ಪೂರಕ ಪೌಷ್ಠಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ವೆಚ್ಚ ಮಾಡುವ ಮೊತ್ತದ ಶೇ 50% ಕೇಂದ್ರ ಸಕರ್ಾರವು ಮರುಪಾವತಿಸುತ್ತದೆ. ಫಲಾನುಭವಿಗಳು ಪ್ರತಿ ದಿನ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಪೂರಕವಾಗಿ ಪರಿಷ್ಕೃತ ಮಾರ್ಗಸೂಚಿಯಂತೆ 6ತಿಂಗಳಿಂದ - 6 ವರ್ಷದ ಮಕ್ಕಳಿಗೆ 500 ಕ್ಯಾಲೊರಿಗಳನ್ನು, 12-15 ಗ್ರಾಂ ಪ್ರೋಟಿನ್, ಗರ್ಭಿಣಿ / ಬಾಣಂತಿ/ಪ್ರಾಯಪೂರ್ವ ಬಾಲಕಿಯರಿಗೆ 600 ಕ್ಯಾಲೊರಿಗಳನ್ನು ಮತ್ತು 18-20 ಗ್ರಾಂ ಪ್ರೋಟಿನ್ ಅಲ್ಲದೆ ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿಗಳನ್ನು ಮತ್ತು 20-25 ಗ್ರಾಂ ಪ್ರೋಟಿನ್ ನೀಡುವ ಉದ್ದೇಶದಿಂದ ಯೋಜನೆಯಡಿ ಪೂರಕ ಪೌಷ್ಠಿಕ ಅಹಾರ ನೀಡಲಾಗುತ್ತಿದೆ. ಯೋಜನೆಯ ಮಾರ್ಗಸೂಚಿಯಂತೆ ವರ್ಷದಲ್ಲಿ 300 ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಸಾಮಾನ್ಯ ಆರೋಗ್ಯವಂತ ಮಕ್ಕಳಿಗೆ ಪ್ರತಿ ದಿನ ರೂ. 4.60 /- ರ ಘಟಕ ವೆಚ್ಚದಂತೆ,ಗರ್ಭಿಣಿ , ಬಾಣಂತಿಯರಿಗೆ ಹಾಗೂ ಪ್ರಾಯಪೂರ್ವ ಬಾಲಕಿಯರಿಗೆ ಘಟಕ ವೆಚ್ಚ ರೂ.5.75/- ರಂತೆ ಮತ್ತು ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ರೂ. 6.90 /- ರ ಘಟಕ ವೆಚ್ಚದಲ್ಲಿ ಆಹಾರವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ಇಲಾಖೆಯ ಸಹಾಯದೊಂದಿಗೆ ಕಾರ್ಯನಿರತವಾಗಿದ್ದು, ಇದರಲ್ಲಿ 22-32 ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು ವಿಧವೆಯರು, ವಿಕಲಚೇತನರು, ಪರಿತ್ಯಕ್ತ ಮಹಿಳೆಯರು, ಫಲಾನುಭವಿಗಳ ತಾಯಂದಿರು, ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಆಗಿರುತ್ತಾರೆ. ಈ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ತಿನ್ನಲು ಸಿದ್ಧಪಡಿಸಿದ ಆಹಾರ/ಬೇಯಿಸಲು ಸಿದ್ಧವಿರುವ ಆಹಾರ ಪದಾರ್ಥಗಳನ್ನು ವಾರದ 6 ದಿನಗಳು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರತ ಒಖಕಖಿಅ ಮಹಿಳಾ ಪೂರಕ ಪೌಷ್ಠಿಕ ಕೇಂದ್ರಗಳ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯ ಜಿಲ್ಲಾದಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಮೆನು ನಿಗದಿ ಪಡಿಸಲಾಗುವುದು, ಉದಾ: 6ತಿ - 3 ವರ್ಷ - ಗೋದಿ ರವೆ, ಅಕ್ಕೆ, ಹೆಸರಕಾಳು ಕಿಚಡಿ, ರವೆ ಪಾಯಸ 3-6 ವರ್ಷ - ಚಿತ್ರನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಅನ್ನ ಸಾಂಬರ್ ಗರ್ಭಿಣಿ , ಬಾಣಂತಿ, ಪ್ರಾಯಪೂರ್ವ - ಮಲ್ಟಿಗ್ರೇನ್ ಗೋದಿ ಹಿಟ್ಟು, ಚಿತ್ರನ್ನ, ಹೆಸರುಕಾಳು, ಬೆಲ್ಲ, ಗೋದಿ, ಬಾಲಕಿಯರು ಅನ್ನ ಸಾಂಬರ್