ನಿಮ್ಮ ಗ್ರಾಮದಲ್ಲಿರುವ ಎಲ್ಲಾ ಗರ್ಭಿಣಿಯರನ್ನು ಗುರುತಿಸಬೇಕು. 12-16 ವಾರಗಳಲ್ಲಿ ದಾಖಲಾತಿಸಲು ಮತತು ಮುಂದಿನ ಮೂರು ಹೆರಿಗೆ ನಂತರದ ಪರೀಕ್ಷೆ ಮಾಡಿಸಿಕೊಳ್ಳಲು ಗರ್ಭಿಣಿ ಮಹಿಳೆಗೆ ಸಹಾಯ ಮಾಡಬೇಕು. ನಿಮ್ಮ ಗ್ರಾಮದ ಅಂಗನವಾಡಿ ಕೇಂದ್ರದಿಂದ ಕಿರಿಯ ಮಹಿಳಾ ಆರೋಗದಯ ಸಹಾಯಕಿ ದೊರೆಯುವ ಸಮಯ ದಿನಾಂಕವನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಎಲ್ಲಾ ಗರ್ಭಿಣಿಯರಿಗೆ ತಿಳಿಸಬೇಕು. ಸಮತೋಲನ ಆಹಾರದ ಬಗ್ಗೆ ಗರ್ಭಿಣಿಗೆ ಸಲಹೆ ನೀಡಬೇಕು. ಹಾಗೂ ಉತ್ತಮ ಪೋಷಣೆ ಇಲ್ಲದ ಗರ್ಭಿಣಿಯರು ಅಂಗನವಾಡಿ ಕೇಂದ್ರದಿಂದ ಪೂರಕ ಆಹಾರ ಸ್ವೀಕರಿಸುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳುವುದು. ಸೇವೆಯಿಂದ ವಂಚಿತರಾಗಿರುವ ಗರ್ಭಿಣಿಯರಿಗೆ ಆರೈಕೆ ಒದಗಿಸುವುದು ದಾರಿಗೆ ತರುವುದು. ಅದರಲ್ಲು ವಿಶೇಷವಾಗಿ ದೂರದ ಹಳ್ಳಿಗಳಲ್ಲಿರುವ ಕಡುಬಡವರು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಇತರೆ ವಲಸೆ ಬಂದಿರುವ ಸಮೂಹದಲ್ಲಿ ಮತ್ತು ಅವರು ಆರೋಗ್ಯ ಸೇವೆ ಪಡೆದುಕೊಳ್ಳಲು ಸಹಾಯ ಮಾಡಬೇಕು. ಅರ್ಹ ಗರ್ಭಿಣಿ ಜನನಿ ಸುರಕ್ಷಾ ಯೋಜನೆ ಕಾರ್ಯಕ್ರಮದಡಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದು. ನೀವು ಸಹ ತಿಳಿದುಕೊಂಡಿರಬೇಕು. ರಕ್ತದ ಬ್ಯಾಂಕ್, ಆಪರೇಷನ್ ಥಿಯೇಟರ್, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು ಇರುವ ಆಸ್ಪತ್ರೆ/ಹತ್ತಿರದ ಎಫ್.ಆರ್.ಯು ಇರುವ ಸ್ಥಳವನ್ನು ತಿಳಿದುಕೊಂಡಿರಬೇಕು. ತುರ್ತು ಸಮಯದಲ್ಲಿ ಆರೈಕೆ ಪಡೆಯುವುದಕ್ಕೆ ತಲುಪಲು ಸಾರಿಗೆ ವ್ಯವಸ್ಥೆಯ ಅನುಕೂಲವನ್ನು ತಿಳಿದುಕೊಂಡಿರಬೇಕು. ಖಾಸಗಿ ಆಸ್ಪತ್ರೆಯಾಗಿದ್ದಲ್ಲಿ. ಆ ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗ, ರಕ್ತ ನೀಡುವುದಕ್ಕೆ ಮತ್ತು ಆಸ್ಪತ್ರೆಯ ವಾಸ್ತವ್ಯತೆಗೆ ತಗಲಬಹುದಾದ ವೆಚ್ಚÀದ ಬಗ್ಗೆ ತಿಳಿದುಕೊಂಡಿರಬೇಕು. ಒಂದುವೇಳೆ ಇದು ಎರಡನೇ ಗರ್ಭಾವಸ್ಥೆಯಾಗಿದ್ದರೆ ದಂಪತಿಗಳಿಗೆ ಹೆಣ್ಣು ಮಗುವಿದ್ದರೆ ಕುಟುಂಬ ಮತ್ತೊಂದು ಹೆಣ್ಣು ಮಗುವನ್ನು ತಿರಸ್ಕರಿಸಬಹುದು. ಆದುದರಿಂದ ಆಶಾ ಈ ಬಗ್ಗೆ ಜಾಗೃತಳಾಗಿರಬೇಕು. ತದನುಸಾರವಾಗಿ ಸಮಾಲೋಚಿಸಬೇಕು. ಆಶಾಳಾಗಿರುವ ನೀವು ಮಹಿಳೆಯರ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ, ಹೆರಿಗೆ ನಂತರ ಮತ್ತು ಬಾಣಂತನದ ಅವಧಿಯಲ್ಲಿ ಬರುವ ಅಪಾಯಗಳ ಬಗ್ಗೆ ಗರ್ಭಿಣಿಗೆ ಹಾಗೂ ಅವರ ಕುಟುಂಬದವರಿಗೆ ಸಲಹೆ ನೀಡಬೇಕು. ಗರ್ಭಿಣಿ ಈ ಕೆಳಗಿನ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ಅಂತಹ ಗರ್ಭಿಣಿಯನ್ನು ನೇರವಾಗಿ ಹತ್ತಿರದ ಎಫ್.ಆರ್.ಯುಗೆ ಕರೆದುಕೊಂಡು ಹೋಗಬೇಕು. ಗರ್ಭಾವಸ್ಥೆಯ ಅವಧಿಯಲ್ಲಿ ಯೋನಿಸ್ರಾವವಿದ್ದರೆ. ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆ ನಂಗರ ಯೋನಿಸ್ರಾವ ತುಂಬ ಇದ್ದಾರೆ. ಗರ್ಭಿಣಿ ಬಹಳ ನಿಶಕ್ತಳಾಗಿದ್ದರೆ ಮತ್ತು ಪ್ರಜ್ಞೆ ತಪ್ಪಿದ್ದರೆ. ತಲೆನೋವು ಜಾಸ್ತಿಯಾಗಿದ್ದರೆ/ದೃಷ್ಠಿ ಮಸುಕಾಗಿದ್ದರೆ. ಪ್ರಜ್ಞೆ ತಪ್ಪಿದರೆ/ಜಾಗೃತಿ ಹೋದರೆ. ಹೆರಿಗೆ ನೋವು 12 ಗಂಟೆಗಳ ನಂತರವು ಮುಂದುವರಿದರೆ. 8 ತಿಂಗಳ ಮೊದಲೆ ಹೆರಿಗೆ ನೋವು ಕಾಣಿಸಿಕೊಂಡರೆ ಅಥವಾ 32-36 ವಾರಗಳ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಂಡರೆ. ನೀರಿನ ಚೀಲ ಅಕಾಲಿಕವಾಗಿ ಬಿರುಕು ಬಿಡುವುದು ಅಥವಾ ಗರ್ಭಾಶಯ, ಪೊರೆಯಿಂದ ನೀರು ಸೋರುವುದು. ಹೆರಿಗೆಯಾದ 30 ನಿಮಿಷಗಳೊಳಗೆ ಹೊಕ್ಕಳ ಬಳ್ಳಿ ಹೊರಗೆ ಬರದೆ ಹೋದರೆ. ಹೊಟ್ಟೆಯೊಳಗೆ ಮಗು ಒದೆಯುವುದನ್ನು ನಿಲ್ಲಿಸಿದರೆ. ಮೂಲ:ಆಶಾ ಕಲಿಕೆ ಕೈಪಿಡಿ