ಗುರಿ ಈ ಯೋಜನೆಯಡಿಯಲ್ಲಿ ವಾರ್ಷಿಕವಾಗಿ ನಿಗದಿಪಡಿಸಿದ ಗುರಿ ಇರುವುದಿಲ್ಲ. ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಗುರಿಯು ಇರುತ್ತದೆ. 2015-16ನೇ ಸಾಲಿನಲ್ಲಿ 22 ಪ್ರಕರಣಗಳು ಬಾಕಿ ಇದ್ದು , ಹಂತ ಹಂತವಾಗಿ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ. ಕಾರ್ಯಕ್ರಮ 1 “Prohibition of Employment as Manual Scavengers Act 2013” Rule 5,6,7,9 ರನ್ವಯ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಇಂತಹ ಪ್ರಕರಣಗಳಲ್ಲಿ ಆಪಾದಿತ ಸಫಾಯಿ ಕರ್ಮಚಾರಿ ಗಳಿಗೆ ಪುನರ್ವಸತಿ ಯನ್ನು ಕಲ್ಪಿಸುವ ಯೋಜನೆ ಇದಾಗಿರುತ್ತದೆ. ಅರ್ಹತೆ ಈ ಯೋಜನೆಯಡಿಯಲ್ಲಿ ಸವಲತ್ತು ಪಡೆಯುವ ಫಲಾನುಭವಿಯು ಸಫಾಯಿ ಕರ್ಮಚಾರಿ ಗಳಾಗಿರತಕ್ಕದ್ದು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅಥವಾ ಮಾನ್ಯತೆ ಪಡೆದ ಪ್ರಾಧಿಕಾರದಿಂದ ಸಂಖ್ಯೆಯುಳ್ಳ ಗುರುತಿನ ಚೀಟಿ ಹೊಂದಿರತಕ್ಕದ್ದು. PEMS Act 2013 ರ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪುನರ್ವಸತಿ ಗಾಗಿ ಅರ್ಹತೆ ಇರತಕ್ಕದ್ದು. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪುನರ್ವಸತಿ ಗಾಗಿ ಅರ್ಹತೆ ಇರತಕ್ಕದ್ದು. ಫಲಾನುಭಾವಿಯ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದು ರೂ. 40,000/- ಗಳ ನಗದನ್ನು ಠೇವಣಿ ಇಡಲಾಗುವುದು. ಈ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ಅಥವಾ NSKFDC ನವದೆಹಲಿ ಇವರು ಭರಿಸತಕ್ಕದ್ದು. ಅವಲಂಬಿತರ ಮಕ್ಕಳಿಗೆ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವವರಿಗೆ ರೂ. 2,150/- ವಿದ್ಯಾರ್ಥಿ ವೇತನ ಮಾಸಿಕವಾಗಿ ಸಮಾಜ ಕಲ್ಯಾಣ ಇಲಾಖೆ ,ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಲೆಕ್ಕ ಶೀರ್ಷಿಕೆ ಯಿಂದ ಪಾವತಿಸತಕ್ಕದ್ದು. ಮನೆ ಅಥವಾ ನಿವೇಶನ ಇಲ್ಲದವರಿಗೆ ಆದ್ಯತೆ ಮೇರೆಗೆ ಸ್ಥಳೀಯ ಪ್ರಾಧಿಕಾರಿಗಳು ಅಥವಾ ಯಾವುದೇ ಅಭಿವೃದ್ಧಿ ಪ್ರಾಧಿಕಾರಿಗಳು ಮನೆ ಅಥವಾ ನಿವೇಶನ ಒದಗಿಸತಕ್ಕದ್ದು. ಡಾ||ಬಿ.ಆರ್. ಅಂಬೇಡ್ಕರ್ ನಿಗಮದಿಂದ “ಸಫಾಯಿ ಕರ್ಮಚಾರಿ ಗಳ ಪುನರ್ವಸತಿ “(SKRP) ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ನೇರ ಸಾಲ ಅಡಿಯಲ್ಲಿ ವ್ಯಾಪಾರ ಮತ್ತು ಬಾಡಿಗೆ ಟ್ಯಾಕ್ಸಿ ಓಡಿಸಲು ಸಾಲ ಮತ್ತು ಸಹಾಯ ಧನ ನೆರವು ನೀಡುವುದು. ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. 5 ರಿಂದ 12ನೇ ತರಗತಿಯವರೆಗಿನ ವ್ಯಾಸಂಗಕ್ಕಾಗಿ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ ,ಏಕಲವ್ಯ , ನವೋದಯ ಮುಂತಾದ ಪ್ರತಿಷ್ಟಿತ ಶಾಲೆಗಳಲ್ಲಿ ಉಚಿತ ಪ್ರವೇಶ ನೀಡಬೇಕಾಗುತ್ತದೆ. ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು