಮತ್ತು ಪರ್ಟಸಿಸ್) ಒಟ್ಟಾದ ವ್ಯಾಕ್ಸಿನ್. ಮೊದಲು ನೀಡಿದ ವ್ಯಾಕ್ಸಿನ್ ಆಗಲಿ ಇಲ್ಲವೆ ಈಗಾಗಲೇ ಬಂದಿರುವ ಸೋಂಕಾಗಲಿ ಆಜೀವ ನಿರೋಧತೆ ನೀಡುವುದಿಲ್ಲ‘. ಆದರೂ 6 ವರ್ಷದ ನಂತರ ಇದನ್ನು ಕೊಡಬಾರದು. ಸೋಂಕು ತಗುಲಿದ್ದರೆ ವಿನಾಯತಿ ಇದೆ, ಮೂಲ:ಪೋರ್ಟಲ್ ತಂಡ