ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ:- ಸ್ತ್ರೀ ಶಕ್ತಿ ಅಡಿ :- ಸುತ್ತು ನಿಧಿ ರೂ. 5000/- ಗಳು ಮತ್ತು ತರಬೇತಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಹ ಧನ ರೂ. 75000/-ದಿಂದ 1 ಲಕ್ಷ ರೂಪಾಯಿಗಳ ವರೆಗಿನ ಉಳಿತಯಕ್ಕೆ 15000/- ಮತ್ತು ರೂ. 1 ಲಕ್ಷಕ್ಕಿಂತ ಮೇಪಟ್ಟ ಉಳಿತಾಯಕ್ಕೆ ರೂ. 20,000/- ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಸೌಲಭ್ಯ, ಪಾಶು ಸಂಗೋಪನ ಇಲಾಖೆಯಿಂದ ಗಿರಿರಾಜ ಕೋಳಿ ಭಾಗ್ಯಲಕ್ಷ್ಮಿ ಯೋಜನೆ :- ಸಮಾಜದಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚಿಸಲು ಮತ್ತು ಹೆಣ್ಣು ಮಗುವಿನ ಮರಣ ತಡೆಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಅಡಿ ರೂ. 1 ಲಕ್ಷ ಗಳ ಠೇವಣಿ ಸರ್ಟಿಫಿಕೆಟ್ ನೀಡಲಾಗುವುದು. ವಿಧುವೆಯರಿಗೆ ಸಹಾಯಧನ ಯೋಜನೆ:- ನಿರ್ಗತಿಕ ವಿಧವೆ ಹಾಗೂ ದೇವದಾಸಿಯರ ವಿವಾಹಕ್ಕೆ ರೂ. 10.000 ಸಹಾಯಧನ ಅದರಲ್ಲಿ ರೂ. 5000/-ಗಳು ವಿವಾಹದ ಖರ್ಚುಗಳಿಗೆ ಮತ್ತು ರೂ. 5000/- ಗಳು ಮಹಿಳೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಉಳಿತಾಯ ಠೇವಣಿ. ಅಂಗನ ವಾಡಿ ಯೋಜನೆ ಈ ಯೋಜನೆ ಅಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಗರ್ಭಿಣಿ ಸ್ತ್ರೀಯರಿಗೆ ಪೋಷಕಾಂಶ ಒದಗಿಸುವುದು. ಹೆಚ್ಚಿನ ಸಂಪರ್ಕಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಛೇರಿಯಲ್ಲಿ ಸಂಪರ್ಕಿಸುವುದು. ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ