ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಕೆಳಕಂಡ ಕಾರ್ಯಕ್ರಮಗಳನ್ನು ಪ್ರಸ್ತುತ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅ) ತರಬೇತಿ ಕಾರ್ಯಕ್ರಮಗಳು ಅರಿವು ಮೂಡಿಸುವ ಕಾರ್ಯಕ್ರಮಗಳು ಕೌಶಲ್ಯಾಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರ ಚರ್ಮ ಕುಶಲಕರ್ಮಿ ಗಳಿಗೆ ಅಧ್ಯಯನ ಪ್ರವಾಸ ಏರ್ಪಡಿಸುವುದು. ಕುಶಲಕರ್ಮಿ ಗಳ ಸ್ವ-ಸಹಾಯ ಗುಂಪುಗಳಿಗೆ ನೇರ ಮಾರಾಟ ಮಳಿಗೆ ಒದಗಿಸುವುದು. ಮಹಿಳಾ ಕುಶಲಕರ್ಮಿ ಗಳಿಗೆ ಉದ್ಯಮ ಶೀಲತೆ ಮತ್ತು ಕೌಶಲ್ಯ ವೃದ್ಧಿ ಆ) ಸ್ವಯಂ ಉದ್ಯೋಗ ನಗರ ಪ್ರದೇಶಗಳಲ್ಲಿ ಆಧುನಿಕ ಮಾರಾಟ ಕುಠೀರ ಒದಗಿಸುವುದು. ಗ್ರಾಮ/ಪಟ್ಟಣ/ನಗರ ಪ್ರದೇಶದ ಕುಶಲಕರ್ಮಿ ಗಳಿಗೆ ಚರ್ಮಕಾರರ ಕುಠೀರ ಒದಗಿಸುವುದು. ಕುಶಲಕರ್ಮಿ ಗಳು ತಯಾರಿಸಿದ ಉತ್ಪನ್ನಗಳನ್ನುಬ ಖರೀದಿಸುವ ಯೋಜನೆ ಚರ್ಮ ಕುಶಲಕರ್ಮಿ ಗಳು ಸಂತೆಗೆ ಸಾಮಾಗ್ರಿ/ಉತ್ಪನ್ನಗಳನ್ನು ಕೊಂಡೊಯ್ಯಲು ಸಂಚಾರಿ ವಾಹನ ಒದಗಿಸುವುದು. ಸ್ವಯಂ ಉದ್ಯೋಗಕ್ಕೆ ದುಡಿಮೆ ಬಂಡವಾಳ ಸಾಲ ಯೋಜನೆ. ಇ) ವಾಣಿಜ್ಯ ಉತ್ತೇಜನ ಹಾಲಿ ಮಾರಾಟ ಮಳಿಗೆಗಳ ಉನ್ನತೀಕರಣ ಕುಶಲಕರ್ಮಿ ಗಳ ಉತ್ಪನ್ನಗಳ ಮಾರಾಟದ ಮೇಲೆ ರಿಯಾಯಿತಿ ನೀಡುವುದು. ರಾಜ್ಯ ಮಟ್ಟದ ಚರ್ಮ ಕರಕುಶಲ ವಸ್ತು ಪ್ರದಶನ ಮತ್ತು ಮಾರಾಟ ಪ್ರಚಾರ ಮತ್ತು ಜಾಹಿರಾತು ಈ) ಮೂಲಭೂತ ಸೌಕಯಗಳು ವಸತಿ ಮತ್ತು ಕಾರ್ಯಗಾರ ನಿರ್ಮಾಣ ಯೋಜನೆ ವಸತಿ ಕಾರ್ಯಗಾರ ನಿರ್ಮಿಸಲು ಜಮೀನು ಖರೀದಿಸುವುದು. ವಸಂತನಗರದ ಬಿಬಿಎಂಪಿ ನಿವೇಶನದಲ್ಲಿ ಜಗಜೀವನರಾಂ ಚರ್ಮೋದ್ಯೋಗ ಕೌಶಲ್ಯ ಭವನ ನಿರ್ಮಾಣ . ಮೈಸೂರಿನಲ್ಲಿ ಜಗಜೀವನರಾಂ ಲೆದರ್ ಕಾಂಪ್ಲೆಕ್ಸ್ ನಿರ್ಮಾಣ ನಿಗಮದ ಜಮೀನುಗಳಿಗೆ ಆವರಣ ಗೋಡೆ ನಿರ್ಮಾಣ ಜಿಲ್ಲಾ ಕೇಂದ್ರಗಳಲ್ಲಿ ಮಳಿಗೆ ಮತ್ತು ಜಿಲ್ಲಾ ಕಛೇರಿ ತೆರೆಯುವುದು. ಲಿಡ್ಕರ್ ಸಂಕೀರ್ಣಗಳಲ್ಲಿ ಸಾಂಸ್ಕ್ರತಿಕ ಸಮುದಾಯ ಭವನ ನಿರ್ಮಾಣ ನಿಗಮದ ಜಮೀನುಗಳನ್ನು ನೊಂದಾವಣಿ ಮಾಡಿಕೊಳ್ಳುವುದು. ಉ) ಕಲ್ಯಾಣ ಯೋಜನೆಗಳು ವಿಮಾ ಸೌಲಭ್ಯ ಒದಗಿಸುವ ಯೋಜನೆ. ಚರ್ಮ ಕುಶಲಕರ್ಮಿ ಗಳು ಮರಣ ಹೊಂದಿದಾಗ ಅಂತ್ಯ ಸಂಸ್ಕಾರದ ವೆಚ್ಚಕ್ಕಾಗಿ ಧನ ಸಹಾಯ ಒದಗಿಸುವುದು. ಊ) ನಿರ್ವಹಣಾ ವೆಚ್ಚ ನಿರ್ವಹಣಾ ವೆಚ್ಚ ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು