ಹೈಡ್ರಾಮ್ನಿಯಾಸ್ ಎಂಬುದು ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು ಅಮ್ನಿಯಾಟಿಕ್ ದ್ರವಸಂಗ್ರಹವಾಗುವ ಸ್ಥಿತಿ. ಇದನ್ನು ಅಮ್ನಿಯೋಟಿಕ್ ದ್ರವದ ಏರುಪೇರು ಪಾಲಿ ಹೈಡ್ರಾಮ್ನಿಯಾಸ್ ಎಂದೂ ಕರೆಯುವರು. ಆಮ್ನಿಯೋಟಿಕ್ ದ್ರವವು ಒಂದು ಶುದ್ಧೀಕೃತ ದ್ರಾವಣ. ಇದು ಭ್ರೂಣವನ್ನು ಸುತ್ತುವರಿದು ಮಗುವಿಗೆ ಗರ್ಭದಲ್ಲಿ ರಕ್ಷಣೆ ಒದಗಿಸುವುದು. ಇದು ಮಗುವಿನ ಮೂತ್ರ ಪಿಂಡದಿಂದ ಒಸರುವುದು. ಇದನ್ನು ಭ್ರೂಣದ ಮೂತ್ರ ಎನ್ನಬಹುದು. ಇದನ್ನು ಭ್ರೂಣವು ಕುಡಿದಾಗ ಹೀರಲ್ಪಡುತ್ತದೆ. ಇದರ ಪ್ರಮಾಣವು ೩೬ ವಾರದವರೆಗೆ ಕಡಿಮೆಯಾಗಿರುತ್ತದೆ. ಭ್ರೂಣವು ಹೆಚ್ಚು ಮೂತ್ರವನ್ನು ಉತ್ಪಾದಿಸಿದರೆ ಇಲ್ಲವೇ ಸಾಕಷ್ಟು ಪ್ರಮಾಣದಲ್ಲಿ ಸೇವಿಸದಿದ್ದರೆ ಬಹಳಷ್ಟು ಪ್ರಮಾಣದಲ್ಲಿ ಶೇಖರವಾಗುತ್ತದೆ. ಅದರ ಪರಿಣಾಮವೇ ಹೈಡ್ರಾಮ್ನಿಯಾಸ್. ತೀವ್ರವಾದ ಹೈಡ್ರಾಮ್ನಿಯಾಸ್ ಭ್ರೂಣವನ್ನು ಸಮಸ್ಯೆಗೆ ದೂಡಬಹುದು. ಕೇಂದ್ರ ನರಮಂಡಲ ದೋಷ ಪೂರಿತವಾಗಬಹುದು. ಜಠರ ಮತ್ತು ಕರುಳಿನಲ್ಲಿ ತಡೆಯಾಗಬಹುದು. ಕ್ರೊಮೋಜೋಮ್ ಸಮಸ್ಯೆ ತಲೆದೋರಬಹುದು. ಕೆಲವು ಸಲ ಅವಧಿ ಪೂರ್ಣ ಹೆರಿಗೆ ಬೇನೆ ಬರಬಹುದು ಅಥವಾ ಭ್ರೂಣದ ಸಾವು ಸಂಭವಿಸಬಹುದು. ಅನೇಕಸಲ ಸ್ವಲ್ಪಮಟ್ಟಿನ ಹೈಡ್ರಾಮ್ನಿಯಾಸ್ ಕಂಡು ಬರುವುದು. ಅದು ಅಂತಹ ಸಮಸ್ಯೆಯಲ್ಲ. ಎರಡನೇ ತ್ರೈಮಾಸಿಕದಲ್ಲಿ ಬರುವ ಹೆಚ್ಚುವರಿ ದ್ರವವು ಯಾವುದೇ ಚಿಕಿತ್ಸೆಯಿಲ್ಲದೆ ಸಾಮಾನ್ಯ ಸ್ಥಿತಿಗೆ ಹಿಂತಿರುಗುವ ಸಾಧ್ಯತೆಯಿದೆ. ನನಗೆ ಹೈಡ್ರಾಮ್ನಿಯಾಸ್ ಸಮಸ್ಯೆಯಿದೆ ಎಂದು ತಿಳಿಯುವುದು ಹೇಗೆ? ಹೈಡ್ರಾಮ್ನಿಯಾಸ್ ಕಡಿಮೆ ಪ್ರಮಾಣದಲ್ಲಿದ್ದರೆ ಯಾವುದೇ ಚಿಹ್ನೆಯನ್ನು ತೋರುವುದಿಲ್ಲ. ಹೊಟ್ಟೆ ನೋವು ಬಂದರೆ ಕಣ್ಣಿಗೆ ಕಾಣುವಷ್ಟು ಮೈಕೈ ಬಾವು ಬಂದರೆ ವೈದ್ಯರನ್ನು ಭೇಟಿ ಮಾಡಿ. ಅವು ಗಂಭೀರ ಸ್ವರೂಪದ ಕಾಯಿಲೆಯ ಸಂಕೇತವಾಗಿವೆ. ನಿಮ್ಮ ನಿಯಮಿತ ಆರೋಗ್ಯ ತಪಾಸಣೆಯ ಸಮಯದಲ್ಲಿ ವೈದ್ಯರು ಟೇಪು ಅಥವಾ ಇನ್ನಾವುದೇ ಸಾಧನವನ್ನು ಉಪಯೋಗಿಸಿ ‘ಫಂಡಲ್ ಎತ್ತರ’ ವನ್ನು ಅಳೆಯುವರು. ಅದು ನಿಮ್ಮ ಗರ್ಭಾಶಯದಿಂದ ಫ್ಯೂಬಿಕ್ ಮೂಳೆಯ ಮೇಲ್ಭಾಗದವರೆಗಿನ ಅಂತರ. ಮಗುವಿನ ಬೆಳವಣಿಗೆಯನ್ನು ಹೊಟ್ಟೆಯ ಮೂಲಕ ಗರ್ಭಾಶಯವನ್ನು ಮುಟ್ಟಿ, ಇಲ್ಲವೇ ಅಲ್ಟ್ರಾಸೌಂಡ್ ಮೂಲಕ ಪತ್ತೆ ಹಚ್ಚುವರು ಅವರಿಗೆ ಹೈಡ್ರಾಮ್ನಿಯಾಸ್ ಆಗಿದೆ ಎಂಬ ಅನುಮಾನ ಬಂದರೆ ಅಲ್ಟ್ರಾಸೌಂಡ್ ಪರೀಕ್ಷೆಗೆ ಶಿಫಾರಸು ಮಾಡುವರು. ಅದು ಮಗುವಿನ ಸುತ್ತ ಆವರಿಸಿರುವ ದ್ರವದ ಮಾಹಿತಿಯನ್ನು ನೀಡುತ್ತದೆ. ಅದನ್ನು ಚಿಕಿತ್ಸೆ ಮಾಡುವುದು ಹೇಗೆ? ವೈದ್ಯರು ವ್ಯಾಧಿಯ ಚಿಹ್ನೆಗೆ ಮಾತ್ರ ಚಿಕಿತ್ಸೆ ನೀಡಬಲ್ಲರು ಆದರೆ ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಅಲ್ಲ. ನಿಮಗೆ ನಡೆಯುವಾಗ ಉಸಿರು ಕಟ್ಟಿದಂತೆ ಅನ್ನಿಸಿದರೆ ವೈದ್ಯರು ನಿಮಗೆ ಆಸ್ಪತ್ರೆಗೆ ಸೇರಿಸಬಹುದು. ಏಕೆಂದರೆ ಇದು ಅವಧಿಪೂರ್ವ ಪ್ರಸವಕ್ಕೆ ಅನುವು ಮಾಡಿಕೊಡುತ್ತದೆ. ಅವರು ನಿಮಗೆ ಇದನ್ನು ನಿಯಂತ್ರಿಸಲು ಔಷಧಿ ನೀಡಬಹುದು. ಇಲ್ಲವೇ ಹೆಚ್ಚಾದ ದ್ರವವನ್ನು ತೆಗೆದು ಹಾಕಲು ಆಮ್ನಿಯೋಸೆಂಟಿಸಿಸ್ಗೆ ಒಳಪಡಿಸಬಹುದು. ಇದರಿಂದ ತೊಂದರೆ ಸ್ವಲ್ಪ ಕಡಿಮೆಯಾಗಬಹುದು. ಹೆಚ್ಚುವರಿ ದ್ರವವು ಏಕೆ ಸಂಗ್ರಹವಾಗಿದೆ ಎಂಬುದನ್ನು ತಿಳಿಯಲು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಅಲ್ಟ್ರಾಸೌಂಡ್ ಫಲಿತಾಂಶವನ್ನು ಪರಿಶೀಲಿಸಿದಾಗ ವರ್ಣತಂತು ಸಮಸ್ಯೆ ಇದಕ್ಕೆ ಕಾರಣವೆಂದು ಕಂಡುಬಂದಿರಬಹುದು. ರಕ್ತವನ್ನು ಪರೀಕ್ಷೆ ಮಾಡಿ ಮದುಮೇಹ ಹಾಗೂ ಇನ್ನಿತರ ಸೋಂಕಿನ ಸಮಸ್ಯೆಗಳ ಬಗ್ಗೆ ಅರಿಯಬಹುದು. ಆದರೂ ಹೆಚ್ಚಿನ ಸಂದರ್ಭದಲ್ಲಿ ಸರಿಯಾದ ಕಾರಣಗಳು ಸಿಗುವುದಿಲ್ಲ. ಅದನ್ನು ತಡೆಗಟ್ಟುವುದು ಹೇಗೆ ? ಅದನ್ನು ತಡೆಯಲಾಗದು. ಏಕೆಂದರೆ ಹೀಗಾಗಲು ಕಾರಣವೇನೆಂದು ಇದುವರೆಗೂ ತಿಳಿದಿಲ್ಲ. ಅನೇಕಬಾರಿ ಭ್ರೂಣದ ಸೇವನಾ ವ್ಯವಸ್ಥೆಯ ದೋಷ ಇದಕ್ಕೆ ಕಾರಣವಿರಬಹುದು. ಅದು ಹುಟ್ಟುವಾಗಿನ ದೋಷಕ್ಕೆ ಸಂಬಂಧಿಸಿರಬಹುದು. ಈ ವ್ಯಾಧಿಯನ್ನು ತಡೆಯಲು ಯಾವುದೇ ವಿಧಾನಗಳಿಲ್ಲ. ಆದ್ದರಿಂದ ಇದನ್ನು ನಿವಾರಿಸಲು ಆಗುವುದಿಲ್ಲ. ಮೂಲ: ಪೋರ್ಟಲ್ ತಂಡ